Advertisement

ನೆಲಹಾಸು ಉದ್ಯೋಗಕ್ಕಿದೆ ಅವಕಾಶ

09:32 PM Jun 25, 2019 | Team Udayavani |

ಕಲೆ ಎಂಬುದು ಹಲವು ವಿಧದಲ್ಲಿದೆ. ಕ್ರಿಯಾತ್ಮಕವಾಗಿ ತಯಾರಿಸುವ ಎಲ್ಲ ವಸ್ತುಗಳೂ ಕಲೆಯಲ್ಲಿ ಒಳಗೊಳ್ಳುತ್ತವೆ. ಇದಕ್ಕೆ ಒಂದಷ್ಟು ಪ್ರತಿಭೆ ಇದ್ದರೆ ಸಾಕು. ಒಬ್ಬ ಕಲೆಗಾರ ಕ್ರಿಯಾತ್ಮಕ ಚಿಂತನೆಗಳ ಜತೆ ತನ್ನ ಭಾವನೆಗಳನ್ನು ಬೆರೆಸಿ ಒಂದು ವಸ್ತುವಿಗೆ ರೂಪು ನೀಡಿದಾಗ ಅವು ಕಲಾತ್ಮಕ ಆಕೃತಿಗಳಾಗುತ್ತವೆ. ನೆಲಹಾಸು ತಯಾರಿಕೆಯೂ ಒಂದು ಕಲಾತ್ಮಕ ಉದ್ಯೋಗ. ಕಲೆಯಲ್ಲಿ ಆಸಕ್ತಿ ಇರುವ ಎಲ್ಲರೂ ಇದನ್ನು ಆಯ್ದುಕೊಳ್ಳಬಹುದು.ಆದರೆ ಇದನ್ನು ಒಂದು ಕಲೆಯೆಂದು ಒಪ್ಪಿಕೊಳ್ಳಲು ಅನೇಕರು ತಯಾರಿಲ್ಲ. ಕಲಾತ್ಮಕ‌ ಡಿಸೈನ್‌ಗಳ ಮೂಲಕ ವಿವಿಧ ವಿನ್ಯಾಸಗಳ ನೆಲಹಾಸನ್ನು ತಯಾರಿಸುವುದೇ ಕಾರ್ಪೆಟ್‌ ಟೆಕ್ನಾಲಜಿ ಅಥವಾ ನೆಲಹಾಸು ತಂತ್ರಜ್ಞಾನ.

Advertisement

ನೆಲವನ್ನು ಕವರ್‌ ಮಾಡಲು ಅಥವಾ ನೆಲದ ಅಂದವನ್ನು ಹೆಚ್ಚಿಸುವಂತೆ ಮಾಡಲು ಕಾರ್ಪೆಟ್‌ನ್ನು ಬಳಸುತ್ತಾರೆ. ಯಾವ ಶೈಲಿಯ ನೆಲಕ್ಕೆ ಯಾವ ರೀತಿಯ ನೆಲಹಾಸು ಉತ್ತಮ ಎಂಬುದನ್ನು ತಿಳಿದು ಅದಕ್ಕೆ ತಕ್ಕಂತೆ ಕಾಪೆìಟ್‌ನ್ನು ತಯಾರಿಸುವುದು ಈ ಉದ್ಯೋಗವಾಗಿದೆ. ಹೊಸ ಹೊಸ ವಿನ್ಯಾಸಗಳನ್ನು ಮಾರುಕಟ್ಟೆಗೆ ನಿರಂತರವಾಗಿ ಪರಿಚಯಿಸುತ್ತಿರ ಬೇಕಾಗುತ್ತದೆ. ಈಗಾಗಲೇ ಇದೊಂದು ಉದ್ಯಮವಾಗಿ ಬೆಲೆಯುತ್ತಿದ್ದು ವಿಪುಲ ಅವಕಾಶಗಳು ಯುವ ಜನರಿಗಾಗಿ ಕಾಯುತ್ತಿವೆ.

ಇದನ್ನು ಉದ್ಯೋಗ ಕ್ಷೇತ್ರವನ್ನಾಗಿ ಆಯ್ದುಕೊಂಡವರಿಗೆ ವಾರ್ಷಿಕವಾಗಿ 1ಲಕ್ಷಕ್ಕಿಂತ ಅಧಿಕ ವೇತನ ದೊರೆಯುತ್ತವೆ. ಕೆಲಸದಲ್ಲಿ ಅನುಭವ ಹೆಚ್ಚಾದಂತೆ ಉದ್ಯೋಗದಲ್ಲಿ ಅವಕಾಶಗಳೂ ಹೆಚ್ಚುತ್ತಾ ಹೋಗುತ್ತವೆ. ಫ್ಯಾಶನ್‌ ಡಿಸೈನಿಂಗ್‌ಗೆ ಸಂಬಂಧಿಸಿದ ಕಂಪೆನಿಗಳಲ್ಲಿ ಉದ್ಯೋಗ ಲಭಿಸುತ್ತದೆ. ಪ್ರತಿ ದಿನದ ತರಗತಿ ಅಥವಾ ದೂರ ಶಿಕ್ಷಣದ ಮೂಲಕ ಈ ಕೋರ್ಸ್‌ನ್ನು ಆಯ್ಕೆ ಮಾಡಬಹುದಾಗಿದೆ. ಈ ಕೋರ್ಸ್‌ ಆಯ್ದುಕೊಳ್ಳುವವರಿಗೆ ಮುಖ್ಯವಾಗಿ ಮ್ಯಾಥ್ಸ್ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರೌಢಿಮೆ ಇರಬೇಕಾಗಿದೆ. ಕಂಪ್ಯೂಟರ್‌ ಜ್ಞಾನವೂ ಅಗತ್ಯ. ಹೊಸತನವನ್ನು ಇಷ್ಟಪಡುವವರು, ಕಲೆಯಲ್ಲಿ ಆಸಕ್ತಿ ಇರುವ ಎಲ್ಲರೂ ಇದರಲ್ಲಿ ತರಬೇತಿ ಪಡೆಯಬಹುದು.

ಎಲ್ಲಿ ಕಲಿಯಬಹುದು
ಕಾರ್ಪೆಟ್‌ ಟೆಕ್ನಾಲಜಿ ಎಂಬ ಕೋರ್ಸ್‌ ಇಂದು ಹಲವು ವಿಶ್ವವಿದ್ಯಾನಿಲಯಗಳಲ್ಲಿವೆ. ಉತ್ತರ ಪ್ರದೇಶದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕಾರ್ಪೆಟ್‌ ಟೆಕ್ನಾಲಜಿ ಎಂಬ ವಿಭಾಗವಿದ್ದು ಇದರಲ್ಲಿ ನೆಲಹಾಸು ತರಬೇತಿ ನೀಡಲಾಗುತ್ತದೆ. ಡಿಗ್ರಿ ಹಾಗೂ ಡಿಪ್ಲೊಮಾ ಕೋರ್ಸ್‌ನ ಮೂಲಕ ಇದನ್ನು ಕಲಿಯಬಹುದಾಗಿದೆ. ಪಿಯುಸಿಯಲ್ಲಿ ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಗಣಿತ ವಿಷಯಗಳನ್ನು ಆಯ್ದುಕೊಂಡಿರುವವರು ನೆಲಹಾಸು ತರಬೇತಿಯನ್ನು ಉನ್ನತ ಶಿಕ್ಷಣಕ್ಕೆ ಆಯ್ದುಕೊಳ್ಳಬಹುದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement
Advertisement

Udayavani is now on Telegram. Click here to join our channel and stay updated with the latest news.

Next