ಬರಗೂರು: ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚುಪಾಸಿಟಿವ್ ಕೇಸ್ ಉಲ್ಬಣಿಸುತ್ತಿದ್ದು, ಈಭಾಗದಲ್ಲಿ ಕೋವಿಡ್ ಕೇರ್ ಸೆಂಟರ್‌ಮಾಡುವುದು ಉತ್ತಮ ಸಂಗತಿ ಎಂದುಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಡಾ.ನಂದೀಶ್ ಹೇಳಿದರು.
ಶಿರಾ ತಾಲೂಕು ಬರಗೂರು ಉಪಪೊಲೀಸ್ ಠಾಣಾ ಆವರಣದಲ್ಲಿ ಆರೋಗ್ಯಇಲಾಖೆ, ಪೊಲೀಸ್ ಇಲಾಖೆ, ಗ್ರಾಮದಮುಖಂಡರು, ಪಂಚಾಯ್ತಿ ಅಧಿಕಾರಿಗಳುಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆದತುರ್ತು ಸಭೆಯಲ್ಲಿ ಮಾತನಾಡಿದ ಅವರು,ನಮ್ಮ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ಕೊರತೆ ಇದ್ದು, ಕ್ಷೇತ್ರದ ಶಾಸಕರ ಒತ್ತಾಯದ ಮೇರೆಗೆ ಸರ್ಕಾರದ ಆದೇಶ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅನುಮತಿಸಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೇಮಿಸಿದರೆ ಬರಗೂರಿನಲ್ಲಿ ಕೋವಿಡ್‌ಸೆಂಟರ್ ತೆರೆದು ಸೋಂಕಿತರಿಗೆ ಚಿಕಿತ್ಸೆನೀಡಲು ಅನುಕೂಲವಾಗುತ್ತದೆ ಎಂದರು.
ಈ ಹಿಂದೆ ಕೋವಿಡ್ ಮೊದಲನೇಅಲೆಯ ಲಾಕ್‌ಡೌನ್ ಸಂದರ್ಭದಲ್ಲಿಸರ್ಕಾರ ಕೋವಿಡ್ ಸೆಂಟರ್‌ಗಳನ್ನು ತೆರೆದುಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಪರಿಣಾಮ ಕೊರೊನಾ ಸೋಂಕನ್ನು ಹಂತ,ಹಂತವಾಗಿ ಕಡಿಮೆ ಮಾಡಿ ಕೊರೊನಾನಿರ್ಮೂಲನೆ ಮಾಡಲು ಅನುಕೂಲವಾಗಿತ್ತು.ಆದರೆ, ಇತ್ತೀಚೆಗೆ ಮತ್ತೆ ತಲೆಎತ್ತಿದ 2ನೇಅಲೆಯ ಕೊರೊನಾ ರೂಪಾಂತರಗೊಂಡುಎಲ್ಲ ವಯಸ್ಸಿನವರಿಗೂ ಹಬ್ಬಿದ್ದು ದೇಶವನ್ನೇಬೆಚ್ಚಿ ಬೀಳಿಸಿದೆ ಎಂದರು.
ಭಯಪಡುವ ಅಗತ್ಯವಿಲ್ಲ: ಶಿರಾದಲ್ಲಿಕೋವಿಡ್ ಕೇರ್ ಪ್ರಾರಂಭಿಸಿದ್ದರೂ ಪಾಸಿಟಿವ್ ಬಂದಂತಹ ವ್ಯಕ್ತಿಗಳು ಕೋವಿಡ್ ಕೇರ್‌ಗೆ ಬರದೆ ಭಯಭೀತರಾಗಿ ಹಿಂಜರಿಯುತ್ತಿದ್ದಾರೆ. ಭಯಪಡುವ ಅಗತ್ಯವಿಲ್ಲ.ಕೇವಲ ಮಾತ್ರೆಗ ಳಿಂದ ಚಿಕಿತ್ಸೆ ನೀಡುತ್ತಿದ್ದು,ಬೇಗ ಗುಣ ಮುಖರಾಗಬಹುದು ಎಂದರು.ಜಿಲ್ಲೆಯ ಹತ್ತು ತಾಲೂಕುಗಳ ಪೈಕಿ ಜಿಲ್ಲಾಕೇಂದ್ರದಲ್ಲಿ ಮಾತ್ರ ಕೋವಿಡ್ ಪರೀûಾಕೇಂದ್ರ ವಿದ್ದು, ಒಂದು ದಿನಕ್ಕೆ 6 ಸಾವಿರ ಟೆಸ್ಟ್‌ಮಾಡಲಾಗುತ್ತಿದೆ. ರಿಪೋರ್ಟ್ ಕೊಡಲುಒಂದು ವಾರವಾಗುತ್ತದೆ. ಅಲ್ಲಿಯವರೆಗೂಇನ್ನೂ ಹೆಚ್ಚಿನ ಕೋವಿಡ್ ಕೇಸ್ ಉತ್ಪತ್ತಿಯಾಗುತ್ತವೆ. ಆಸ್ಪತ್ರೆಗಳಲ್ಲಿ ಬೆಡ್‌ಸಿಗದಿರುವುದರಿಂದ ಕೋವಿಡ್ ಟೆಸ್ಟ್ ಕಡಿಮೆಮಾಡುವಂತೆ ತಿಳಿಸಲಾಗುತ್ತಿದೆ ಎಂದರು.
77 ಸಕ್ರೀಯ ಪ್ರಕರಣ: ಪಾಸಿಟಿವ್ ಕಾಣಿಸಿಕೊಂಡ ಕುಟುಂಬದ ಪಕ್ಕದ ಮನೆಯವರಿಗೂಸೋಂಕು ಹರಡುತ್ತಿರುವುದರಿಂದಬರಗೂರು, ಹೊಸಹಳ್ಳಿ, ಹಂದಿಕುಂಟೆ ಗ್ರಾಪಂವ್ಯಾಪ್ತಿಯಲ್ಲಿ ಒಟ್ಟು 77 ಸಕ್ರೀಯ ಪಾಸಿಟಿವ್‌ಕೇಸುಗಳಿದ್ದು, ಒಂದು ದಿನಕ್ಕೆ 12ರಿಂದ18ಕೇಸು ದಾಖಲಾಗುತ್ತಿವೆ. ಕ್ಷೇತ್ರದ ಶಾಸಕಡಾ.ಸಿ.ಎಂ.ರಾಜೇಶ್‌ಗೌಡ ಪ್ರಯತ್ನಿಸಿದರೆಬರಗೂರಿನಲ್ಲಿ ಕೋವಿಡ್ ಸೆಂಟರ್‌ತೆರೆಯಲು ಸಾಧ್ಯವಾಗಬಹುದು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಹಲುಗುಂಡೇಗೌಡ ಮಾತನಾಡಿ, ಪಾಸಿಟಿವ್ ಬಂದಂತಹವ್ಯಕ್ತಿಗಳು ಹೆಚ್ಚಿನ ತೊಂದರೆ ಅನುಭವಿಸುವಮುನ್ನವೇ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಶಿರಾಕೋವಿಡ್ ಕೇರ್ ಸೆಂಟರ್ ಹೋಗಿ ಚಿಕಿತ್ಸೆಪಡೆದರೆ ಬೇಗ ಗುಣಮುಖರಾಗಬಹುದುಎಂದರು. ಗ್ರಾಪಂ ಅಧ್ಯಕ್ಷ ಜಯರಾಮಯ್ಯ,ಎಎಸ್‌ಐ ಮುದ್ದರಂಗಪ್ಪ, ಪಿಡಿಒ ನಾಗರಾಜಯ್ಯ, ಗ್ರಾಪಂ ಸದಸ್ಯ ದೇವರಾಜು,ಕಾಂತರಾಜು, ಹನುಮಂತರಾಯಪ್ಪ, ಬಾಲಕೃಷ್ಣ, ಗೌರೀಶ್, ರಾಜು, ಮಂಜುನಾಥ್,ಗ್ರಾಮಲೆಕ್ಕಿಗ ಮಂಜು ಜಡೇದಾ, ಆರೋಗ್ಯಇಲಾಖೆ ಮನುಕಿರಣ್, ಗ್ರಾಮಸ್ಥಮುದ್ದುಕೃಷ್ಣೇಗೌಡ, ಸಿದ್ದೇಶ್ ಹಾಗೂಇತರರು ಇದ್ದರು.