Advertisement

ಮೂರು ದಿನಗಳ ಸಿರಿಧಾನ್ಯ ಮೇಳಕ್ಕೆ ತೆರೆ

11:54 AM Jan 22, 2018 | Team Udayavani |

ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಭಾನುವಾರ ತೆರೆಬಿದ್ದಿದ್ದು, ಮೂರು ದಿನಗಳ ಮೇಳದಲ್ಲಿ ಅಂದಾಜು 2.10 ಲಕ್ಷ ಜನ ಭೇಟಿ ನೀಡಿದ್ದು, ಮಾರಾಟ ಮಳಿಗೆಗಳು, ಖಾನಾವಳಿಯೂ ಸೇರಿ ಒಟ್ಟಾರೆ 107 ಕೋಟಿ ರೂ. ವಹಿವಾಟು ನಡೆದಿದೆ.  

Advertisement

ಈ ಪೈಕಿ ಕಂಪನಿಗಳು ನೇರವಾಗಿ ರೈತರಿಂದ 27 ಕೋಟಿ ಮೊತ್ತದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರಿವೆ. ಇದೇ ವೇಳೆ ರೈತರು ಮತ್ತು ಉದ್ದಿಮೆದಾರರ ನಡುವೆ 34 ಒಡಂಬಡಿಕೆಗಳು ಏರ್ಪಟ್ಟಿವೆ. ಎಲ್ಲ 14 ಪ್ರಾಂತೀಯ ಸಹಕಾರಿ ಸಾವಯವ ಸಂಘಗಳ ಒಕ್ಕೂಟದೊಂದಿಗೆ ಈ ಲೆಟರ್‌ ಆಫ್ ಇಂಟರೆಸ್ಟ್‌ಗೆ ಸಹಿ ಹಾಕಲಾಗಿದೆ.

ಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳಲ್ಲಿ ಈ ಉದ್ದಿಮೆದಾರರು ರೈತರಿಂದ ಸುಮಾರು 340 ಕೋಟಿ ರೂ. ವ್ಯಾಪಾರ-ವಹಿವಾಟು ನಡೆಸುವ ನಿರೀಕ್ಷೆ ಇದ್ದು, ಈ ಸಂಬಂಧ ಉದ್ದಿಮೆದಾರರು ಮೇಳದಲ್ಲಿ ಭರವಸೆ ನೀಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ರೈತರಿಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ.  

ಅಮೆರಿಕ, ಕೆನಡ, ದಕ್ಷಿಣ ಕೋರಿಯ, ಚೈನಾ, ಯುಎಇ, ಮಲೇಷಿಯ, ಉಗಾಂಡ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ 15 ಅಂತರರಾಷ್ಟ್ರೀಯ ಖರೀದಿದಾರರು ಮತ್ತು 50ಕ್ಕೂ ಹೆಚ್ಚು ದೇಶೀಯ ಖರೀದಿದಾರರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಮೇಳವು ಒಂದೆಡೆ ರೈತರು ಮತ್ತು ಉದ್ಯಮಿಗಳ ನಡುವೆ ವೇದಿಕೆಯಾದರೆ, ಮತ್ತೂಂದೆಡೆ ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಕೊಂಡಿಯಾಯಿತು.

ಅಪರೂಪದ ವೇದಿಕೆ ಅಂದಾಜು 391 ಮಳಿಗೆಗಳು, “ಖಾನಾವಳಿ’ಯಲ್ಲಿ 25ಕ್ಕೂ ಹೆಚ್ಚು ಪ್ರತಿಷ್ಠಿತ ಹೋಟೆಲ್‌ಗ‌ಳನ್ನು ಇಲ್ಲಿ ತೆರೆಯಲಾಗಿತ್ತು. ಕೊನೆಯ ದಿನ ಜನ ಅಕ್ಷರಶಃ ಅಲ್ಲಿ ಮುಗಿಬಿದ್ದರು. ಹಾಗಾಗಿ, ಭರಪೂರ ವ್ಯಾಪಾರ-ವಹಿವಾಟು ನಡೆಯಿತು. “ಸಾವಯವ ಖಾದ್ಯಗಳನ್ನು ತಯಾರಿಸುವ ನಮ್ಮಂತಹವರಿಗೆ ಇದೊಂದು ಅಪರೂಪದ ವೇದಿಕೆ. ಮೂರು ದಿನಗಳೂ ಉತ್ತಮ ವ್ಯಾಪಾರ ಆಯಿತು.

Advertisement

ಕೊನೆಯ ದಿನವಂತೂ ಕಂಟ್ರೋಲ್‌ ಮಾಡುವುದೂ ಕಷ್ಟವಾಯಿತು’ ಎಂದು ಖಾನಾವಳಿಯಲ್ಲಿ ಹೋಟೆಲ್‌ ತೆರೆದಿದ್ದ ಯೋಗೀಶ್‌ ಸಂತಸ ವ್ಯಕ್ತಪಡಿಸಿದರು. ನೇಯ್ಗೆ ಮಾಡದ ಬಟ್ಟೆಗಳ ಕಾರ್ಖಾನೆ ಕೋರಿಯನ್‌ ಕಂಪನಿಯೊಂದು ರಾಜ್ಯದಲ್ಲಿ ನೇಯ್ಗೆ ಮಾಡದ ಬಟ್ಟೆ ತಯಾರಿಕೆ ಕಾರ್ಖಾನೆ ಸ್ಥಾಪನೆಗೆ ಆಸಕ್ತಿ ತೋರಿಸಿದೆ.

ಬೆಂಗಳೂರು ಮೂಲದ ಕಂಪನಿಯೊಂದಿಗೆ ಕೋರಿಯನ್‌ ಕಂಪನಿಯು ಈ ಕಾರ್ಖಾನೆ ತೆರೆಯುತ್ತಿದ್ದು, ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕಂಪನಿಯು ಈ ಭರವಸೆ ನೀಡಿದೆ. ಮೇಳದಲ್ಲಿ ಸುಮಾರು 7ರಿಂದ 8 ಸಾವಿರ ರೈತರನ್ನು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ ದಿನವೇ 10 ಸಾವಿರ ಗಡಿ ದಾಟಿತು. ಕೊನೆಯ ದಿನದ ಅಂತ್ಯಕ್ಕೆ ನಿರೀಕ್ಷೆಗಿಂತ ಎರಡು-ಮೂರು ಪಟ್ಟು ರೈತರು ಲಗ್ಗೆ ಇಟ್ಟರು.  

ಬಗೆಹರಿದ ಗೊಂದಲ: ಬೆಸೆದ ಸಂಪರ್ಕ “ಸಾಕಷ್ಟು ಸಾವಯವ ಮಳಿಗೆಗಳು ನಗರದಲ್ಲಿವೆ. ಆದರೆ, ಅವುಗಳ ಗುಣಮಟ್ಟದ ಬಗ್ಗೆ ಹಲವು ಅನುಮಾನ, ಗೊಂದಲಗಳಿದ್ದವು. ಸರ್ಕಾರವೇ ಮೇಳ ಆಯೋಜಿಸಿದ್ದರಿಂದ ಅಪ್ಪಟ ಸಾವಯವ ಉತ್ಪನ್ನಗಳ ಬಗೆಗಿನ ಗೊಂದಲ ಬಗೆಹರಿಯಿತು. ಜತೆಗೆ ಮಳಿಗೆಗಳ ಪರಿಚಯವಾಗಿದ್ದರಿಂದ ನಿರಂತರ ಖರೀದಿ ವ್ಯವಹಾರಕ್ಕೆ ಅನುಕೂಲವಾಗಿದೆ. ಅಲ್ಲದೆ, ಎಷ್ಟೋ ಖಾದ್ಯಗಳು ನಮಗೆ ಗೊತ್ತೇ ಇರಲಿಲ್ಲ. ಅದರ ಪರಿಚಯ ಕೂಡ ಮೇಳದಲ್ಲಾಯಿತು’ ಎಂದು ಜಯನಗರದ ಸಾಕ್ಷಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next