ನವದೆಹಲಿ : ಸದ್ಯಕ್ಕೆ ಬರುತ್ತಿರುವ 5 ಜಿ ಸ್ಮಾರ್ಟ್ ಫೋನ್‍ಗಳೆಲ್ಲ 20 ಸಾವಿರ ರೂ. ಮೇಲಿನ ದರಪಟ್ಟಿಯಲ್ಲಿದ್ದು, ಇದನ್ನರಿತ ಒಪ್ಪೋ ಕಂಪೆನಿ ಅಗ್ಗದ 5ಜಿ ಸ್ಮಾರ್ಟ್ ಫೋನನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಫೋನ್ ಮೇ 2ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಅದುವೇ ಒಪ್ಪೋ ಎ53ಎಸ್ 5ಜಿ.
ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಹೊಂದಿರುವ ಫೋನ್ 6 ಜಿಬಿ ಹಾಗೂ 8 ಜಿಬಿ ರ್ಯಾಮ್ 128 ಆಂತರಿಕ ಸಂಗ್ರಹದ ಎರಡು ಆವೃತ್ತಿ ಹೊಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಒಪ್ಪೊ, ವಿವಿಧ ಬೆಲೆ ಶ್ರೇಣಿಗಳಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಪ್ರೀಮಿಯಂ ವಿಭಾಗದಲ್ಲಿ ಒಪ್ಪೊ ರೆನೊ5 ಪ್ರೊ 5ಜಿ, ಎಫ್19 ಪ್ರೊ+ 5ಜಿ, ಒಪ್ಪೊ ಎ74 5ಜಿ ಮತ್ತು ಈಗ ಪಾಕೆಟ್ ಸ್ನೇಹಿ ವಿಭಾಗದಲ್ಲಿ ಒಪ್ಪೊ ಎ53ಎಸ್ 5ಜಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
360 ಡಿಗ್ರಿ ಆ್ಯಂಟೆನಾ ಸ್ವಿಚ್ ಟೆಕ್ನಾಲಜಿಯು ನಾಲ್ಕು ಎಂಬೆಡೆಡ್ ಆ್ಯಂಟೆನಾಗಳನ್ನು ಬಳಸುತ್ತದೆ. ಬಳಕೆದಾರರು ಫೋನ್ ಅನ್ನು ಯಾವುದೇ ಬಗೆಯಲ್ಲಿ ಹಿಡಿದುಕೊಂಡಿದ್ದರೂ ಸಿಗ್ನಲ್‌ಗಳು ಲಭ್ಯ ಇರುತ್ತವೆ. ನಿಮ್ಮ ಸಂಪರ್ಕ ಜಾಲವು ನಿಧಾನವಾಗಲು ಈ ಫೋನ್ ಅವಕಾಶವನ್ನೇ ಒದಗಿಸುವುದಿಲ್ಲ. ಲಿಂಕ್‌ಬೂಸ್ಟ್ ಸೌಲಭ್ಯವು ಫೋನ್‌ಗೆ ವೈ-ಫೈ ಮತ್ತು 5ಜಿ ತರಂಗಾಂತರಗಳ ಸಂಪರ್ಕ ಒದಗಿಸಿ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಅಡೆತಡೆರಹಿತವಾಗಿ ನಿರ್ವಹಿಸಲು ನೆರವಾಗಲಿದೆ.
ಸ್ಮಾರ್ಟ್ 5ಜಿ ಸ್ವಯಂಚಾಲಿತ ಸ್ವಿಚ್, ತನ್ನಷ್ಟಕ್ಕೆ ತಾನೇ 5ಜಿಯಿಂದ 4ಜಿ/ಎಲ್‌ಟಿಇ ಸಂಪರ್ಕಕ್ಕೆ ಬದಲಾಗುತ್ತದೆ. 5000 ಎಂಎಎಚ್ ಬ್ಯಾಟರಿ ಹೊಂದಿದ್ದು, ಫೋನಿನ ಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್ ಒಳಗೊಂಡಿದೆ. 6.52 ಇಂಚಿನ ಎಚ್‍ಡಿ ಪ್ಲಸ್ ಪರದೆ ಹೊಂದಿದೆ.
ಹಿಂಬದಿ 3 ಕ್ಯಾಮೆರಾ ಹೊಂದಿದ್ದು, ಇದರಲ್ಲಿ 13 ಎಂಪಿ ಮುಖ್ಯ ಕ್ಯಾಮೆರಾ, 2 ಮೆಪಿ ಪೋಟ್ರೇಟ್ ಕ್ಯಾಮೆರಾ ಮತ್ತು 2 ಎಂಪಿ ಮ್ಯಾಕ್ರೊ ಕ್ಯಾಮೆರಾ ಇದೆ. 8 ಮೆಪಿ ಮುಂಬದಿ ಕ್ಯಾಮರಾ ಇದೆ.
ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, 6ಜಿಬಿ+128 ಜಿಬಿಗೆ 15000 ರೂ. 8ಜಿಬಿ+128 ಜಿಬಿಗೆ 17000 ರೂ. ದರವಿದೆ. ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ರಿಟೇಲ್ ಮಾರಾಟ ಮಳಿಗೆಗಳಲ್ಲಿ ದೊರಕುತ್ತದೆ. ಫ್ಲಿಪ್‍ಕಾರ್ಟ್ ನಲ್ಲಿ ಮೇ 2 ರಿಂಧ 15 ರವರೆಗೆ ಎಚ್‍ಡಿಎಫ್‍ಸಿ ಕ್ರೆಡಿಟ್ ಕಾರ್ಡ್ ಗೆ 1250 ರೂ. ರಿಯಾಯಿತಿ ದೊರಕುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ