ಕಲಬುರಗಿ: ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಗುರುವಾರ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದರು. ರೋಗಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಮತ್ತು ನಿರೀಲ್ಲದೆ ಆಗುತ್ತಿರುವ ತೊಂದರೆಗಳನ್ನು ಆಲಿಸಿದರು.
ಅಲ್ಲದೆ ಜಯದೇವ ಮುಖ್ಯಸ್ಥರನ್ನು ತರಾಟಗೆ ತೆಗೆದುಕೊಂಡ ಅವರು, ನೀರಿಲ್ಲದೆ ಇದ್ದರೆ ಹೇಗೆ ಆಸ್ಪತ್ರೆ ನಡೆಸುತ್ತಿದ್ದಿರಿ. ಸ್ವಲ್ಪಾನೂ ಬುದ್ದಿ ಇಲ್ವಾ… ಹೇಗ್ರಿ ಹೀಗಾದ್ರೆ, ಕಾರ್ಪೊರೇಷನ್ ನೀರು ಬರದೇ ಇದ್ದರೆ ಟ್ಯಾಂಕರ್ ನೀರು, ಕ್ಯಾನ್ ನೀರು ತಂದು ಜನರಿಗೆ ಸೇವೆ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ
ತೈಲ ಬೆಲೆ ಏರಿಕೆ ವಿರುದ್ದ ಆರ್.ಅಶೋಕ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡುತ್ತ ಮೆರವಣಿಗೆಯಲ್ಲಿ ಜಿಲಾಧಿಕಾರಿ ಕಚೇರಿಗೆ ನುಗ್ಗಲೆತ್ನಿಸಿ ಹೊರಟಾಗ ಮಾರ್ಗ ಮಧ್ಯೆ ಪೊಲೀಸರು ತಡೆದು ಅಶೋಕ ಸೇರಿದಂತೆ 20ಕ್ಕೂ ಮುಖಂಡರನ್ನು ಬಂಧಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್, ಎಂಎಲ್ಸಿ ಶಶೀಲ ನಮೋಶಿ, ಅವ್ವಣ್ಣ ಮ್ಯಾಕೇರಿ, ಬಿ.ಜಿ.ಪಾಟೀಲ, ಅಮರನಾಥ ಪಾಟೀಳ, ಮೇಯರ್ ವಿಶಾಲ ದರ್ಗಿ, ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಇತರರು ಇದ್ದರು.