Advertisement

ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ

07:18 AM Jun 11, 2019 | Suhan S |

ಇಳಕಲ್ಲ: ರೈತರಿಗೆ ಮಾರಕವಾಗಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಇಳಕಲ್ಲ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ವ್ಯಾಸರಾಯ ದೇಶಮುಖ ಅವರಿಗೆ ಮನವಿ ಸಲ್ಲಿಸಿದರು.

Advertisement

ಇಲ್ಲಿಯ ಎಸ್‌.ಆರ್‌. ಕಂಠಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ತುಂಬದ ಮಾತನಾಡಿ, ಯುಪಿಎ ಸರಕಾರದ ಅವಧಿಯಲ್ಲಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಿದ್ದರು. ಅದರಲ್ಲಿ ರೈತರ ಒಪ್ಪಿಗೆ ಇಲ್ಲದೇ ಯಾವ ಕಾರಣಕ್ಕೂ ಭೂ ಸ್ವಾಧೀನ ಪಡೆದುಕೊಳ್ಳುವಂತಿಲ್ಲ. ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆಯ ದರದ ನಾಲ್ಕು ಪಟ್ಟು ಕೊಡಬೇಕು. ನಗರ ಪ್ರದೇಶಕ್ಕೆ ಒಳಪಟ್ಟಿದ್ದರೇ ಮಾರುಕಟ್ಟೆ ದರದ ಎರಡು ಪಟ್ಟು ಕೊಡಬೇಕು. ಭೂಸ್ವಾಧೀನವು ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿ ರಬೇಕು ಎಂದು ಕಾಯ್ದೆಯಲ್ಲಿ ಅಳವಡಿ ಸಲಾಗಿತ್ತು. ಆದರೆ ಇದೀಗ ರಾಜ್ಯ ಸರಕಾರ ಭೂಗಳ್ಳರ ಒತ್ತಡಕ್ಕೆ ಮಣಿದು ಮತ್ತೆ ಕಾಯ್ದೆ ತಿದ್ದುಪಡಿ ಮಾಡಿದೆ. ರಾಜ್ಯದ ಕಂದಾಯ ಸಚಿವರು ರೈತರ ಹಿತ ಕಾಪಾಡುವ ಬದಲು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಅವೈಜ್ಞಾನಿಕ ಎಂದು ಟೀಕಿಸಿದರು.

ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ ಶ್ರೀ ಪ್ರತಿಭಟನೆಗೆ ಚಾಲನೆ ನೀಡಿದರು. ನಂತರ ಕಂಠಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆದ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾರತಿ ಶೆಟ್ಟರ, ಸಚಿನ ಚೇಗೂರ, ಶ್ಯಾಮಸುಂದರ ತಲವಾರ, ಸಾಗರ ನಗರಿ, ಎಚ್.ಎಂ. ಚೌಧರಿ, ಮಲ್ಲಿಕಾರ್ಜುನಗೌಡ ಪಾಟೀಲ, ಬಸನಗೌಡ ಪಾಟೀಲ, ಮಾಮಲ್ಲಪ್ಪ ಲವಳಸರ, ಮಹಾಂತೇಶ ಕಾಲಗಗ್ಗರಿ, ಬಸಯ್ಯ ಮೇಣೆದಾಳ, ವಿಜಯಕುಮಾರ ಪಾಟೀಲ, ಮಹಾಂತೇಶ ಐಹೋಳ್ಳಿ, ರುದ್ರಪ್ಪ ಶೀಲವಂತರ, ರಹೆಮಾನ ದೊಡ್ಡಮನಿ, ಲಕ್ಷ್ಮಣ ಮಾದಾರ, ಸಣ್ಣ ನೀಲಪ್ಪ ಕುಂಬಾರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next