ಹಾಸನ: ನರಹಂತಕ ಕಾಡಾನೆಯ ಸೆರೆಗೆ ಜು.29ರಿಂದ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಐದು ಪಳಗಿದ ಆನೆಗಳು ಸೀಗೆಗುಡ್ಡ ಕಾವಲಿನ ವೀರಾಪುರದ ಬಳಿಯ ಕಾರ್ಯಾಚರಣೆಯ ಶಿಬಿರಕ್ಕೆ ಬಂದಿಳಿದಿವೆ.
ಕಳೆದ ಒಂದು ತಿಂಗಳನಿಂದ ಹಾಸನದ ಸುತ್ತಮುತ್ತ ಸಂಚರಿಸುತ್ತಿರುವ ಒಂಟಿ ಸಲಗವು ಜು.22 ರಾತ್ರಿ ಹಾಸನದ ಜವೇನಹಳ್ಳಿ ಮಠದ ಕೆರೆಯಲ್ಲಿ ಕಾಣಿಸಿ ಕೊಂಡಿತ್ತು. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಗಳು ಮತ್ತು ಸಿಬ್ಬಂದಿ ಜು.23 ರಂದು ಮುಂಜಾನೆ ಸೀಗೆಗುಡ್ಡದ ಅರಣ್ಯಕ್ಕೆ ಓಡಿಸಿದ್ದರು. ಕಾಡಾನೆಯು ಅದೇ ದಿನ ಸಂಜೆ ಅರಣ್ಯ ಇಲಾಖೆಯ ಕಾವಲುಗಾರ ಲಿಂಗರಸನಹಳ್ಳಿಯ ಅಣ್ಣೇಗೌಡ (50) ಎಂಬವರನ್ನು ತುಳಿದು ಸಾಯಿಸಿತ್ತು.
ಸೀಗೆಗುಡ್ಡ ಅರಣ್ಯದಲ್ಲಿ ಕಾಡಾನೆ: ಸೀಗೆಗುಡ್ಡ ಪರಿಸರ ದಲ್ಲಿಯೇ ಸಂಚರಿಸುತ್ತಿರುವ ನರಹಂತಕ ಆನೆ ಮತ್ತಷ್ಟು ಅನಾಹುತ ಉಂಟುಮಾಡುವ ಮೊದಲು ಅದನ್ನು ಹಿಡಿಯಲು ಅರಣ್ಯ ಇಲಾಖೆ ಸೀಗೆಗುಡ್ಡ ಅರಣ್ಯ ಪರಿಸರದಲ್ಲಿರುವ ವೀರಾಪುರ ಬಳಿ ಕಾರ್ಯಾ ಚರಣೆಯ ಶಿಬಿರ ನಿರ್ಮಿಸಿದ್ದು, ಕಾಡಾನೆ ಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದು, ಕೊಡಗು ಜಿಲ್ಲೆ ಕುಶಾಲ ನಗರ ಸಮೀಪದ ದುಬಾರೆ ಆನೆ ಶಿಬಿರದಿಂದ ಮೂರು, ಮತ್ತಿಗೋಡು ಆನೆ ಶಿಬಿರದಿಂದ ಎರಡು ಪಳಗಿದ ಆನೆಗಳು ಶನಿವಾರ ಐದು ಲಾರಿಗಳಲ್ಲಿ ಬಂದಿಳಿದವು.
ಶಾಪ್ ಶೂಟರ್ ಆಗಮಿಸುವ ನಿರೀಕ್ಷೆ: ಕಾಡಾನೆಯು ಸೀಗೆಗುಡ್ಡ ಅರಣ್ಯದಿಂದ ಹೊರ ಹೋಗದಂತೆ ಕಳೆದ ನಾಲ್ಕು ದಿನಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದು, ಭಾನುವಾರ ಶಾರ್ಪ್ ಶೂಟರ್ ಮತ್ತು ವನ್ಯಜೀವಿ ವೈದ್ಯರು ಕಾರ್ಯಾಚರಣೆ ಶಿಬಿರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಆನೆಯನ್ನು ಹಿಡಿಯಲು ಅರಿವಳಿಕೆ ಚುಚ್ಚುಮದ್ದು ಇನ್ನೂ ಬಂದಿಲ್ಲ. ಭಾನುವಾರ ಸಂಜೆ ವೇಳೆಗೆ ಚುಚ್ಚುಮದ್ದು ಬರಬಹುದು. ಇಲ್ಲದಿದ್ದರೆ ಒಂಡೆರೆಡು ದಿನ ಕಾರ್ಯಾಚರಣೆ ಮುಂದೆ ಹೋಗಬಹುದು. ಭಾನುವಾರ ಬೆಳಗ್ಗೆ ವೇಳೆಗೆ ಅರಿವಳಿಕೆ ಚುಚ್ಚುಮದ್ದು ಲಭ್ಯವಾದರೆ ಭಾನುವಾರವೇ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು ಎಂದೂ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಂಡಿನಿಂದ ಬೇರ್ಪಟ್ಟ ಸಲಗ: ಹಿಂಡಿನಿಂದ ಬೇರ್ಪ ಟ್ಟಿರುವ ಒಂಟಿ ಸಲಗವು ಒಂದು ತಿಂಗಳಿನಿಂದ ಹಾಸನ ತಾಲೂಕಿನಲ್ಲೇ ಸಂಚರಿಸುತ್ತಿದೆ. ಒಂದು ತಿಂಗಳ ಹಿಂದೆ ಹಾಸನದ ಹುಣಸಿನಕೆರೆಯಲ್ಲಿ ಕಾಣಿಸಿಕೊಂಡಿದ್ದ ಸಲಗ ಹಾಸನ ನಗರದ ಜವೇನಹಳ್ಳಿ ಮಠದ ಬಳಿ ಇರುವ ಪೆನ್‌ಷನ್ ಮೊಹಲ್ಲಾದ ಕೆರೆಯಲ್ಲಿ ಜು.22 ರಾತ್ರಿ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಆರಣ್ಯಾ ಧಿಕಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ ರಾತ್ರಿ 3.30 ರ ವೇಗೆಗೆ ಅಗತ್ಯ ಸಿಬ್ಬಂದಿಯೊಂದಿಗೆ ಆಗಮಿಸಿ ಆನೆಯನ್ನು ಬೆಳಗಾಗುವುದರೊಳಗೆ ಹಾಸನ ನಗರ ದಿಂದ ಹೊರಕ್ಕೆ ಓಡಿಸಿದರು.
ಉದ್ಧೂರು, ಶಂಖ, ಅತ್ತಿಹಳ್ಳಿ, ಚಿನ್ನೇನಹಳ್ಳಿ, ಇಬ್ದಾ ಣೆಯ ಹೊರವಲಯದಲ್ಲಿ ಹಿಡುವಳಿ ಜಮೀನಿನ ಮೂಲಕ ಸೀಗೆಗುಡ್ಡ ಅರಣ್ಯಕ್ಕೆ ಅಟ್ಟಿ ನಿಟ್ಟುಸಿರು ಬಿಟ್ಟಿ ದ್ದರು. ಆದರೆ ಸಂಜೆ ವೇಳೆಗೆ ಕಾಡಾ ನೆಯು ಫಾರೆಸ್ಟ್ ವಾಚರ್ ಅಣ್ಣೇಗೌಡ ಎಂಬವರನ್ನು ಬಲಿ ತೆಗೆದು ಕೊಂಡಿತ್ತು. ಇದಕ್ಕೂ ಮೊದಲು ಈ ಕಾಡಾನೆಯು ಇಬ್ಬರನ್ನು ಬಲಿತೆಗೆದುಕೊಂಡಿತ್ತು. ಹಾಗಾಗಿ ಈ ನರ ಹಂತಕ ಆನೆಯನ್ನು ಹಿಡಿಯುವುದು ಅನಿವಾರ್ಯ ಎಂದು ಜಿಲ್ಲೆಯ ಅರಣ್ಯಾಧಿಕಾರಿಗಳು ಹಿರಿಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಆನೆ ಹಿಡಿಯಲು ಅನುಮತಿ ನೀಡಿದ್ದಾರೆ.