Advertisement
ತೋಟಬೆಂಗರೆ ಮಹಾಜನ ಸಭಾ ವತಿಯಿಂದ ಪ್ರಯಾಣಿಕರ ಸಂಚಾರಕ್ಕೆ ನೀಡಿರುವ ಕುಮಾರಧಾರ ಪ್ರಯಾಣಿಕ ದೋಣಿ ಹಾಗೂ ಬೋಳೂರು ಸುಲ್ತಾನ್‌ಬತ್ತೇರಿ ಬಳಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಪ್ರಯಾಣಿಕರ ಕಿರು ಜೆಟ್ಟಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೊದಲಿಗೆ ಪ್ರಾಯೋಗಿಕವಾಗಿ ತೇಲುವ ಜೆಟ್ಟಿ ನಿರ್ಮಿಸಿ ಪರಿಶೀಲಿಸಿ ಅದು ಬಹು ಉಪಯೋಗಿ ಎಂದು ಕಂಡುಬಂದಲ್ಲಿ ಧಾರಣಾ ಸಾಮರ್ಥ್ಯ ಸೇರಿದಂತೆ ತಾಂತ್ರಿಕ ಅನುಮೋದನೆ ಗಳನ್ನು ಪಡೆದು ಬಳಿಕ ಶಾಶ್ವತ ಜೆಟ್ಟಿ ನಿರ್ಮಿಸಲಾಗುವುದು. ಜತೆಗೆ ಡ್ರೆಜ್ಜಿಂಗ್ ಯಂತ್ರ ಖರೀದಿ ಸಲು ಸರಕಾರ ಆಸಕ್ತವಾಗಿದೆ ಎಂದರು.
ಮೀನುಗಾರರ ನೆಮ್ಮದಿ, ಭದ್ರತೆಗೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಕೃಷಿ ಮಾದರಿಯಲ್ಲಿ ಎಲ್ಲ ಮೀನುಗಾರ ಕುಟುಂಬಗಳಿಗೂ ಕ್ರೆಡಿಟ್ ಕಾರ್ಡ್ ನೀಡಲಾಗುವುದು ಎಂದರು. ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ಮೀನುಗಾರರಿಗೆ ತೀವ್ರ ಸಮಸ್ಯೆಯಾಗುತ್ತಿದೆ. 29 ಕೋಟಿ ರೂ. ಅನುದಾನ ಲಭ್ಯವಿದ್ದು, ಶೀಘ್ರವೇ ಡ್ರೆಜ್ಜಿಂಗ್ ಆರಂಭವಾಗ ಲಿದೆ ಎಂದರು. ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ಹಳೆ ಬಂದರು ಪರಿಸರ ದಲ್ಲಿ ಸ್ಥಗಿತಗೊಂಡಿದ್ದ ಮೂರನೇ ಹಂತದ ಜೆಟ್ಟಿ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಬೆಂಗರೆ ಯಲ್ಲಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೇಡಿಕೆ ಇದ್ದು, ಈ ಬಗ್ಗೆ ಉಸ್ತುವಾರಿ ಸಚಿವರು ಗೃಹಸಚಿವರ ಗಮನಕ್ಕೆ ತಂದಿದ್ದಾರೆ ಎಂದರು.
Related Articles
Advertisement
ದೋಣಿ ಚಲಾಯಿಸಿದ ಸಚಿವಫೆರಿ ದೋಣಿ ಸೇವೆಯನ್ನು ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ವತಃ ದೋಣಿಯನ್ನು ಚಲಾಯಿಸಿದರು. ಬಳಿಕ ಶಾಸಕರ ಜತೆಗೂಡಿ ಬೊಳೂರು ವರೆಗೆ ದೋಣಿಯಲ್ಲಿಯೇ ಪ್ರಯಾಣಿಸಿ ಮೀನುಗಾರರ ಅಹವಾಲು ಸ್ವೀಕರಿಸಿದರು.