Advertisement

ಬಫರ್‌ ಝೋನ್‌ಗೆ ವಿರೋಧ

06:37 PM Oct 16, 2020 | Suhan S |

ಬಾಳೆಹೊನ್ನೂರು: ಮಲೆನಾಡಿನ ಜನಜೀವನಕ್ಕೆ ಮಾರಕವಾಗುವಂತಹ ಅಂಶಗಳುಳ್ಳ ಭದ್ರಾ ಹುಲಿ ಮೀಸಲು ಬಫರ್‌ ಝೋನ್‌ ಮತ್ತು ಪರಿಸರ ಸೂಕ್ಷ್ಮ ವಲಯದ ಹುಲಿಯೋಜನೆ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಪಕ್ಷಾತೀತವಾಗಿ ನ.ರಾ. ಪುರ ತಾಲೂಕು ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ. ಉಮೇಶ್‌ ಕಲ್ಮಕ್ಕಿ ತಿಳಿಸಿದರು.

Advertisement

ಗುರುವಾರ ಪಟ್ಟಣದಲ್ಲಿ ನಾಗರಿಕ ವಿರೋಧಿ ಅರಣ್ಯ ಯೋಜನೆಗಳ ವಿರುದ್ಧ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಪಕ್ಷಾತೀತವಾಗಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ನರಸಿಂಹರಾಜಪುರ ತಾಲೂಕು ಬಂದ್‌ ಮತ್ತು ಬೃಹತ್‌ ಜಾಥಾ ಅಂಗವಾಗಿ ಬಾಳೆಹೊನ್ನೂರು ಜೇಸಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಘೋಷಿಸಲು ಹೊರಟಿರುವ ವ್ಯಾಪ್ತಿ ಅವೈಜ್ಞಾನಿಕವಾಗಿದ್ದು, ಹಿಂದೆ ಘೋಷಿಸಿದ ಮೂಲ ಯೋಜನೆಗಿಂತ ಈಗ ಘೋಷಿಸಲು ಹೊರಟಿರುವಯೋಜನೆಯ ವ್ಯಾಪ್ತಿ ಅಧಿ ಕವಾಗಿದೆ ಎಂದರು.ಬಾಳೆಹೊನ್ನೂರು ಹೊಬಳಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಮಾತನಾಡಿ, ಬಾಳೆಹೊನ್ನೂರು ಪಟ್ಟಣದ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ಈ ಬೃಹತ್‌ ಪ್ರತಿಭಟನೆಗೆ ಬೆಂಬಲನೀಡಲಾಗಿದೆ ಎಂದರು. ಭದ್ರಾಹುಲಿ ಯೋಜನೆ ವಿರೋಧಿಸಿ ಕೆಲವುಕೃಷಿಕರು ಪಟ್ಟಣಕ್ಕೆ ಬಂದಿದ್ದು ಮಾಹಿತಿಕೊರತೆಯಿಂದಾಗಿ ಎನ್‌.ಆರ್‌. ಪುರಕ್ಕೆ ತೆರಳಲು ಸಾಧ್ಯವಾಗದೇ ಬಾಳೆಹೊನ್ನೂರು ಪಟ್ಟಣದಲ್ಲೇ ಬೃಹತ್‌ ಜಾಥಾ ನಡೆಯುತ್ತದೆ ಎಂದು ಭಾವಿಸಿದ್ದರು.

ಆದರೆ ಬಾಳೆಹೊನ್ನೂರು ಪಟ್ಟಣದಲ್ಲಿ ಜಾಥಾ ಇಲ್ಲದಿರುವ ಹಿನ್ನೆಲೆಯಲ್ಲಿ ನೂರಾರು ರೈತರು ತಮ್ಮ ಗ್ರಾಮಕ್ಕೆ ವಾಪಸ್‌ ತೆರಳಿದರು. ಪ್ರತಿಭಟನೆಯಲ್ಲಿ ಕೆ.ಟಿ. ವೆಂಕಟೇಶ್‌, ದರ್ಮೇಗೌಡ, ಎಸ್‌.ಎಸ್‌. ಜಗದೀಶ್‌ ಗೌಡ, ಬಿ. ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ರವಿಚಂದ್ರ, ಮಹಮ್ಮದ್‌ ಜುಹೇಬ್‌, ಜಾನ್‌ ಡಿಸೋಜ, ಗ್ರಾಪಂಸದಸ್ಯರಾದ ಶ್ರೀನಿವಾಸ್‌, ಇಬ್ರಾಹಿಂ ಶಾಫಿ, ಕೃಷಿಕ ಮಹಮ್ಮದ್‌ ಇಲಿಯಾಸ್‌, ಕೌಶಿಕ್‌ಗೌಡ, ಜಗದೀಶ್ಚಂದ್ರ, ಶಶಾಂಕ ಇತರರು ಇದ್ದರು.

ಕಾಯ್ದೆ ತಿದ್ದುಪಡಿಯಿಂದ ಅನುಕೂಲ :

Advertisement

ಮೂಡಿಗೆರೆ: ರೈತರ ಆದಾಯ ದ್ವಿಗುಣಗೊಳಿಸಿ ಭಾರತದ ಅರ್ಥವ್ಯವಸ್ಥೆಗೆ ವೇಗ ನೀಡುವುದಕ್ಕೆ ಕೇಂದ್ರ ಸರಕಾರ ಕೃಷಿ ಮಸೂದೆಗಳನ್ನು ಜಾರಿ ಮಾಡುತ್ತಿದೆ. ಆದರೆ ಓಟಿನ ರಾಜಕಾರಣಕ್ಕಾಗಿ ವಿರೋಧ ಪಕ್ಷಗಳು ಮಸೂದೆ ವಿರುದ್ಧ ನಿಂತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಹೇಳಿದರು.

ಬುಧವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ರೈತ ಮೋರ್ಚಾದಿಂದ ಏರ್ಪಡಿಸಿದ್ದ ಕೃಷಿ ಮಸೂದೆಗಳ ಮಾಹಿತಿ, ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ವಿಶ್ವವೇ ಗೌರವಿಸುತ್ತಿದೆ. ದೇಶದ ರೈತರನ್ನು ಸ್ವಾವಲಂಬಿಗೊಳಿಸುವ ಸಲುವಾಗಿ ರೈತ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಮತ ಬ್ಯಾಂಕ್‌ ಕಳೆದುಕೊಳ್ಳುವಆತಂಕದಲ್ಲಿ ಸುಳ್ಳು ಸುದ್ದಿ ಹರಡಿಸುತ್ತಾ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ತಾಪಂ ಅಧ್ಯಕ್ಷ ಕೆ.ಸಿ. ರತನ್‌,ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಸಿ. ರತನ್‌,ಮುಖಂಡರಾದ ರಾಜಶೇಖರ್‌, ಹಳಸೆ ಶಿವಣ್ಣ, ಭರತ್‌ ಬಾಳೂರು, ಮನೋಜ್‌ ಹಳೆಕೋಟೆ, ಜಯಂತ್‌ ಬಿದರಹಳ್ಳಿ, ವಿ.ಕೆ. ಶಿವೇಗೌಡ, ಅನುಕುಮಾರ್‌, ಭರತ್‌ ಕನ್ನಹಳ್ಳಿ, ದೀಪಕ್‌ ದೊಡ್ಡಯ್ಯ, ನಾಗಭೂಷಣ್‌, ಸರೋಜ ಸುರೇಂದ್ರ, ಶಾಂತಲಾ ನಾಗೇಶ್‌, ಶರತ್‌ ಹೊಸಳ್ಳಿ, ಗಜೇಂದ್ರ ಕೊಟ್ಟಿಗೆಹಾರ, ಶಶಿಧರ್‌ ಜಾವಳಿ,ಪಂಚಾಕ್ಷರಿ, ಚಂದ್ರೇಶ್‌ ಮಗ್ಗಲಮಕ್ಕಿ, ನಯನ ತಳವಾರ, ಉತ್ತಮ್‌, ಸಂದರ್ಶ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next