Advertisement
78 ವರ್ಷದ ಕರ್ನಾಟಕದ ಹಿರಿಯ ರಾಜಕಾರಣಿ ಯಾದ ಡಾ| ಮಲ್ಲಿಕಾರ್ಜುನ ಖರ್ಗೆ ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದವರು. ತಂದೆ ಮಾಪಣ್ಣ ಕಲಬುರಗಿ ನಗರದ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ಆದ್ದರಿಂದ ಖರ್ಗೆ ತಮ್ಮ ಕರ್ಮಭೂಮಿ ಮತ್ತು ತವರೂರಾಗಿ ಕಲಬುರಗಿಯನ್ನೇಆಯ್ಕೆ ಮಾಡಿಕೊಂಡು ಇಲ್ಲಿಯೇ ಉಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ವಿಧಾನಸಭೆ ವಿರೋಧ ನಾಯಕರಾಗಿಯೂ ಕೆಲಸ ಮಾಡಿದ್ದಾರೆ.
Related Articles
ಕಾರ್ಯದರ್ಶಿಯಾಗಿ, ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿಯೂ ದುಡಿದರು.
Advertisement
ಡಾ| ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದಲ್ಲಿ ಸಂಸದರಾದ ಅವರು ಮೊದಲ ಬಾರಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ, ನಂತರಮಹತ್ವದ ರೈಲ್ವೆ ಖಾತೆ ಮತ್ತು ಹೆಚ್ಚುವರಿಯಾಗಿ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆಗಳನ್ನು ನಿರ್ವಹಿಸಿದರು. 2014ರಲ್ಲಿ ದೇಶದಲ್ಲಿ ನರೇಂದ್ರ ಮೋದಿ ಅಲೆ ನಡುವೆಯೂ ಎರಡನೇ ಬಾರಿಗೆ ಸಂಸತ್ ಗೆ ಆಯ್ಕೆಯಾಗಿ ಸೋಲಿಲ್ಲದ ಸರ್ದಾರ ಎಂದೇ ಹೆಸರುವಾಸಿಯಾದರು. ಮಾತಿನೇಟು ಕೊಡುವ ಚಾಣಾಕ್ಷ: 2014ರಿಂದ 2019ರ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿ ತಮ್ಮ ವಾಗ್ಝರಿ ಮೂಲಕ ದೇಶದ ಗಮನ ಸೆಳೆದರು. ಕಾಂಗ್ರೆಸ್‌ಗೆ ಶೇ.10ಕ್ಕಿಂತಲೂ ಕಡಿಮೆ ಸ್ಥಾನ ಬಂದ ಕಾರಣ ಅಧಿಕೃತ ಪ್ರತಿಪಕ್ಷದ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಪಕ್ಷದ ಸಂಸದೀಯ ನಾಯಕರಾಗಿ ಖರ್ಗೆ ಅವರು, ಲೋಕಸಭೆಯಲ್ಲಿ ದಾಖಲೆ ಸಮೇತವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದರು. ಕನ್ನಡದಷ್ಟೇ ಸರಾಗವಾಗಿ ಹಿಂದಿ, ಉರ್ದು ಮಾತನಾಡುವ ಅವರು,ಇಂಗ್ಲಿಷ್ ಮೇಲೂ ಬಿಗಿಹಿಡಿತ ಹೊಂದಿದ್ದಾರೆ. ತಮ್ಮ ಮೊನಚು ಮಾತುಗಳ ಮೂಲಕವೇ ಕೇಂದ್ರ ಸರ್ಕಾರದ ವಿರುದ್ಧ ದಾಳಿ ಮಾಡಿ ಸೈ ಎನಿಸಿಕೊಂಡಿದ್ದರು. ಇಷ್ಟು ಸುಧೀರ್ಘ ರಾಜಕೀಯ ಹಿನ್ನೆಲೆ ಹೊಂದಿರುವ ಖರ್ಗೆ, 2019ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದರು. ಲೋಕಸಭೆಯ
ಚರ್ಚೆಯೊಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖರ್ಗೆ ಅವರನ್ನು ಉದ್ದೇಶಿಸಿ “ನೀವು ಮುಂದೆ ಈ ಸ್ಥಳದಲ್ಲಿ ಇರುತ್ತಿರೋ, ಇಲ್ಲವೋ ಗೊತ್ತಿಲ್ಲ’ ಎಂದು
ಛೇಡಿಸಿದ್ದರು. ಹೀಗಾಗಿಯೋ ಏನೋ, ಖರ್ಗೆ ಗೆಲ್ಲೇಬೇಕೆಂಬ ಛಲದಿಂದ ಕಾಲಿಗೆ ಚಕ್ರ ಕಟ್ಟಿಕೊಂಡದಂತೆ ಕ್ಷೇತ್ರದ ತುಂಬಾ ಸುತ್ತಿದರು. ಆದರೆ, ಬಿಜೆಪಿಯಿಂದ
ಸ್ಪರ್ಧಿಸಿದ್ದ ಡಾ|ಉಮೇಶ ಜಾಧವ ಎದುರು ಖರ್ಗೆ ಪರಾಭವಗೊಂಡರು. ಆದರೂ, ಖರ್ಗೆ ಅವರ ಪಕ್ಷ ನಿಷ್ಠೆಯನ್ನು ಕಾಂಗ್ರೆಸ್ ಹೈಕಮಾಂಡ್ ಗುರುತಿಸಿತ್ತು. ಕಳೆದ ಜೂನ್‌ನಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ
ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೂ ಯಾವುದೇ ಮುನ್ಸೂಚನೆ ನೀಡದೆ ಖರ್ಗೆ ಅವರನ್ನು ಆಯ್ಕೆ ಮಾಡಿತ್ತು. ಆಗ ಖರ್ಗೆ ಅವರ ಪಕ್ಷ ನಿಷ್ಠೆಗೆ
ಒಲಿದ ಗೆಲುವು ಎಂದೇ ವಿಶ್ಲೇಷಿಸಲಾಗಿತ್ತು. ಈಗ ಅದೇ ಪಕ್ಷ ನಿಷ್ಠೆಗೆ ರಾಜ್ಯಸಭೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿ ಸೋನಿಯಾಗಾಂಧಿ ಅವರು ರಾಜ್ಯಸಭೆ ಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ಸೋಮವಾರ ಅಥವಾ ಮಂಗಳವಾರ ಅಧಿಕೃತವಾಗಿ ಪ್ರಕಟಣೆಯಾಗಬಹುದು. ನಂತರ ನಾನು ಮಾತನಾಡುತ್ತೇನೆ. ಪಕ್ಷ ವಹಿಸಿದ ಹೊಣೆಗಾರಿಕೆ ನಿರ್ವಹಣೆ ಮಾಡುವುದಷ್ಟೇ ನನ್ನ ಕೆಲಸ.
ಡಾ| ಮಲ್ಲಿಕಾರ್ಜುನ ಖರ್ಗೆ ಇಡೀ ದೇಶದ ಜನತೆ ಪ್ರಧಾನಿ ಮೋದಿ ದುರಾಡಳಿತ ಹಾಗೂ ಜನವಿರೋಧಿ ನೀತಿ ವಿರುದ್ಧ ಸಿಡಿದೆದ್ದಿದ್ದಾರೆ. ಎಲ್ಲರ ಧ್ವನಿಯಾಗಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ತಮ್ಮ ರಾಜಕೀಯ ಜೀವಮಾನದುದ್ದಕ್ಕೂ ಸವಾಲುಗಳನ್ನೇ ಎದುರಿಸಿಕೊಂಡು ಬಂದಿರುವ ಅವರು ಪಕ್ಷ ನೀಡಿರುವ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ.
ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ