Advertisement

ದಲ್ಲಾಳಿ ಹಾವಳಿ ಮುಕ್ತಿಗೆ ಆಪರೇಷನ್‌ ಗ್ರೀನ್ಸ್‌

01:34 AM Jun 08, 2019 | mahesh |

ಗದಗ: ಮಳೆ ಇದ್ದರೆ ಬೆಳೆಯಿಲ್ಲ, ಬೆಳೆ ಇದ್ದರೆ ಬೆಲೆಯಿಲ್ಲ. ಇದು ಅನ್ನದಾತನ ನಿಲ್ಲದ ಸಮಸ್ಯೆ. ಈ
ಸಮಸ್ಯೆಯಿಂದ ರೈತರನ್ನು ಪಾರು ಮಾಡಲು ಕೇಂದ್ರ ಸರ್ಕಾರ “ಆಪರೇಷನ್‌ ಗ್ರೀನ್ಸ್‌’ ಯೋಜನೆಗೆ
ಚಾಲನೆ ನೀಡಿದ್ದು, ರೈತ ಉತ್ಪನ್ನಗಳ ಮೌಲ್ಯ ವರ್ಧನೆ ಗಾಗಿ ಕರ್ನಾಟಕ ಸೇರಿ ದೇಶದ 8 ರಾಜ್ಯಗಳನ್ನು ಈ ಯೋಜನೆಗೆ ಒಳಪಡಿಸಿದೆ.

Advertisement

ಈಗಾಗಲೇ 2018-19ನೇ ಸಾಲಿನಲ್ಲಿ ಈ ಯೋಜನೆಗೆಂದು 500 ಕೋಟಿ ಮೀಸಲಿರಿಸಿದ್ದು, ಇದರಿಂದ ರೈತರಿಗೆ ಮಾರುಕಟ್ಟೆಗೆ ಅಲೆದಾಟ, ದಲ್ಲಾಳಿಗಳ ಹಾವಳಿಯಿಂದ ಮುಕ್ತಿ ಸಿಗಲಿದೆ. ಈ ಯೋಜನೆಯಡಿ ಸರ್ಕಾರದ ಧನಸಹಾಯ ದೊಂದಿಗೆ ಬೆಳೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸ ಬಹುದಾಗಿದೆ.

ಕರ್ನಾಟಕದಲ್ಲಿ ಟೊಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಗಳನ್ನು ಈ ಯೋಜನೆಯಡಿ ಆಯ್ಕೆ
ಮಾಡಲಾಗಿದೆ. ರೈತರು ಹಾಗೂ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ
ಅಡುಗೆಗೆ ಸಿದಟಛಿ ಪದಾರ್ಥಗಳನ್ನು ತಯಾರಿಸುವುದು, ಕೋಲ್ಡ್‌ ಸ್ಟೋರೇಜ್‌ಗಳನ್ನು ಆರಂಭಿಸಿ, ರೈತರ
ಉತ್ಪನ್ನಗಳ ಬೆಲೆ ಕುಸಿತವನ್ನು ತಪ್ಪಿಸುವುದು ಸೇರಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಈ
ಯೋಜನೆಯ ಮುಖ್ಯ ಉದ್ದೇಶ.

ಯಾರಿಗೆ? ಎಷ್ಟು ಸಹಾಯಧನ?: ಈಗಾಗಲೇ ರಾಜ್ಯ ತೋಟಗಾರಿಕೆ ಇಲಾಖೆಯಡಿ 99 ರೈತ
ಉತ್ಪಾದಕ ಸಂಘಗಳಿವೆ. ಸಂಸ್ಕರಣ ಘಟಕ ಸ್ಥಾಪಿಸುವ ರೈತ ಉತ್ಪಾದಕ ಸಂಘಗಳಿಗೆ ಶೇ.75, ಖಾಸಗಿ ವ್ಯಕ್ತಿಗಳಿಗೆ ಶೇ.50ರಷ್ಟು ಸಹಾಯಧನ ದೊರೆಯಲಿದೆ. ಘಟಕಗಳು ಖರೀದಿಸುವ ರೈತ ಉತ್ಪನ್ನಗಳಲ್ಲಿ ಶೇ.20ರಷ್ಟು ಉಳ್ಳಾಗಡ್ಡಿ, ಟೊಮ್ಯಾಟೋ ಬೆಳೆಯಿಂದ ಪೇಸ್ಟ್‌, ಚಿಪ್ಸ್‌ ಸೇರಿ ಇನ್ನಿತರ ಸಿದಟಛಿ ಆಹಾರ ಹಾಗೂ ಅಡುಗೆಗೆ ಸಿದಟಛಿ ಪದಾರ್ಥಗಳನ್ನು (ರೆಡಿ ಟು ಕುಕ್‌) ತಯಾರಿ ಸುವುದು ಕಡ್ಡಾಯ. ಇನ್ನುಳಿದಿದ್ದನ್ನು ಕೋಲ್ಡ್‌ ಸ್ಟೋರೇಜ್‌ನಲ್ಲಿರಿಸಿ, ಗ್ರೇಡಿಂಗ್‌ ಹಾಗೂ ಸಂಸ್ಕರಣ ಪ್ರಕ್ರಿಯೆಗೆ ಒಳಪಡಿಸಿ ವಿದೇಶಕ್ಕೆ ರಫ್ತು ಇಲ್ಲವೇ ಸ್ಥಳೀಯ ಮಾರುಕಟ್ಟೆಗೆ ಸಾಗಿಸಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಕೃಷಿಯೇತರ ಜಾಗ ಅಗತ್ಯ: ಯೋಜನೆಯ ಕ್ಲಸ್ಟರ್‌ ವ್ಯಾಪ್ತಿಯ ರೈತ ಗುಂಪಿನ ಸದಸ್ಯರು, ಸ್ಥಳೀಯರು
ಸಂಸ್ಕರಣ ಘಟಕ ಆರಂಭಿಸಬಹುದು. ಸಂಸ್ಕರಣ ಘಟಕ ಆರಂಭಿಸಲು ಅಗತ್ಯವಿರುವಷ್ಟು ಸ್ವಂತ ಕೃಷಿ
ಯೇತರ ಜಾಗ ಹೊಂದಿರಬೇಕು. ಪ್ರಾಜೆಕ್ಟ್ಗೆ ಕೇಂದ್ರ ಸರ್ಕಾರ ಅನುಮೋದಿಸಿದ ಬಳಿಕ ಬ್ಯಾಂಕ್‌
ಸಾಲ ಪಡೆದು ಘಟಕ ಆರಂಭಿಸಬೇಕು. ಅಂಥವರಿಗೆ ಸರಕಾರದ ಸಬ್ಸಿಡಿ ದೊರೆಯಲಿದೆ ಎಂದು
ತೋಟಗಾರಿಕೆ ಇಲಾಖೆ ತಾಲೂಕು ಅಧಿಕಾರಿ ಶ್ರೀಶೈಲ ಬಿರಾದಾರ ತಿಳಿಸಿದ್ದಾರೆ.

Advertisement

ಯಾವ ಬೆಳೆ ಆಯ್ಕೆ?
ರಾಜ್ಯದಲ್ಲಿ ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ಉಳ್ಳಾಗಡ್ಡಿ ಹೆಚ್ಚಾಗಿ
ಬೆಳೆಯುವ ಧಾರವಾಡ, ಗದಗ ಜಿಲ್ಲೆಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು,
ಆಯಾ ಜಿಲ್ಲೆಗಳನ್ನು ಒಳಗೊಂಡಂತೆ ನಾಲ್ಕು ಕ್ಲಸ್ಟರ್‌ಗಳನ್ನಾಗಿ ವಿಂಗಡಿಸಲಾಗಿದೆ. ಸ್ಥಳೀಯ
ಉತ್ಪನ್ನಗಳನ್ನಾಧರಿಸಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವವರಿಗೆ ಕೇಂದ್ರ ಸರಕಾರ ಗರಿಷ್ಠ
ಮೊತ್ತದಲ್ಲಿ ಸಹಾಯಧನ ನೀಡಲಿದೆ.

ಬೆಳೆ ಉತ್ಪಾದಕ ಸಂಸ್ಥೆ
ತಲಾ 50 ರೈತರಿರುವ ಗುಂಪುಗಳನ್ನು ಒಳಗೊಂಡಂತೆ 1 ಸಾವಿರ ಜನರ ಒಂದು ಬೆಳೆ ಉತ್ಪಾದಕ ಸಂಸ್ಥೆಗಳನ್ನು ಮಾಡಲಾಗುತ್ತದೆ. ಅದರಂತೆ ಗದಗ ಜಿಲ್ಲೆಯಲ್ಲಿ 2, ಧಾರವಾಡದಲ್ಲಿ 3, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಐದು ತೋಟಗಾರಿಕೆ ಬೆಳೆ ಉತ್ಪಾದಕ ಸಂಸ್ಥೆಗಳಿವೆ. ಗದಗ ಜಿಲ್ಲೆಯಲ್ಲಿ ಸುಮಾರು 37,079 ಹೆಕ್ಟೇರ್‌ ಪ್ರದೇಶದಲ್ಲಿ ವಾರ್ಷಿಕ 3,31,850 ಟನ್‌ ಉಳ್ಳಾಗಡ್ಡಿ ಉತ್ಪಾದನೆಯಾಗುತ್ತಿದ್ದು, ಸುಮಾರು 33,185 ಲಕ್ಷ ರೂ. ಮೌಲ್ಯದ್ದಾಗುತ್ತದೆ.

● ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next