Advertisement

ಬಾಲಾಕೋಟ್ ದಾಳಿಯ ಕೋಡ್ ನೇಮ್ “ಆಪರೇಶನ್ ಬಂದರ್”?ಏನಿದರ ಗೂಢಾರ್ಥ ಗೊತ್ತಾ!

12:51 PM Jun 22, 2019 | Nagendra Trasi |

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ಫೆಬ್ರುವರಿ 26ರಂದು 12 ಮಿರಜ್ 2000 ಫೈಟರ್ ವಿಮಾನ ದಾಳಿ ನಡೆಸಿದ್ದು, ನೂರಾರು ಉಗ್ರರು ಸಾವನ್ನಪ್ಪಿದ್ದು ಇದೀಗ ಹಳೆಯ ವಿಷಯ..ಆದರೆ ಈ ಕಾರ್ಯಾಚರಣೆಯನ್ನು ರಹಸ್ಯವಾಗಿ ಇಟ್ಟ ಕೋಡ್ ನೇಮ್ ಹೆಸರು “ಆಪರೇಶನ್ ಬಂದರ್” ಎಂಬುದಾಗಿ ಬಯಲಾಗಿದೆ.

Advertisement

ಜೈಶ್ ಎ ಮೊಹಮ್ಮದ್ ಉಗ್ರರು ಅಡಗಿದ್ದ ಬಾಲಾಕೋಟ್ ಶಿಬಿರದ ಮೇಲೆ ದಾಳಿ ನಡೆಸುವ ವಿಚಾರ ಬಹಿರಂಗವಾಗಬಾರದು ಎಂಬ ನಿಟ್ಟಿನಲ್ಲಿ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಅದಕ್ಕೆ “ಆಪರೇಶನ್ ಬಂದರ್” ಎಂದು ನೀಡಲಾಗಿತ್ತು ಎಂಬುದಾಗಿ ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳ ವರದಿ ವಿವರಿಸಿದೆ.

ಆದರೆ ಬಾಲಾಕೋಟ್ ಉಗ್ರರ ಶಿಬಿರದ ಮೇಲೆ ದಾಳಿ ನಡೆಸುವ ಕೋಡ್ ನೇಮ್ ಅನ್ನು ಆಪರೇಶನ್ ಬಂದರ್ ಎಂದು ಇಟ್ಟಿರುವ ಬಗ್ಗೆ ಯಾವುದೇ ವಿವರಣೆ ಕೊಟ್ಟಿಲ್ಲ. ಮೂಲಗಳ ಪ್ರಕಾರ, ಭಾರತೀಯ ಯುದ್ಧ ಸಂಸ್ಕೃತಿಯಂತೆ ಯಾವಾಗಲೂ ವಿಶೇಷ ಸ್ಥಳಗಳಲ್ಲಿ ಮಂಗಗಳನ್ನು ಜೊತೆಗಿಟ್ಟುಕೊಳ್ಳುತ್ತಿದ್ದರು. ಇದನ್ನು ರಾಮಾಯಣದಲ್ಲಿ ಗಮನಿಸಬಹುದಾಗಿದೆ.

ಭಗವಂತ ರಾಮನ ಬಂಟ ಭಗವಾನ್ ಹನುಮಂತ ಕೂಡಾ ಶ್ರೀಲಂಕಾದೊಳಕ್ಕೆ ಸದ್ದಿಲ್ಲದೆ ನುಸುಳಿ ಹೋಗಿದ್ದ ಮತ್ತು ರಾಕ್ಷಸ ರಾವಣನ ಲಂಕಾ ನಗರಿಯನ್ನು ಸಂಪೂರ್ಣವಾಗಿ ಭಸ್ಮ ಮಾಡಿಬಿಟ್ಟಿದ್ದ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next