Advertisement

ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಉದ್ಘಾಟನೆ

05:20 PM Jan 16, 2022 | Shwetha M |

ವಿಜಯಪುರ: ನಮ್ಮ ಮನಸ್ಸಿನಲ್ಲಿ ಮೂಡಿದ ಕಲ್ಪನೆಯನ್ನು ಪ್ರಯೋಗಾಲಯದ ಮೂಲಕ ಪ್ರಾಯೋಗಿಕವಾಗಿ ನೋಡಲು ಇಂದಿನ ದಿನಗಳಲ್ಲಿ ಸಾಧ್ಯವಾಗಿದೆ ಎಂದು ಮೇಲ್ಮನೆ ಶಾಸಕ ಅರುಣ ಶಹಾಪುರ ಹೇಳಿದರು.

Advertisement

ಶಿವಣಗಿ ಗ್ರಾಮದಲ್ಲಿ ಬಿಎಲ್‌ಡಿಇ ಸಂಸ್ಥೆಯ ಎಸ್‌. ಆರ್‌. ಮರಿಮಠ ಪ್ರೌಢ ಶಾಲೆಯಲ್ಲಿ ನಡೆದ ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಿಜ್ಞಾನ ಎಂಬುವದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಭಾಗವಾಗಿದೆ. ಇಂತಹ ಪ್ರಯೋಗಾಲಯಗಳ ಆರಂಭದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನೂಕೂಲವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ವಿಜ್ಞಾನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಲಿ ಎಂಬ ಉದ್ದೇಶದಿಂದ ಅಟಲ್‌ ಬಿಹಾರಿ ವಾಜಪೇಯಿಯವರು ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ ಎಂಬ ಘೋಷಣೆಯನ್ನು ಪೋಕ್ರಾನ್‌ ಅಣು ಪರೀಕ್ಷೆ ನಂತರ ಹೇಳಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವುದು ಪ್ರಸ್ತುತ ಸಂದರ್ಭದಲ್ಲಿ ಸುಲಭದ ಕೆಲಸವಲ್ಲ. ಶಾಸಕ ಎಂ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬಿಎಲ್‌ಡಿಇ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಇಂತಹ ಪ್ರಯೋಗಾಲಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಪ್ರತಿ ಶಾಲೆಗಳಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಉತ್ತಮ ಆಟದ ಮೈದಾನಗಳನ್ನು ನಿರ್ಮಾಣ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್‌.ವಿ. ಕುಲಕರ್ಣಿ, ಆಡಳಿತಾಧಿಕಾರಿ ಬಿ.ಆರ್‌. ಪಾಟೀಲ, ಡಯಟ್‌ ಎಟಿಎಲ್‌ ನೋಡಲ್‌ ಅಧಿಕಾರಿ ಜಯಪ್ರಕಾಶ ಸೊಡ್ಡಗಿ, ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಚೇರಮನ್‌ ಎನ್‌.ಆರ್‌. ರಡ್ಡಿ, ಗ್ರಾಪಂ ಅಧ್ಯಕ್ಷ ಆರ್‌.ಐ ಚಟ್ಟರಕಿ, ಪ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದು ಹಂಚಾನಾಳ, ಎಲ್‌. ಎಚ್‌.ಹಡಪದ, ಎಂ.ಎಸ್‌.ಮರಿಮಠ, ವಿ.ಆರ್‌ .ಬಾಗೇವಾಡಿ, ಐ.ಬಿ.ಬಿದರಿ, ಎಂ.ಎ.ಬೂದಿಹಾಳ, ಎಸ್‌.ಎಸ್‌. ಶೇಟ್‌, ಎಸ್‌.ಎ.ರಾಮರಥ, ವಿಶ್ವನಾಥ ಚನ್ನಾ, ಶ್ರೀನಿವಾಸ ಬೊಮನಳ್ಳಿ, ವಿ.ಎ.ಚಟ್ಟರಕಿ ಇದ್ದರು. ಎಸ್‌.ಎನ್‌.ಅಂತರಗಂಗಿ ಸ್ವಾಗತಿಸಿದರು. ಎಸ್‌.ಎಸ್‌.ರಾಮರಥ ನಿರೂಪಿಸಿದರು. ವಿ.ಆರ್‌.ಬಾಗೇವಾಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next