ಒಪ್ಪೊ ಕಂಪನಿಯು ಒಪ್ಪೊ ಎಫ್23 5ಜಿ ಸ್ಮಾರ್ಟ್ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದು ಸ್ನ್ಯಾಪ್‌ಡ್ರ್ಯಾಗಾನ್ ಎಸ್‌ಒಸಿ ಹೊಂದಿದ್ದು, 8GB RAM, 256ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಅಲ್ಲದೇ 16ಜಿಬಿ ರ್ಯಾಮ್‌ವರೆಗೆ ವಿಸ್ತರಿಸಬಹುದಾಗಿದೆ.
Advertisement
ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, 64 ಮೆಗಾಫಿಕ್ಸೆಲ್ ಸೆನ್ಸಾರ್ ಮತ್ತು 5,000 ಎಂಎಎಚ್ ಬ್ಯಾಟರಿ ಒಳಗೊಂಡಿದೆ.
8ಜಿಬಿ+256ಜಿಬಿ ಸ್ಟೋರೇಜ್ ಇರುವ ಒಪ್ಪೊ ಎಫ್23 5ಜಿ ಮೊಬೈಲ್ ಬೆಲೆ 24,999 ರೂ. ಇದೆ. ಐಸಿಐಸಿಐ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್ ಕಾರ್ಡ್‌ಗಳಿಗೆ ಸ್ಥಳದಲ್ಲೇ 2,500 ರೂ. ರಿಯಾಯಿತಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ.