Advertisement

ಅತ್ಯಾಚಾರಿಗೆ ಗಲ್ಲು ವಿಧಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ

11:07 PM Oct 19, 2022 | Team Udayavani |

ಮಂಡ್ಯ/ಮಳವಳ್ಳಿ: ಟ್ಯೂಷನ್‌ ಸೆಂಟರ್‌ ಕೆಲಸಗಾರನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಪಟ್ಟಣದ 10 ವರ್ಷದ ಬಾಲಕಿ ಮನೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.

Advertisement

ಬಳಿಕ ಮಾತನಾಡಿದ ಅವರು, ಮಗುವಿನ ಮೇಲೆ ಇಂಥ ಕೃತ್ಯ ಎಸಗಿರುವಾತನಿಗೆ ಗಲ್ಲು ವಿಧಿಸಬೇಕು ಎಂದು ಆಗ್ರಹಿಸಿದರು.

3 ಲಕ್ಷ ರೂ. ಪರಿಹಾರ
ಸಿದ್ದರಾಮಯ್ಯ 2 ಲಕ್ಷ ರೂ., ಕೆಪಿಸಿಸಿ ಉಪಾಧ್ಯಕ್ಷ ಎನ್‌. ಚಲುವರಾಯ ಸ್ವಾಮಿ ಹಾಗೂ ಪರಿಷತ್‌ ಸದಸ್ಯ ಮರಿತಿಬ್ಬೇ ಗೌಡ ತಲಾ 50 ಸಾ. ರೂ. ಪರಿಹಾರ ನೀಡಿದರು.

ಜಮೀರ್‌ನಿಂದ 5 ಲ. ರೂ.
ಬಾಲಕಿ ಮನೆಗೆ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿ ದರು. ಬಳಿಕ ಮಾತನಾಡಿದ ಅವರು, ಮಗುವಿನ ಮೇಲೆ ರಾಕ್ಷಸೀಯ ಕೃತ್ಯ ಎಸಗಿರುವಾತನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಸರಕಾರದ 10 ಲ. ರೂ. ಪರಿಹಾರ ವಿತರಣೆ
ಬಾಲಕಿಯ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾಗಿರುವ 10 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ವಿತರಿಸಿದರು. ಬಾಲಕಿಯ ಮನೆಗೆ ಶಾಸಕ ಡಾ| ಕೆ. ಅನ್ನದಾನಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಜತೆಗೆ ಭೇಟಿ ನೀಡಿ ಅವರು ಚೆಕ್‌ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಪುಟ್ಟ ಕಂದಮ್ಮನಿಗೆ ನ್ಯಾಯ ಒದಗಿಸಲು ಸಿಎಂ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಸರಕಾರ ಕೊನೆಯವರೆಗೂ ನೊಂದ ಕುಟುಂಬದೊಂದಿಗೆ ಇರಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next