Advertisement
ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಸಿಎಎ ತಿದ್ದುಪಡಿ ಕಾಯ್ದೆ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತದೆ. ಅನುಚ್ಛೇದ 14ರ ಅನುಸಾರ ಕಾನೂನಿನಡಿ ಎಲ್ಲರೂ ಸಮಾನರು.ಆದರೆ, ಈ ಕಾಯ್ದೆಯಿಂದ ಸಮಾನತೆಯ ಹಕ್ಕಿಗೆ ಚ್ಯುತಿಯಾಗುತ್ತದೆ. ಭಾರತದ ನೆರೆ ದೇಶಗಳಾದ ಪಾಕಿಸ್ತಾನದಲ್ಲಿ ಅಹ್ಮದೀಯರು, ಶ್ರೀಲಂಕಾದಲ್ಲಿತಮಿಳರು, ಮಯನ್ಮಾರನಲ್ಲಿ ರೋಹಿಂಗ್ಯಾ,ಅಫ್ಘಾನಿಸ್ಥಾನದಲ್ಲಿ ಹಜಾರ ಸಮುದಾಯಗಳು ಅಲ್ಪಸಂಖ್ಯಾತರಾಗಿದ್ದು, ಅವರನ್ನು ಪರಿಗಣಿಸಿಲ್ಲ.ಇದರಿಂದಾಗಿ ಅಕ್ರಮ ವಲಸಿಗರಿಗೆ ಪೌರತ್ವದೊರೆಯದೇ ನಿರಾಶ್ರಿತರ ಶಿಬಿರಗಳಲ್ಲಿ ನರಳುವಂತಾಗುತ್ತದೆ ಎಂದು ದೂರಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದವರು ಎಂದು ಸಿಎಎ ಕಾಯ್ದೆಯಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
Advertisement
ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಕಾಯ್ದೆ ವಿರೋಧಿಸಿ ಧರಣಿ
03:42 PM Jan 26, 2020 | Suhan S |
Advertisement
Udayavani is now on Telegram. Click here to join our channel and stay updated with the latest news.