ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ತೋಳಾರ್ ಮಾವಿನ ತೋಪಿನಲ್ಲಿ ಕಳೆದ ಹಲವು ದಿನಗಳಿಂದಲೂ ಚಿರತೆ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಅರಣ್ಯಾ ಇಲಾಖೆ ಚಿರತೆ ಸೆರೆ ಹಿಡಿಯಲು ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಬಳಿ ಬೋನ್ ಇರಿಸಿ ಸತತವಾಗಿ ಒಂದು ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ ಫಲವಾಗಿ ಡಿ.12 ರಂದು ಹೆಣ್ಣು ಚಿರತೆ ಸೆರೆ ಬಿದ್ದಿದ್ದು, ಒಂದೇ ಕಡೆಯಲ್ಲಿ ಮೂರನೇ ಚಿರತೆ ಯೊಂದು ಸೆರೆಯಾದಂತಾಗಿದೆ.
ಬೋನ್‌ನಲ್ಲಿ ಸೆರೆಯಾದ ಚಿರತೆ, ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿರುವ ಸಾರ್ವಜನಿಕರು: ಚಿರತೆ ವೊಂದು ಬೋನಿನಲ್ಲಿ ಸೆರೆಯಾಗಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸ್ಥಳದಲ್ಲಿ ಪರಿಸರದ ನೂರಾರು ಮಂದಿ ಜಮಾಯಿಸಿ ಕಾತುರದಿಂದ ವೀಕ್ಷಿಸುತ್ತಿರುವ ದೃಶ್ಯ ಸಾಮನ್ಯವಾಗಿ ಕಂಡು ಬಂತು. ಈ ಸಂದ‘ರ್ದಲ್ಲಿ ನೆರೆದವರು ಬೋನಿನಲ್ಲಿರುವ ಚಿರತೆಯ ದೃಶ್ಯವನ್ನು ತಮ್ಮ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುವ ತವಕದಲ್ಲಿದ್ದರು.
ಗ್ರಾ.ಪಂ.ನ ಸಹಕಾರ: ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಚಿರತೆಯ ಹೆಜ್ಜೆ ಗುರುತು ಇರುವ ಸಮೀಪದಲ್ಲಿಯೇ ಬೋನ್ ಇರಿಸಿದರು ಒಂದೆಡೆ ನಾಯಿ ಮರಿಯನ್ನು ಬೋನಿನಲ್ಲಿ ಇರಿಸಿ, ಸ್ಥಳೀಯರಾದ ಸುರೇಶ್ ದೇವಾಡಿಗ ಮತ್ತು ಸತೀಶ್ ದೇವಾಡಿಗ ಅವರ ಸಹಕಾರದಿಂದ ಚಿರತೆ ಬೋನಿಗೆ ಬಿದ್ದಿದ್ದು ಆಪರೇಷನ್ ಚೀತಾ ಕಾರ್ಯಾಚರಣೆ ಯಶಸ್ವಿಗೊಳಿಸಿದಂತಾಗಿದೆ.
ನಿರಂತರ ಒಂದು ತಿಂಗಳ ಕಾರ್ಯಾಚರಣೆ : ಈ ಹಿಂದೆ ಆ.4 ,2018 , ಅ.6, 2019, ಡಿ.12, 2019 ಸೇರಿದಂತೆ ಇದೇ ಸ್ಥಳದಲ್ಲಿ ಇರಿಸಿದ ಬೋನ್‌ಗೆ ಮೂರು ಚಿರತೆಗಳು ಸೆರೆಯಾದಂತಾಗಿದೆ.
ಮತ್ತೆ ಚಿರತೆ ಮರಿಗಳ ಸಂಚಾರ ?: ಗ್ರಾ.ಪಂ.ಮಾಲಾಡಿ, ಸುಳಿಗುಂಡಿ ಹಾಗೂ ಅಸೋಡು ಪರಿಸರದಲ್ಲಿ ಚಿರತೆ ಸಂಚಾರವಿದೆ ಎನ್ನುವ ಅನುಮಾನಗಳು ವ್ಯಕ್ತವಾಗಿದೆ ಮೂರು ಕರು ಸೇರಿದಂತೆ ಪರಿಸರದಲ್ಲಿರುವ ನಾಯಿ ಮರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಪ್ರಸ್ತುತ ಸ್ಥಳೀಯರು ಆತಂಕದ ನೆರಳಿನಲ್ಲಿ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.