Advertisement

ಕಲಿಕಾ ಕೇಂದ್ರ ಉದ್ಘಾಟನೆ

05:46 PM Nov 04, 2019 | Suhan S |

ತುಮಕೂರು: ಹೆಗ್ಗೆರೆ ಗ್ರಾಮವನ್ನು ಪೂರ್ಣ ವಿದ್ಯಾವಂತರಗ್ರಾಮವನ್ನಾಗಿ ರೂಪಿಸಲು ಕಲಿಕಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ನಿವೃತ್ತ ತಹಶೀಲ್ದಾರ್‌ ವೈ.ಜಿ. ಕಾಂತವೀರಯ್ಯಹೇಳಿದರು.

Advertisement

ನಗರದ ಹೆಗ್ಗೆರೆಯ ಗಣಪತಿ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತ ನಾಡಿದರು. ಗ್ರಾಮದಲ್ಲಿರುವ ಅವಿದ್ಯಾವಂತರು ಕಲಿಕಾ ಕೇಂದ್ರದಲ್ಲಿ ಅಕ್ಷರಾಭ್ಯಾಸ ಮಾಡಿ ವಿದ್ಯೆ ಕಲಿತು ಬದುಕು ರೂಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ನಿವೃತ್ತ ಶಿಕ್ಷಕರು ವಿದ್ಯೆ ಕಲಿಸಲು ಮುಂದಾಗಿರುವುದು ಪ್ರಶಂಸನೀಯ ಎಂದರು.ಹಿರಿಯ ನಾಗರಿಕ ಸಿದ್ದಲಿಂಗಪ್ಪ ಕನ್ನಡ ವರ್ಣಮಾಲೆ ಬರೆದು ಬೋಧಿಸಿದರು. ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ. ಶಿವರುದ್ರಯ್ಯ, ನಿವೃತ್ತ ಸಾರಿಗೆ ಇಲಾಖೆ ಮೇಲ್ವಿಚಾರಕ ಕುಮಾರ್‌, ನಿವೃತ್ತ ಶಿಕ್ಷಕರಾದ ಮಹದೇವಪ್ಪ ಹಾಗೂ ಈಶ್ವರಪ್ಪ, ಪ್ರಧಾನ ಅರ್ಚಕ ಪ್ರಮೋದ್‌, ಚಿತ್ರಕಲಾ ಶಿಕ್ಷಕ ಪಿ.ಎಸ್‌. ಸುರೇಶ್‌, ಚಂದ್ರಶೇಖರ್‌ ಗೌಡ, ವಕೀಲ ಹನುಮಂತರಾಯಪ್ಪ, ನಿವೃತ್ತ ಮುಖ್ಯ ಎಂಜಿನಿಯರ್‌ ಗಂಗಾಧರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next