Advertisement

ಕೊಪ್ಪಳ ನಗರ ಸಮಸ್ಯೆ ಶೀಘ್ರ ಪರಿಹರಿಸುವ ಭರವಸೆ

05:03 PM Jun 29, 2020 | Suhan S |

ಕೊಪ್ಪಳ: ನಗರದ ಅಶೋಕ ವೃತ್ತದಿಂದ ಕಲ್ಯಾಣನಗರದ ಮೂಲಕ ಕಿನ್ನಾಳ ರಸ್ತೆಯ ಮಧ್ಯದಲ್ಲಿನ ವಿದ್ಯುತ್‌ ದೀಪಗಳ ಪ್ರಾರಂಭೋತ್ಸವವನ್ನು ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, 26ನೇ ವಾರ್ಡನ ನಗರಸಭೆ ಸದಸ್ಯೆ ದೇವಕ್ಕ ಲಕ್ಷ್ಮಣ ಕಂದಾರಿ ಅವರು ನೆರವೇರಿಸಿದರು.

Advertisement

ಕಿನ್ನಾಳ ರಸ್ತೆಯಲ್ಲಿ ಕತ್ತಲು ಇದ್ದಿದ್ದರಿಂದ ಸಂಜೆ ವೇಳೆ ಸರಗಳ್ಳತನದ ಪ್ರಕರಣಗಳು ನಡೆಯುತ್ತಿದ್ದವು. ಬಹುದಿನ ಬೇಡಿಕೆಈಡೇರಿದ್ದಕ್ಕೆ ವಾರ್ಡ್‌ನ ನಿವಾಸಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. 26ನೇ ವಾರ್ಡನಲ್ಲಿನ ರಾಜಾಕಾಲುವೆ ಸಮಸ್ಯೆ, ಉದ್ಯಾನವನ ನಿರ್ಮಾಣ, ರೈಲ್ವೆ ಕೆಳಸೇತುವೆಗೆ ಡಾಂಬರೀಕರಣ ಹಾಗೂ ಇನ್ನಿತರ ಸಮಸ್ಯೆಗಳನ್ನು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಸಂಸದ ಹಾಗೂ ಶಾಸಕರು ಜನತೆಗೆ ಭರವಸೆ ನೀಡಿದರು. ಅಲ್ಲದೇ, ಎಫ್‌ಸಿಐ ಗೋದಾಮಿನಿಂದ ಉಳಿದ ವಿದ್ಯುತ್‌ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.

ಕೋವಿಡ್‌-19 ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಡಿಸಿ ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ‌ಗರಸಭೆಯ ಪೌರಾಯುಕ್ತ ಟಿ. ಮಂಜುನಾಥ ಹಾಗೂ ಅವರ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಸನ್ಮಾನಿಸಲಾಯಿತು. ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಪ್ಪಣ್ಣ ಪದಕಿ, ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ನ್ಯಾಯವಾದಿಗಳಾದ ಫಿರಾಹುಸೇನ್‌ ಹೊಸಳ್ಳಿ, ವಿಜಯ್‌ ಅಮೃತರಾಜ್‌, ಶ್ರೀನಿವಾಸ ನರಗುಂದ, ಹನುಮಂತಪ್ಪ ನೇಲಜೇರಿ, ರಾಜೂರ, ಎಸ್‌.ಎಂ. ಕಂಬಾಳಿಮಠ, ರಾಘವೇಂದ್ರ ನರಗುಂದ, ಬಸವರಾಜ ಬನ್ನಿಕೊಪ್ಪ, ಗಿರೀಶ್‌ ಕಣವಿ, ಶರಣಯ್ಯಸ್ವಾಮಿ, ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ಅಜೀಮ್‌ ಅತ್ತಾರ, ಸೋಮಣ್ಣ ಹಳ್ಳಿ, ಮುತ್ತುರಾಜ ಕುಷ್ಟಗಿ, ಗವಿಸಿದ್ಧಪ್ಪ ಚಿನ್ನೂರ, ಗುತ್ತಿಗೆದಾರದ ಖಾಜವಲಿ ಬನ್ನಿಕೊಪ್ಪ, ಮೆಹಬೂಬ್‌, ಮಹೇಶ ಹಳ್ಳಿಗುಡಿ, ಪವರ್‌ ಮ್ಯಾನ್‌ ಶರಣಬಸವರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next