Advertisement
ಕಳೆದ ಜ.16ರಿಂದ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಆಧ್ಯಾತ್ಮಿಕ ಚಿಂತನ, ಬದುಕಿನ ಮೌಲ್ಯಗಳ ಕುರಿತಾಗಿ ಪ್ರವಚನ ನಡೆದು ಬರುತ್ತಿರುವುದಿಂದ ಜನ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದರಲ್ಲದೇ 10-15ನೇ ನಿಮಿಷದ ಅವಧಿಯಲ್ಲಿ ಮೈದಾನ ತುಂಬುವಷ್ಟು ಜನ ಇರುವೆ ಹಾಗೆ ಬಂದು ಆಸೀನರಾಗಿ ಪೂಜ್ಯರ ಸಂದೇಶ ಆಲಿಸುತ್ತಿಸುತ್ತಿದ್ದ ಸತ್ಸಂಗ ಮುಕ್ತಾಯವಾಗಿದೆ. ಈ ಮೂಲಕ ಕಲಬುರಗಿ ಮಹಾನಗರದ ಜನತೆ ಮೂರನೇ ಬಾರಿಗೆ ಸತ್ಸಂಗ ಆಲಿಸುವ ಭಾಗ್ಯ ದೊರೆತು ಇತಿಹಾಸ ಸೇರಿತು.
ನೋಡದೇ ಬರೊಬ್ಬರಿ 45 ನಿಮಿಷಗಳ ಕಾಲ ಒಂದು ನಿಮಿಷ ನಿಲ್ಲದೇ ಸರಳವಾಗಿ ಆಧ್ಯಾತ್ಮಿಕ ಚಿಂತನ ನಡೆದು ಬರುತ್ತಿತ್ತು. ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ್ ಸೇಡಂ, ಸಮಾಜ ಸೇವಕ ಉಮೇಶ ಶೆಟ್ಟಿ ಅವರ ಆಸಕ್ತಿ ಹಾಗೂ
ಆಧ್ಯಾತ್ಮೀಕ ಪ್ರವಚನಾ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಆರ್. ಗರೂರ್, ಸದಸ್ಯರಾದ ಜಂಬನಗೌಡ ಶೀಲವಂತರ, ಶಿವಾನಂದ ಪಾಟೀಲ್ ಅಷ್ಠಗಿ, ಅಪ್ಪು ಕಣಕಿ, ಈರಣ್ಣ ಗೋಳೆದ್, ಅಂಬಾರಾಯ ಡಿಗ್ಗಿಕರ್, ಸುಖದೇವ ಪೂಜಾರಿ ಸೇರಿದಂತೆ ಮುಂತಾದವರು ತಿಂಗಳ ಪರ್ಯಂತ ಪ್ರವಚನಕ್ಕಾಗಿ ಶ್ರಮಿಸಿದ್ದು, ಮೆಚ್ಚುಗೆಗೆ ಪಾತ್ರವಾಯಿತು. ಜನರಲ್ಲದೇ ನಾಡಿನ ವಿವಿಧ ಮಠಾಧೀಶರು ಸಹ ಪ್ರವಚನ ಆಲಿಸಿರುವುದು ವಿಶೇಷವಾಗಿ ಕಂಡು ಬಂತು.
Related Articles
ಸಿದ್ದೇಶ್ವರು ಸ್ವಾಮೀಜಿಯವರು ಗುಲಬರ್ಗಾ ವಿಶ್ವವಿದ್ಯಾಲಯದ ಕೈಲಾಸ ಭವನದಿಂದ ಮರಳಿ ವಿಜಯಪುರದತ್ತ ಹೆಜ್ಜೆ ಹಾಕುವ ಸಂದರ್ಭದಲ್ಲಿ ಆಧ್ಯಾತ್ಮಿಕ ಸೇವಾ ಸಮಿತಿ ಸದಸ್ಯರು ಮತ್ತು ಪೂಜ್ಯರನ್ನು ಕಾಣುತ್ತಿದ್ದ ಜನರಲ್ಲಿ ಏನೋ ಕಳೆದುಕೊಂಡ ಭಾವನೆ ಮನೆ ಮಾಡಿತ್ತು. ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜನರು ಹೃದಯ ಸ್ಪರ್ಶಿಯಾಗಿ ಬೀಳ್ಕೊಟ್ಟರು. ಗುರುಗಳು ಸಹ ಭಕ್ತರ ನಿಷ್ಠೆಗೆ ತಲೆದೂಗಿದರು.
Advertisement
ಮುಂದಿನ ಪ್ರವಚನ ಹಳ್ಳಿಕೇರಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಮುಂದಿನ ಆಧ್ಯಾತ್ಮಿಕ ಪ್ರವಚನ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಬೆಳಿಗ್ಗೆ 6 ರಿಂದ ಒಂದು ಗಂಟೆ ಕಾಲ ನಡೆದು ಬರಲಿದೆ.
ಬಹಮನಿ ಉತ್ಸವ ವಿವಾದ ಅನಗತ್ಯ: ಖರ್ಗೆ ಕಲಬುರಗಿ: ಈ ಭಾಗದ ಕಲೆ, ಸಾಂಸ್ಕೃತಿಕ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರಕೂಟರ ಉತ್ಸವ ಹಾಗೂ ಬಹಮನಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಆದರೆ ವಿನಾಕಾರಣ ವಿವಾದ ಸೃಷ್ಟಿಸುತ್ತಿರುವುದು ಸಮಂಜಸವಲ್ಲ ಜತೆಗೆ ವಿವಾದ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತವಾಗಿ ಉತ್ಸವ ನಡೆಸಲಾಗುತ್ತಿದೆ. ಇಷ್ಟು ದಿನ ಈ ಉತ್ಸವಗಳನ್ನು ಮಾಡಿರಲಿಲ್ಲ. ಈಗ ಮಾಡಲಾಗುತ್ತಿದೆ. ಇದರಲ್ಲಿ ವಿವಾದ ಏನು ಬಂತು?
ರಾಷ್ಟ್ರಕೂಟರದ ಉತ್ಸವದಿಂದ ಜೈನರನ್ನು ಹಾಗೂ ಹಿಂದೂಗಳನ್ನು ಓಲೈಸಲಾಗುತ್ತಿದೆಯೇ, ಯಾರನ್ನೂ ಓಲೈಸಲು ಉತ್ಸವ ಮಾಡುತ್ತಿಲ್ಲ. ಮುಸ್ಲಿಂ ವಿರುದ್ಧವಾಗಿಯೇ ಗೆದ್ದು ಅಲ್ಲಾವುದ್ದೀನ್ ಹಸನ ಗಂಗೂ ಬಹಮನಿ ಶಾ ಬಹಮನಿ ರಾಜ್ಯ ಸ್ಥಾಪಿಸಿದ್ದ. ಗಂಗೂ ಎನ್ನುವುದು ಹಿಂದೂ ಪದವಾಗಿದೆ. ಇದರಲ್ಲಿ ವಿವಾದ ಮಾಡುವುದು ಸರಿಯಲ್ಲ ಎಂದರು.