Advertisement

ಆಪರೇಷನ್ ಕುರಿ ಫಾರ್ಮ್…!ನೆಲ ಮಾಳಿಗೆಯಲ್ಲಿ ಕ್ವಿಂಟಲ್ ಗಟ್ಟಲೆ ಗಾಂಜಾ ಪತ್ತೆ

06:12 PM Sep 11, 2020 | Nagendra Trasi |

ಬೆಂಗಳೂರು: ಬೆಂಗಳೂರಿನ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದಷ್ಟು ಪ್ರಮಾಣದ ಗಾಂಜಾ ಏಕಕಾಲದಲ್ಲಿ ಪತ್ತೆಯಾಗಿದೆ! ನಗರದಲ್ಲಿ ಬಂಧಿತನಾದ ಗಾಂಜಾ ದಂಧೆಕೋರ ನೀಡಿದ ಸಣ್ಣ ಸುಳಿವಿನ ಆಧಾರದ ಮೇರೆಗೆ ಶೇಷಾದ್ರಿಪುರಂ ಠಾಣೆ ಪೊಲೀಸರು 10 ದಿನಗಳ ಕಾಲ “ಆಪರೇಷನ್‌ ಕುರಿಫಾರ್ಮ್’ ನಡೆಸಿದ್ದಾರೆ.

Advertisement

ಈ ವೇಳೆ ಕೋಟ್ಯಂತರ ರೂ. ಮೌಲ್ಯದ 1,300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಲಚ್ಚುನಾಯಕ ತಾಂಡಾದ ಕುರಿ ಫಾರ್ಮ್ ಒಂದರಲ್ಲಿಭೂಗತವಾಗಿ ಅಡಗಿಸಿ ಇರಿಸಿದ್ದ ಈ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಹೊರನೋಟಕ್ಕೆ ಕುರಿ ಶೆಡ್ ಇದ್ದು, ಒಳಗೆ ನೆಲಮಾಳಿಗೆಯಲ್ಲಿ ಕ್ವಿಂಟಲ್ ಗಟ್ಟಲೆ ಗಾಂಜಾ ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಸ್ಥಳೀಯರಿಗೆ ಸಣ್ಣ ಅನುಮಾನವೂ ಬಾರದ ರೀತಿಯಲ್ಲಿ ಗಾಂಜಾ ದಾಸ್ತಾನು ಮಾಡಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧ ಅಂತಾರಾಜ್ಯ ಗಾಂಜಾ ದಂಧೆಕೋರರಾದ ಕಲಬುರಗಿಯ ಚಂದ್ರಕಾಂತ್‌, ಬೀದರ್‌ನ ನಾಗನಾಥ, ವಿಜಯಪುರದ ಸಿದ್ದುನಾಥ ಲಾವಟೆ, ಬೆಂಗಳೂರಿನ ಗಾಯತ್ರಿನಗರದ ಜ್ಞಾನಶೇಖರ್‌ನನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಕುತೂಹಲದ ವಿಷಯವೆಂದರೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಡೆಸಿದ ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿದಿರಲಿಲ್ಲವಾಗಿತ್ತಂತೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next