Advertisement

ಮಾರುತಿ ಆಟೋಪ್ರಿಕ್ಸ್‌ ಸ್ಪರ್ಧೆಗೆ ತೆರೆ

11:48 AM Sep 15, 2017 | |

ಬೆಂಗಳೂರು: ನಗರದ ಹೊರವಲಯದ ಮೈಲಸಂದ್ರದ ಆಟೋ ಮ್ಯೂಸಿಯಂ ಮೈದಾನದಲ್ಲಿ ಇತೀಚೆಗೆ ನಡೆದ ಮಾರುತಿ ಸುಜುಕಿ ಆಟೋಪ್ರಿಕ್ಸ್‌ -2017, ಮೂರು ದಿನಗಳ ಕಾರು ರೇಸಿಂಗ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಗಳು ಮುಕ್ತಾಯವಾದವು. 

Advertisement

ರಾಷ್ಟ್ರ ಮಟ್ಟದ ಚಾಂಪಿಯನ್‌ಷಿಪ್‌ನ ದಕ್ಷಿಣ ವಲಯದ ಮೊದಲ ಸುತ್ತಿನ ಸ್ಪರ್ಧೆಗಳು ಇವಾಗಿದ್ದವು.  ದೇಶಾದ್ಯಂತ ಏಳು ನಗರಗಳಲ್ಲಿ ನಡೆದ ಈ ರೇಸಿಂಗ್‌ನಲ್ಲಿ ಸ್ಪರ್ಧಿಗಳು ಕಡಿದಾದ ತಿರುವು, ವಿವಿಧ ರೀತಿಯ ಟ್ರಾಕ್‌ ಮೇಲೆ ತಮ್ಮದೇ ಕಾರನ್ನು ಚಲಾಯಿಸುವ ಮೂಲಕ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಿದರು.

ಅತಿ ವೇಗದ ಹವ್ಯಾಸಿ ವಿಭಾಗದಲ್ಲಿ ನಜೀಮುದೀನ್‌ (ಮಾರುತಿ ಸುಜುಕಿ ಎಸೀಮ್‌), ಅತಿ ವೇಗದ ವಿಭಾಗದಲ್ಲಿ ಧ್ರುವ  ಚಂದ್ರಶೇಖರ್‌ (ಸಿಡಿಯಾ) ಹಾಗೂ ಮಹಿಳೆಯ ಅತಿ ವೇಗದ ವಿಭಾಗದಲ್ಲಿ ಸುಪ್ರಿಯಾ ಜಂಬುನಾಥನ್‌ (ಮಾರುತಿ ಸುಜುಕಿ ಸ್ವಿಫ್ಟ್‌) ವಿಜೇತರಾಗಿದ್ದಾರೆ. ಈ ಮೂವರು ಅ.27  ರಿಂದ 29ರವರೆಗೆ ನಡೆಯುವ ದಕ್ಷಿಣ ವಲಯ ಮಟ್ಟದ ಎರಡನೇ ಸುತ್ತಿನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಪುಣೆಯಲ್ಲಿ ಪಶ್ಚಿಮ ವಲಯ ಸ್ಪರ್ಧೆ: ಮಾರುತಿ ಸುಜುಕಿ ಆಟೋಪ್ರಿಕ್ಸ್‌ ರೇಸಿಂಗ್‌ ಪಶ್ಚಿಮ ವಲಯದ ಮೊದಲ ಸ್ಪರ್ಧೆ ಇದೇ 22, 23 ಮತ್ತು 24ರಂದು ಪುಣೆಯಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next