Advertisement

ಚಿಕ್ಕಮಗಳೂರು ನಗರಸಭೆಯಿಂದ ಆಪರೇಷನ್ ‘ಮೈಕ್’

11:46 AM Mar 27, 2022 | Team Udayavani |

ಚಿಕ್ಕಮಗಳೂರು  : ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್‍ಗಳನ್ನ ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದ್ದು, ಬಜೆಟ್‍ನಲ್ಲಿ ತೀರ್ಮಾನಿಸಿದ್ದಾರೆ.

Advertisement

ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು. ಮಾರ್ಚ್ 25ರಂದು ನಡೆದ ಬಜೆಟ್‍ನಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ತೀರ್ಮಾನ ಮಾಡಿದ್ದಾರೆ.

ನಗರಸಭೆ ಅನುಮತಿ ಪಡೆಯದೆ, ನ್ಯಾಯಾಲಯದ ಸೂಚನೆಗಳನ್ನ ಮೀರಿ ಕಟ್ಟಿರುವ ಹಾಗೂ ಅವುಗಳನ್ನ ಬಳಸುತ್ತಿರುವ ಪ್ರಾರ್ಥನಾ ಮಂದಿರಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಚಿಕ್ಕಮಗಳೂರು ನಗರದ ಹಲವು ವಾರ್ಡ್‍ಗಳಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರಗಳು ಮೈಕ್ ಕಟ್ಟಿ-ಬಳಸುತ್ತಿರುವುದರ ಬಗ್ಗೆ ಸ್ಥಳಿಯರು ನಗರಸಭೆಗೆ ದೂರು ನೀಡಿದ್ದಾರೆ. ಹಾಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಪ್ರಾರ್ಥನ ಮಂದಿರಗಳ ಮೇಲೆ ಮೈಕ್‍ಗಳನ್ನ ಅಳವಡಿಸಲು ನಗರಸಭೆ ಅನುಮತಿ ಬೇಕು. ಹಾಗಾಗಿ, ಅಕ್ರಮವಾಗಿ ಮೈಕ್‍ಗಳನ್ನ ಬಳಸುತ್ತಿರುವವರಿಗೆ ನಗರಸಭೆ ನೋಟೀಸ್ ನೀಡಲಿದ್ದು, ನಿಗಧಿತ ಕಾಲಮಿತಿಯೊಳಗೆ  ತಾವು ಪಡೆದಿರೋ ಅನುಮತಿ ಪತ್ರವನ್ನ ನಗರಸಭೆಗೆ ನೀಡಬೇಕು. ಅನುಮತಿ ಪತ್ರವನ್ನ ನಗರಸಭೆಗೆ ನೀಡದಿದ್ದರೆ, ಅನುಮತಿ ಪಡೆಯದಿದ್ದರೆ ಅಂತಹಾ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳಾದರೂ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಸ್ಥಳಿಯರು ಕೂಡ ಪ್ರಾರ್ಥನ ಮಂದಿರಗಳ ಮೈಕ್‍ಗಳ ಹಾವಳಿಯಿಂದ ಬೇಸತ್ತಿದ್ದಾರೆ. ಈ ಬಗ್ಗೆ ವರದಿಗಾರರ ಜೊತೆ ಮಾತನಾಡಿರುವ ಸ್ಥಳಿಯ ವಿರೇಶ್ ಕೂಡ, ಇಂತದ್ದೇ ಸಮಯದಲ್ಲಿ ಮೈಕ್‍ಗಳನ್ನ ಬಳಸಬೇಕೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದೆ. 11 ಡೆಸಿಬಲ್ ಒಳಗೆ ಇರಬೇಕು ಎಂದು ಕೋರ್ಟ್ ಹೇಳಿದೆ. ಆದರೆ, ಮೈಕ್‍ಗಳ ಹಾವಳಿಯಿಂದ ಜನ ರೋಸಿ ಹೋಗಿದ್ದಾರೆ. ಮಕ್ಕಳು ಓದುವುದು ಕಷ್ಟವಾಗಿದೆ, ವೃದ್ಧರು-ಮಕ್ಕಳಿಗೂ ಸಮಸ್ಯೆಯಾಗಿದೆ. ಯಾವಾಗ ಬೇಕು ಆವಾಗ ಮೈಕಗಳನ್ನ ಬಳಸುತ್ತಿರುವುದರಿಂದ ಮಾನಸಿಕ ನೆಮ್ಮದಿ ಕೂಡ ಹಾಳಾಗಿದೆ. ಹಾಗಾಗಿ, ಕೋರ್ಟ್ ಆದೇಶದಂತೆ ಮೈಕ್‍ಗಳನ್ನ ಬಳಸುವುದು ಮತ್ತು ಆ ನಿಟ್ಟಿನಲ್ಲಿ ನಗರಸಭೆ ಕೈಗೊಂಡ ಕ್ರಮ ಸ್ವಾಗತಾರ್ಹ ಎಂದು ಸ್ಥಳಿಯರು ತಿಳಿಸಿದ್ದಾರೆ.

ನಗರಸಭೆ ಸಮಾಜ ಹಾಗೂ ಜನಸಾಮಾನ್ಯರಿಗೆ ಶಾಂತಿ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ, ನಗರಸಭೆಯ ಈ ನಡೆಗೆ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಗರಸಭೆ ಕಾನೂನಿನ ಮಿತಿಯೊಳಗೆ ಇದ್ದರೆ ಯಾವುದೇ ತೊಂದರೆ ಇಲ್ಲ. ತೆರವು ಮಾಡುವುದಿಲ್ಲ. ಕಾನೂನಿನ ಮಿತಿಯಲ್ಲಿ ಇಲ್ಲದೆ, ಅಕ್ರಮವಾಗಿದ್ದರೆ ಮಾತ್ರ ತೆರವು ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಆದರೆ, ಅಕ್ರಮವೋ-ಸಕ್ರಮವೋ ಪ್ರಾರ್ಥನ ಮಂದಿರಗಳ ಮೇಲಿನ ಮೈಕ್‍ಗಳನ್ನ ತೆರವುಗೊಳಿಸಲು ಮುಂದಾದರೆ ಮತ್ತೊಂದು ವಿವಾದ ಸೃಷ್ಠಿಯಾಗುವ ಸಾಧ್ಯತೆ ದಟ್ಟವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next