Advertisement

ನೇತ್ರ ಸಮಸ್ಯೆ ನಿರ್ಲಕ್ಷ್ಯ ಸಲ್ಲ: ಸೀಮಾ

12:21 PM Jul 24, 2017 | Team Udayavani |

ಹುಬ್ಬಳ್ಳಿ: ಕಣ್ಣುಗಳಿಲ್ಲದಿದ್ದರೆ ಜಗತ್ತೇ ಶೂನ್ಯವಾಗಿದ್ದು, ಪ್ರತಿಯೊಬ್ಬರು ಕಣ್ಣಿನ ಸಮಸ್ಯೆ ಬಗ್ಗೆ ಅಲಕ್ಷ್ಯ ಮಾಡದೆ ಜಾಗರೂಕತೆ ವಹಿಸಬೇಕೆಂದು ಮಾಜಿ ಶಾಸಕಿ ಸೀಮಾ ಮಸೂತಿ ಹೇಳಿದರು. 

Advertisement

ನರೇಂದ್ರ ಗ್ರಾಮದಲ್ಲಿ ಸಂಸದ ಪ್ರಹ್ಲಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಪದ್ಮಶ್ರೀ ಡಾ| ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ರವಿವಾರ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಕ್ಷಮತಾ ಸಂಸ್ಥೆ ಇಂಥ ಅನೇಕ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಡಾ| ಎಂ.ಎಂ. ಜೋಶಿಯವರು ನೂರಾರು ಬಡಜನರಿಗೆ ಉಚಿತ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಅತಿಥಿಯಾಗಿ ಬಿಜೆಪಿ ಯುವ ಧುರೀಣ ಅಮೃತ ದೇಸಾಯಿ ಆಗಮಿಸಿದ್ದರು. 

ಮುರಳೀಧರ ಮಳಗಿ, ಚಂದ್ರಶೇಖರ ಗೋಕಾಕ, ಡಿ.ಪಿ. ಪಾಟೀಲ, ಸಂಜಯ ಶರ್ಮಾ, ಶ್ರೀನಿವಾಸ ಶಾಸ್ತ್ರಿ, ವೀರಮಣಿ ಪುರೋಹಿತ ಇದ್ದರು. ಕುಮಾರ ದೇಸಾಯಿ ನಿರೂಪಿಸಿದರು. ಶರಣು ಅಂಗಡಿ ವಂದಿಸಿದರು. ಡಾ| ತಮ್ಮಣ್ಣ ಗಂಡಮಾಲಿ ಹಾಗೂ ಇತರ ವೈದ್ಯರು ಕಣ್ಣಿನ ಪರೀಕ್ಷೆ ನಡೆಸಿದರು. 

ಸುಮಾರು 200 ಜನ ಹೆಸರು ನೋಂದಾಯಿಸಿದ್ದರು. 45 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next