Advertisement

ಬಚಾವ್; ಶೃಂಗೇರಿಯ ಮನೆಯೊಂದರಲ್ಲಿ ಆಪರೇಶನ್ “ಡೆಡ್ಲಿ ಕಾಳಿಂಗ”! Watch

04:44 PM Nov 21, 2018 | Team Udayavani |

ಶೃಂಗೇರಿ: ನಾಗರಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಅದರಲ್ಲೂ ನಮಗಿಂತ ಎರಡು ಪಟ್ಟು ಉದ್ದದ ಕಾಳಿಂಗ ಸರ್ಪ ಮನೆಯ ಹತ್ತಿರ ಬಂದರೆ ಪರಿಸ್ಥಿತಿ ಹೇಗಾಗಬಹುದು ಊಹಿಸಿ. ಹೀಗೆ ಶೃಂಗೇರಿಯ ಮನೆಯೊಂದಕ್ಕೆ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದರ ರೋಷ ಹೇಗಿದೆ ಎಂಬುದು ತಿಳಿಯುತ್ತೆ.

Advertisement

ಶೃಂಗೇರಿ ಸಮೀಪದ ಬೊಂಬಾಲಪುರ ವಿನಯ್ ಅವರ ಮನೆಗೆ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿ ಬಿಟ್ಟಿತ್ತು. ಕಳೆದ 4 ದಿನಗಳಿಂದ ಠಿಕಾಣಿ ಹೂಡಿದ್ದ “ಕಾಳಿಂಗ”ನನ್ನು ಹಿಡಿಯಲು ಸ್ನೇಕ್ ಅರ್ಜುನ್ ಅವರು ಪ್ರಯತ್ನಪಡುತ್ತಿದ್ದಾಗಲೇ ಎರಡು ಬಾರಿ ಕಾಳಿಂಗ ತಿರುಗಿ ಕಚ್ಚಲು ಮುಂದಾಗಿತ್ತು.

ಆದರೆ ಧೈರ್ಯ ಕಳೆದುಕೊಳ್ಳದ ಅರ್ಜುನ್ ಅಪಾಯ ಅರಿತು ಕಾಳಿಂಗನನ್ನು ಕೈಬಿಡುವ ಮೂಲಕ ಬಚಾವ್ ಆಗಿದ್ದಾರೆ. ಅಂತೂ ಕೊನೆಗೂ ಛಲಬಿಡದೆ ಕಾಳಿಂಗನನ್ನು ಪೈಪ್ ಒಳಗೆ ಸೇರಿಸಲು ಯಶಸ್ವಿಯಾಗಿ, ಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next