Advertisement

ತಾತ್ವಿಕ ಪಾಟೀಲ್‌ಗೆ ಸರ್ವೋತ್ತಮ ಪ್ರಶಸ್ತಿ

02:56 PM Oct 23, 2021 | Team Udayavani |

ಮೈಸೂರು: ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿರುವ 3ನೇ ತಂಡದ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಕಲಬುರಗಿ ಜಿಲ್ಲೆಗೆ ನೇಮಕವಾಗಿರುವ ಬಿ. ತಾತ್ವಿಕ ಪಾಟೀಲ್‌ ಅವರು ಸರ್ವೋತ್ತಮ ಪ್ರಶಸ್ತಿ ಪಡೆದರು.

Advertisement

3ನೇ ತಂಡದಲ್ಲಿ ಒಟ್ಟು 168 ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ತರಬೇತಿ ಪಡೆದಿದ್ದು, ಹಲವು ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಒಳಾಂಗಣ ಪ್ರಶಸ್ತಿ ವಿಭಾಗದಲ್ಲಿ ಉಡುಪಿಯ ಬಿ.ಆರ್‌. ರಮ್ಯಾ (ಪ್ರಥಮ), ಬೆಂಗಳೂರು ನಗರದ ಸುನಿತಾ ಹೊಸಮನಿ(ದ್ವಿತೀಯ) ಮತ್ತು ತುಮಕೂರಿನ ಎಚ್‌.ಇ. ರೇಣುಕಮ್ಮ(ತೃತೀಯ) ಸ್ಥಾನ ಪಡೆದಿದ್ದಾರೆ. ಹೊರಾಂಗಣ ಪ್ರಶಸ್ತಿ ವಿಭಾಗದಲ್ಲಿ ಕಲಬುರಗಿಯ ಬಿ. ತಾತ್ವಿಕ ಪಾಟೀಲ್‌(ಪ್ರಥಮ), ನಳಿನಿ ಕುಮಾರಿ ಕುಲಕರ್ಣಿ(ದ್ವಿತೀಯ), ಉಡುಪಿಯ ಬಿ.ಎಸ್‌. ದೀಕ್ಷಿತ ಮತ್ತು ಶೋಭಾ(ತೃತೀಯ) ಸ್ಥಾನ ಪಡೆದಿದ್ದಾರೆ. ರೈಫ‌ಲ್‌ ಶೂಟಿಂಗ್‌ ಪ್ರಶಸ್ತಿ: ಬೆಳಗಾವಿಯ ಸುಧಾ(ಪ್ರಥಮ), ಉಡುಪಿಯ ಜಿ. ನೇತ್ರಾವತಿ (ದ್ವಿತೀಯ) ಮತ್ತು ಬೆಂಗಳೂರು ನಗರದ ಸಲೀಮಾ ರೋಣದ(ತೃತೀಯ) ಸ್ಥಾನ ಪಡೆದಿದ್ದಾರೆ.

ಮೈಸೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದ್ದು, ಮಹಿಳಾ ಪೊಲೀಸ್‌ ಆಗಿ ಇಲಾಖೆಗೆ ಸೇರಿದವರಿಗೆ ಮುಂದೆ ಅಧಿಕಾರಿಯಾಗುವ ಅವಕಾಶವಿದೆ ಎಂದು ತರಬೇತಿ ಎಡಿಜಿಪಿ ಪಿ. ಹರಿಶೇಖರನ್‌ ಹೇಳಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್‌ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದಿರುವ 3ನೇ ತಂಡದ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ:- ಪತ್ನಿ ಸಾವಿನ ನೋವು: ಮನನೊಂದು ತನ್ನ 4 ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಂದೆ

ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ಮಹಿಳಾ ಪೊಲೀಸರು ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಈಗ ಸ್ವೀಕರಿಸಿದ ಪ್ರತಿಜ್ಞಾ ವಿಧಿಯನ್ನು ವರ್ಷದಲ್ಲಿ 2- 3 ಬಾರಿ ಓದಿದರೇ ಅದು ನಿಮ್ಮ ಕೆಲಸಕ್ಕೆ ಒಳ್ಳೆಯ ದಾಗುತ್ತದೆ. ಹಾಗೆಯೇ, ಸಮಾಜದ ತಳಮಟ್ಟದಿಂದ ಬರುವವರಿಗೆ ಸಹಾಯ ಮಾಡಿ ಎಂದರು. ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ, ಪ್ರಕರಣಗಳನ್ನು ದಾಖಲಿಸುವಲ್ಲಿ ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಇಂತಹ ದೂರುಗಳು ಬಂದಾಗ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

Advertisement

ಅದರಂತೆ ಈಗ ಬೇರೆ ಬೇರೆ ಕಡೆಗಳಲ್ಲೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ ಎಂದು ಹೇಳಿದರು. ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರಿಗೆ ಅವ ಕಾಶ ನೀಡಿದರೇ ಯಾವುದೇ ಕೆಲಸವನ್ನು ಮಾಡು ತ್ತಾರೆ. ಅಪರಾಧ ಪತ್ತೆಗೆ ಆದ್ಯತೆ ನೀಡುತಾ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕೆಪಿಎ ನಿರ್ದೇಶಕ ವಿಪುಲ್‌ಕುಮಾರ್‌, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಉಪ ನಿರ್ದೇಶಕಿ ಡಾ. ಸುಮನ್‌ ಡಿ. ಪನ್ನೇಕರ್‌, ಡಿಸಿಪಿ ಗಳಾದ ಪ್ರದೀಪ್‌ ಗುಂಟಿ, ಗೀತಾ ಪ್ರಸನ್ನ, ಮಹಿಳಾ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ, ಎಸ್ಪಿ ಆರ್‌. ಚೇತನ್‌, ಹೆಚ್ಚುವರಿ ಎಸ್ಪಿ ಆರ್‌. ಶಿವಕುಮಾರ್‌, ತಾತ್ಕಾಲಿಕ ಪೊಲೀಸ್‌ ತರ ಬೇತಿ ಶಾಲೆಯ ಪ್ರಾಂಶುಪಾಲರಾದ ಸಿಎಆರ್‌ ಡಿಸಿಪಿ ಶಿವರಾಜು, ಅಶ್ವರೋಹಿದಳ ಕಮಾಂಡೆಂಟ್‌ ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next