Advertisement

ಜೂನ್‌ನಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

12:38 AM Feb 16, 2020 | Team Udayavani |

ಬೆಂಗಳೂರು: ಉದ್ದಿಮೆಗಳಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡಲು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ದಾಬಸ್‌ಪೇಟೆಯಲ್ಲಿ ಸೆಂಟರ್‌ ಆಫ್ ಎಕ್ಸಲೆನ್ಸ್ ಅಯಂಡ್‌ ಇನೋವೇಷನ್‌ ಕೇಂದ್ರ ನಿರ್ಮಿಸಲಾಗುತ್ತಿದ್ದು, ಜೂನ್‌ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್‌.ರಾಜು ಹೇಳಿದರು.

Advertisement

ಅವ್ವೆರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರಬೇತಿ ಕೇಂದ್ರ ಸ್ಥಾಪನೆಗೆ ಕೆಐಎಡಿಬಿ ಮಂಡಳಿ 5 ಎಕರೆ ಜಮೀನನ್ನು ಶೇ. 50ರ ದರದಲ್ಲಿ ಹಂಚಿಕೆ ಮಾಡಿದೆ. ಈ ಕೇಂದ್ರದ ಯೋಜನಾ ವೆಚ್ಚ 35 ಕೋಟಿ ರೂ. ಆಗಿದ್ದು. ರಾಜ್ಯ ಸರ್ಕಾರ, ಬ್ಯಾಂಕ್‌ ಸಾಲ, ಕಾಸಿಯಾ ತಲಾ 5 ಕೋಟಿ ರೂ. ನಿರ್ಮಾಣ ಕಾರ್ಯಕ್ಕೆ ಬಳಸಲಾಗಿದೆ. ಉಳಿದ 20 ಕೋಟಿ ರೂ. ನೀಡುವ ಮನವಿಗೆ ಸಿಎಂಸ್ಪಂದಿಸಿದ್ದಾರೆ ಎಂದರು.

ತರಬೇತಿ ಕೇಂದ್ರದಲ್ಲಿ 50 ಸಾವಿರ ಚ.ಅಡಿ ಪ್ರದೇಶದಲ್ಲಿ ಪ್ರದರ್ಶನ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, 400 ಮಳಿಗೆಗಳಿಗೆ ಸ್ಥಳಾವಕಾಶ ಸಿಗಲಿದೆ. ಇದರ ಜತೆಗೆ 6 ಕಲಿಕಾ ಕೇಂದ್ರ, 6 ತಂತ್ರಜ್ಞಾನ ಕೇಂದ್ರ, ಆಡಳಿತಾತ್ಮಕ ವಿಭಾಗ, ಫ‌ುಡ್‌ಕೋರ್ಟ್‌, ಡಿಜಿ ಕೊಠಡಿ ನಿರ್ಮಿಸಲಾಗಿದೆ ಎಂದರು.

ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲೂ ಉದ್ಯೋಗಿಗಳ ಕೊರತೆ ಹೆಚ್ಚಿದೆ. ಅದಕ್ಕಾಗಿ ಕಾಸಿಯಾ ಯುವಜನತೆಗೆ ಗಾರ್ಮೆಂಟ್ಸ್‌, ಫ‌ುಟ್‌ವೇರ್‌ ಸೇರಿದಂತೆ ಐದು ಉದ್ದಿಮೆಗಳ ತಯಾರಿಕಾ ಕೌಶಲ್ಯ ತರಬೇತಿ ಕುರಿತು 3 ತಿಂಗಳ ಕೋರ್ಸ್‌ ಆರಂಭಿಸಲಾಗುವುದು.

3ವರ್ಷದಲ್ಲಿ 25 ಲಕ್ಷ ಉದ್ಯೋಗ ಸೃಷ್ಟಿ ಸುವ ಗುರಿಯೊಂದಿಗೆ ಹೊಸ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು. ಜೂನ್‌ನಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಸಿಎಂ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು.

Advertisement

ಕಾಸಿಯಾ ಕ್ಲಸ್ಟರ್‌ ನಿರ್ಮಾಣಕ್ಕೆ ಚಿಂತನೆ: ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ನಗರ ಪ್ರದೇಶದಲ್ಲಿ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದು, ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಸೇರಿದಂತೆ ಹಲವೆಡೆ ಇರುವ ಉದ್ದಿಮೆಗಳನ್ನು ಒಂದೇ ಕಡೆ ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿದೆ. ಆದ್ದರಿಂದ ಬೆಂಗಳೂರು ಹೊರ ವಲಯದಲ್ಲಿ 300 ಎಕರೆ ಪ್ರದೇಶದಲ್ಲಿ ಕಾಸಿಯಾ ಕ್ಲಸ್ಟರ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಿಎಂ ಜತೆ ಚರ್ಚಿಸಲಾಗಿದ್ದು, ಭೂ ಖರೀದಿ ನಿಯಮ ಸಡಿಲಿಕೆಗೆ ಮನವಿ ಮಾಡಲಾಗಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ: ಪೀಣ್ಯ ಸೇರಿ ಹಲವು ಕೈಗಾರಿಕಾ ಪ್ರದೇಶದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಏಕಾಏಕಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಿದ್ದು, ಇದರಿಂದ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಮಗಳು ಉಲ್ಲಂ ಸಿದರೆ ನೋಟಿಸ್‌ ನೀಡಿ ಕ್ರಮಕೈಗೊಳ್ಳಬೇಕು. ಅದನ್ನು ಬಿಟ್ಟು ವಿದ್ಯುತ್‌ ಕಡಿತಗೊಳಿಸು ವುದು ಯಾವ ನ್ಯಾಯ. ನಿಯಮಗಳ ಬಗ್ಗೆ ಸಭೆ, ಮೇಳಗಳ ಮೂಲಕ ಮಾಹಿತಿ ನೀಡಬೇಕೆಂದು ಕಾಸಿಯಾ ಅಧ್ಯಕ್ಷ ಆರ್‌.ರಾಜು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next