Advertisement

Operation; ಎರಡೂ ಕೈ ಕಳಕೊಂಡ ಪೇಂಟರ್‌ ಬದುಕಲ್ಲಿ ಹೊಸ ಬೆಳಕು

12:26 AM Mar 07, 2024 | Team Udayavani |

ಹೊಸದಿಲ್ಲಿ: ಆತ ಪೇಂಟರ್‌. ಅಪಘಾತದಲ್ಲಿ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದ. ಇದರಿಂದ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಬಡತನದ ಹಿನ್ನೆಲೆಯ ಆತ ಜೀವನದ ಅಂಚಿಗೆ ಮುಖ ಮಾಡಿದ್ದ. ಆದರೆ ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯ ವೈದ್ಯರು ಆತನ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿದ್ದಾರೆ. ಇನ್ನಾತ ಮತ್ತೆ ಬಣ್ಣ ಹಚ್ಚಬಹುದು.

Advertisement

45 ವರ್ಷದ ಪೇಂಟರ್‌ 2020ರಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದ. ಭವಿಷ್ಯದ ಕತ್ತಲೆಯಲ್ಲಿದ್ದ ಆತನಿಗೆ ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯ ವೈದ್ಯರು ಮಹಿಳೆಯ ಎರಡು ಕೈಗಳನ್ನು ಜೋಡಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ದಕ್ಷಿಣ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ಮಾಜಿ ಆಡಳಿತ ಮುಖ್ಯಸ್ಥೆ ಮೀನಾ ಮೆಹ್ತಾ ಅವರ ಮಿದುಳು ನಿಷ್ಕ್ರಿಯಗೊಂ ಡಿದ್ದರಿಂದ ಪೇಂಟರ್‌ಗೆ ಆಕೆಯ ಎರಡೂ ಕೈಗಳನ್ನು ಜೋಡಿಸಲಾಗಿದೆ. ಅಂಗಾಂಗ ದಾನಕ್ಕೆ ಮಹಿಳೆ ಮೊದಲೇ ಪ್ರತಿಜ್ಞೆ ಮಾಡಿದ್ದರಿಂದ ಇದು ಸಾಧ್ಯ ವಾಗಿದೆ. ಪುರುಷನಿಗೆ ಮಹಿಳೆಯ ಕೈ ಜೋಡಿಸುವ ಪ್ರಪ್ರಥಮವಾದ ಶಸ್ತ್ರಚಿಕಿ ತ್ಸೆಯನ್ನು ಆಸ್ಪತ್ರೆ ಯ ಎಲ್ಲ ವಿಭಾಗಗಳ ವೈದ್ಯರ ನೇತೃತ್ವದಲ್ಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next