Advertisement
ಗುರುವಾರ ರಾತ್ರಿ ಮಂಡೆಕೋಲಿನ ಕನ್ಯಾನದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಅಂದಾಜು 2-3 ತಿಂಗಳ ಆನೆ ಮರಿಯು ಗುಂಪಿನೊಂದಿಗೆ ಮರಳದೆ ತೋಟದಲ್ಲೇ ಬಾಕಿಯಾಗಿತ್ತು. ಬಳಿಕ ಅರಣ್ಯ ಇಲಾಖೆಯ ಅ ಧಿಕಾರಿಗಳು ಆಗಮಿಸಿ ಕಾಡಾನೆಗಳ ಗುಂಪು ಇರುವ ಜಾಗವನ್ನು ಪತ್ತೆಹಚ್ಚಿ ಮರಿಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನ ನಡೆಸಿದ್ದರೂ ರಾತ್ರಿ ವರೆಗೂ ಫಲ ನೀಡಿರಲಿಲ್ಲ. ಮರಿಯು ಮರಳಿ ಊರಿನತ್ತ ಬರುತ್ತಿತ್ತು.
ಕೊನೆಗೂ ಮೂರನೇ ಪ್ರಯತ್ನ ಫಲನೀಡಿದೆ. ಮಂಡೆಕೋಲಿನ ಬೇಂಗತ್‌ಮಲೆ ವ್ಯಾಪ್ತಿಯಲ್ಲಿ ಮರಿಯಾನೆಯು ಮತ್ತೆ ತನ್ನ ತಾಯಿ ಆನೆ ಜತೆಗಿನ ತಂಡವನ್ನು ಸೇರಿಕೊಂಡಿದೆ. ಅರಣ್ಯ ಇಲಾಖೆ ಸಿಬಂದಿ ಇದನ್ನು ಖಚಿತಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ, ವನ್ಯಜೀವಿ ಸಿಬಂದಿ, ಪಶುಇಲಾಖೆ ಸಿಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Related Articles
Advertisement