Advertisement

20 ಸಾವಿರ ಕೋಟಿ ರೂ. ಅಭಿವೃದ್ಧಿ ಕಾಮಗಾರಿ: ಪಿಣರಾಯಿ ವಿಜಯನ್‌

12:31 AM Dec 09, 2019 | Sriram |

ಕಾಸರಗೋಡು: ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ವರೆಗೆ ಲೋಕೋಪಯೋಗಿ ಕ್ಷೇತ್ರದಲ್ಲಿ 20 ಸಾವಿರ ಕೋಟಿ ರೂ.ಗಳ ಕಾಮಗಾರಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು.

Advertisement

ಬೇಡಡ್ಕ – ಪುಲ್ಲೂರು ಪೆರಿಯ ಪಂಚಾಯತ್‌ಗಳನ್ನು ಸಂಪರ್ಕಿಸುವ ಜಿಲ್ಲೆಯಲ್ಲೇ ಅತ್ಯಂತ ಎತ್ತರದ ಆಯಂಕಡವು ಸೇತುವೆಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ಸಚಿವ ಇ. ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿ ದ್ದರು. ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ಅತಿಥಿಯಾಗಿದ್ದರು. ಶಾಸಕ ಎಂ. ರಾಜಗೋಪಾಲನ್‌, ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಡಿಸಿ ಡಾ| ಡಿ. ಸಜಿತ್‌ಬಾಬು, ಬ್ಲಾಕ್‌ ಪಂ. ಅಧ್ಯಕ್ಷ ಓಮನಾ ರಾಮಚಂದ್ರನ್‌, ಎಂ. ಗೌರಿ, ಗ್ರಾ.ಪಂ. ಅಧ್ಯಕ್ಷ ಸಿ. ರಾಮಚಂದ್ರನ್‌, ಶಾರದಾ ಎಸ್‌.ನಾಯರ್‌, ವಿ.ಪಿ.ಪಿ. ಮುಸ್ತಫ, ಕಾಂಞಂಗಾಡ್‌ ಬ್ಲಾಕ್‌ ಪಂ. ಸದಸ್ಯೆ ಉಷಾ ಚಂದ್ರನ್‌ ಉಪಸ್ಥಿತರಿದ್ದರು.ಮುಖ್ಯ ಎಂಜಿನಿಯರ್‌ ಎಸ್‌. ಮನಮೋಹನ್‌ ವರದಿ ಮಂಡಿಸಿದರು. ಶಾಸಕ ಕೆ. ಕುಂಞಿರಾಮನ್‌ ಸ್ವಾಗತಿಸಿದರು. ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಪಿ.ಕೆ. ಮಿನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next