ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿದ್ದ ಇಬ್ಬರು ಚಾಲಾಕಿ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಚಿನ್ನವನ್ನು ಅಕ್ರಮ ಸಾಗಣೆ ಮಾಡಲು ಯೋಜನೆ ರೂಪಿಸಿದ್ದ ಆರೋಪಿತರು, ತರೆ ಮರೆಯಲ್ಲಿ ಅದನ್ನು ಸಾಗಿಸಲು ಮರೆಮಾಚಿ ಬಟ್ಟೆ ಹಾಗೂ ಟೈಗರ್ ಬಾಂಬ್ ಡಬ್ಬವನ್ನು ಉಪಯೋಗಿಸಿ ಚಾಲಾಕಿತನ ಮೆರೆದಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದಾಗ, ಎಲ್ಲ ಪ್ರಯಾಣಿಕರನ್ನು ತೀಕ್ಷ್ಣವಾಗಿ ತಪಾಸಣೆ ಮಾಡುವಾಗ ಸ್ಕ್ಯಾನಿಂಗ್ ನಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.
ಜಿನ್ಸ್ ಪ್ಯಾಂಟ್ ಹಾಗೂ ಮಕ್ಕಳ ಬಟ್ಟೆಯ ಹುಕ್ ನಲ್ಲಿ ರೇಡಿಯಂ ಬಣ್ಣ ಹಾಕಿ ಚಿನ್ನದ ಹುಕ್ಕನ್ನು ಇರಿಸಲಾಗಿದ್ದು, ಅದೇ ರೀತಿ ತಲೆ ನೋವಿಗೆ ಉಪಯೋಗಿಸುವ ಟೈಗರ್ ಬಾಂಬ್ ನ ಮುಚ್ಚಳವನ್ನು ಚಿನ್ನದಿಂದ ಮಾಡಿ, ಅದಕ್ಕೆ ಬಣ್ಣ ಬಳಿದು ಚಿನ್ನ ಸಾಗಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಅಂದಾಜು 244.5 ಗ್ರಾಂ ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಯತ್ನಿಸಲಾಗಿದೆ ಬಂಧಿತರಿಂದ ವಶಕ್ಕೆಪಡೆದ ಚಿನ್ನದ ಮೌಲ್ಯವೂ 12.57 ಲಕ್ಷ ಎಂದು ತಿಳಿದು ಬಂದಿದ್ದು. ಪ್ರಕರಣ ದಾಖಲಿಸಿ ತನಿಖೆ ಪ್ರಗತಿಯಲ್ಲಿದೆ.