Advertisement

I.N.D.I.A: 19ರಂದು ಪ್ರತಿಪಕ್ಷಗಳ ಮೈತ್ರಿಕೂಟದ ಸಭೆ

09:35 PM Dec 10, 2023 | Team Udayavani |

ನವದೆಹಲಿ: ಪ್ರತಿಪಕ್ಷಗಳ ಮೈತ್ರಿಕೂಟ ಐಎನ್‌ಡಿಐಎ ಉನ್ನತ ನಾಯಕರ ಸಭೆ ಇದೇ ತಿಂಗಳ 19ರಂದು ನಡೆಯುವ ಸಾಧ್ಯತೆಯಿದ್ದು, ಮುಂಬರುವ ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯೇ ಈ ಸಭೆಯ ಪ್ರಮುಖ ಅಜೆಂಡಾ ಎನ್ನಲಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಕಾರಣ ಸೀಟು ಹೊಂದಾಣಿಕೆ ಮಾತುಕತೆಯು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗಿದೆ.

Advertisement

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ವೇಳೆಯೇ ಕಾಂಗ್ರೆಸ್‌ ಮತ್ತು ಅಖೀಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿತ್ತು. ಫ‌ಲಿತಾಂಶ ಬಂದಾಗಲೂ, “ಕಾಂಗ್ರೆಸ್‌ನ ದುರ್ವರ್ತನೆಯೇ ಸೋಲಿಗೆ ಕಾರಣ” ಎಂದು ಎಸ್‌ಪಿ ಪ್ರತಿಕ್ರಿಯೆ ನೀಡಿತ್ತು. ಇದಾದ ಬಳಿಕ ಅಖೀಲೇಶ್‌ ಯಾದವ್‌ ಜತೆ ಮಾತುಕತೆ ನಡೆಸಿರುವ ಕಾಂಗ್ರೆಸ್‌ ನಾಯಕರು ಭಿನ್ನಾಭಿಪ್ರಾಯಗಳಿಗೆ ಅಂತ್ಯ ಹಾಡಿದ್ದಾರೆ ಎನ್ನಲಾಗಿದೆ.

ಅದರಂತೆ, ಮೈತ್ರಿಕೂಟದ ಎಲ್ಲ ನಾಯಕರ ಲಭ್ಯತೆಯನ್ನು ನೋಡಿಕೊಂಡು ಡಿ.19ರಂದು ಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಪ್ರದರ್ಶನವು ಲೋಕಸಭೆ ಸೀಟು ಹಂಚಿಕೆ ವಿಚಾರದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಬಹುದು ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next