Advertisement

ಪಡ್ರೆ ಹೈಯರ್‌ ಸೆಕೆ‌ಂಡರಿ ಶಾಲಾ ಕಲೋತ್ಸವ ಉದ್ಘಾಟನೆ

11:42 PM Oct 14, 2019 | sudhir |

ಪೆರ್ಲ: ಪಡ್ರೆ ವಾಣೀನಗರ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಕಲೋ ತ್ಸವ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶಾಲಾ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪತ್ರಕರ್ತೆ ವಿನುತಾ ಪೆರ್ಲ,ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಸೂಕ್ತ ವೇದಿಕೆ ಶಾಲಾ ಕಲೋತ್ಸವ. ಮಕ್ಕಳು ಸಂಕುಚಿತ ಮನೋ ಭಾವ ದೂರ ಮಾಡಿ ವಿಶಾಲ ಹೃದಯಿಗಳಾಗಬೇಕು. ತಂತ್ರಜ್ಞಾನದಿಂದ ಪ್ರಯೋಜನವಿದೆ ನಿಜ.ಆದರೆ ಇದು ಉಜ್ವಲ ಸಂಸ್ಕೃತಿಯ ಮೇಲೆ ದುಷ್ಪರಿಣಾ ಮ ಬೀರುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸಾಮಾಜಿಕ ಮಾಧ್ಯಮ, ಮೊಬೈಲ್‌ಗ‌ಳಿಂದ ಕೌಟುಂಬಿಕ ಸಂಬಂಧಗಳು, ಅನ್ಯೋನತೆ ಮಾಯ ವಾಗುತ್ತಿವೆ. ಆದ್ದರಿಂದ ತಂತ್ರ ಜ್ಞಾನಗಳನ್ನು ಅಗತ್ಯಕ್ಕೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕು.

ಅದರ ಗೀಳು ಅಂಟಿಸಿಕೊಳ್ಳಬಾರದು.ಪುಸ್ತಕ,ಪತ್ರಿಕೆ ಓದು,ವಾರ್ತಾ ವೀಕ್ಷಣೆ ಮೊದಲಾದವುಗಳಿಂದ ವರ್ತಮಾನದ ಅರಿವಿನ ಜತೆಗೆ ಸಾಮಾನ್ಯ ಜ್ಞಾನ ವೃದ್ಧಿಯು ಬೆಳೆಯುತ್ತದೆ.

ಕೇವಲ ಗ್ರೇಡ್‌, ಸ್ಥಾನಮಾನ, ಪ್ರಶಸ್ತಿ ಗಳಿಕೆಯಷ್ಟೇ ಸ್ಪರ್ಧೆಯ ಉದ್ದೇಶವಲ್ಲ. ಶ್ರದ್ಧೆ, ಶ್ರಮ, ದೃಢ ನಿರ್ಧಾರ, ಆತ್ಮಸ್ಥೈರ್ಯವಿದ್ದಲ್ಲಿ ಸ್ಪರ್ಧೆ ಗಳಲ್ಲಿ ವಿಜಯಗಳಿಸಲು ಸುಲಭ ಸಾಧ್ಯ. ಲಭಿಸುವ ಅವಕಾಶಗಳನ್ನು ಪೂರ್ಣ ವಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು ಎಂದು ಹೇಳಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರ ರೈ. ಅಧ್ಯಕ್ಷತೆ ವಹಿಸಿದ್ದರು.ಎಂಪಿಟಿಎ ಅಧ್ಯಕ್ಷೆ ಹರಿಣಾಕ್ಷಿ, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರಸಿಂಹ ಪೂಜಾರಿ,ಪ್ರಾಂಶುಪಾಲ ಗಂಗಾಧರ ಕೆ,ಪ್ರಧಾನ ಶಿಕ್ಷಕ ವಾಸುದೇವ ನಾಯಕ್‌, ಹಿರಿಯ ಶಿಕ್ಷಕಿ ನಾಗರತ್ನ ಶುಭಾಶಂಸನೆ ಗೈದರು.ಕಲೋತ್ಸವ ಸಮಿತಿ ಸಂಚಾಲಕ ಶಿಕ್ಷಕರಾದ ರಾಜೇಶ್‌ ಮಾಸ್ತರ್‌ ಸ್ವಾಗತಿಸಿ, ಗೋಪಾಲ ಮಾಸ್ತರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next