Advertisement

ಕೊಡಗಿನಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ: ಜಿಲ್ಲಾಧಿಕಾರಿ

02:10 AM May 04, 2020 | Sriram |

ಮಡಿಕೇರಿ: ಕೋವಿಡ್‌ ಸಾಂಕ್ರಾಮಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಸುರು ವಲಯವಾಗಿ ಗುರುತಿಸಲ್ಪಟ್ಟಿರುವ ಕೊಡಗು ಜಿಲ್ಲೆಯಲ್ಲಿ ಮೇ 4ರಿಂದ ರಾಜ್ಯ ಸರಕಾರದ ಸೂಚನೆಗಳ ಅನ್ವಯ ಮದ್ಯ ಮಾರಾಟಕ್ಕೆ ವಾರದ ನಾಲ್ಕು ದಿನಗಳ ಕಾಲ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದ ರವಿವಾರ, ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಸಾಮಾಜಿಕ ಅಂಥವರನ್ನು ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಲ್ಲಿ ಕುಳಿತು ಮದ್ಯ ಸೇವಿಸಲು ಅವಕಾಶವಿಲ್ಲ. ಕೇರಳದ ಗಡಿಭಾಗಗಳಾದ ಕರಿಕೆ, ಕುಟ್ಟ, ಮಾಕುಟ್ಟದ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಚಿನ್ನಾಭರಣ ಮಳಿಗೆಗಳನ್ನು ವಾರದ ನಾಲ್ಕು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 4ರ ವರೆಗೆ ತೆರೆಯಬಹುದು ಎಂದರು.

ಮಾಸ್ಕ್ ಧರಿಸದಿದ್ದಲ್ಲಿ ದಂಡ
ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್  ಧರಿಸದಿದ್ದಲ್ಲಿ ಮತ್ತು ತಾವು ಸಂಚರಿಸುವ ಸ್ಥಳಗಳಲ್ಲಿ ಉಗುಳುವುದು ಕಂಡುಬಂದಲ್ಲಿ ಅಂತಹವರಿಗೆ ಮೇ 4ರಿಂದ 100 ರೂ. ದಂಡ ವಿಧಿಸಲಾಗುತ್ತದೆಂದು ತಿಳಿಸಿದರು.

ಬಸ್‌ ಸಂಚಾರಕ್ಕೆ ಅವಕಾಶವಿಲ್ಲ
ಖಾಸಗಿ ಬಸ್‌ ಸಂಚಾರಕ್ಕೆ ಅವಕಾಶವನ್ನು ನೀಡಿಲ್ಲವೆಂದು ಸ್ಪಷ್ಪಪಡಿಸಿದ ಅವರು, ಉಳಿದ ಎಲ್ಲ ನಿರ್ಬಂಧಗಳು ಹಿಂದಿನಂತೆಯೇ ಮುಂದುವರಿಯಲಿವೆ ಎಂದರು. ಎಸ್‌ಪಿ ಡಾ| ಸುಮನ್‌ ಪನ್ನೇಕರ್‌, ಡಿಎಚ್‌ಒ ಡಾ| ಮೋಹನ್‌ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next