ಜಗತ್ತಿನೊಳಗೊಂದು ಸುತ್ತು…
Advertisement
ಆನೆಗಳ ಸನ್‌ಸ್ಕ್ರೀನ್ ಕ್ರೀಮು!ಹೊರಗಡೆ ಮಳೆ ಬರುವಾಗ ಕೈಯಲ್ಲಿ ಛತ್ರಿ ಇಲ್ಲದಿದ್ದರೆ ರಕ್ಷಣೆ ಪಡೆಯಲು ನಾವೆಲ್ಲರೂ ಸೂರು ಇರುವಲ್ಲಿ ಓಡುತ್ತೇವೆ. ಅದು ಸಹಜ. ಆದರೆ ಬಿಸಿಲಿಗೂ ಓಡುವುದುಂಟೆ? ಉಂಟು! ಬಿಸಿಲಿಂದ ರಕ್ಷಣೆ ಪಡೆಯಲು ಹೆಣಗಾಡುವ ವರ್ಗವೂ ಒಂದಿದೆ. ಅದರಲ್ಲೂ ಸಮುದ್ರ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಈ ಮಾತಿಗೆ ಸಾಕ್ಷಿಯಾಗಿ ತೆಗೆದುಕೊಳ್ಳಬಹುದು. ಏಕೆಂದರೆ, ಅವರಲ್ಲಿ ಬಹುತೇಕರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಸನ್ ಸ್ಕ್ರೀನ್ ಕ್ರೀಮನ್ನು ಮೈಯೆಲ್ಲಾ ಹಚ್ಚಿಕೊಂಡಿರುತ್ತಾರೆ. ಇದರಿಂದ ಚರ್ಮ ಕಪ್ಪಾಗುವುದಿಲ್ಲ. ವಿದೇಶಗಳಲ್ಲಿ ಜನರು ದುಡ್ಡು ಕೊಟ್ಟು ಚರ್ಮವನ್ನು ಕಪ್ಪಾಗಿಸಿಕೊಳ್ಳುತ್ತಾರೆ. ಅದನ್ನು ಟ್ಯಾನಿಂಗ್ ಎನ್ನುವರು. ಇರಲಿ, ಮನುಷ್ಯರೇನೋ ಕ್ರೀಮುಗಳಿಗೆ ಮೊರೆ ಹೋಗುವರು, ಆದರೆ ಪ್ರಾಣಿಗಳು ಸೂರ್ಯನ ಪ್ರಖರ ಕಿರಣಗಳಿಂದ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳುತ್ತವೆ? ಚಿಕ್ಕಪುಟ್ಟ ಪ್ರಾಣಿಗಳಾದರೆ ಗಿಡ ಮರ ಪೊದೆಗಳ ಮೊರೆ ಹೋಗುತ್ತವೆ. ಆದರೆ ಆನೆ, ಘೇಂಡಾಮೃಗದಂಥ ದೊಡ್ಡ ಗಾತ್ರದ ಪ್ರಾಣಿಗಳಿಗೆ ಆ ಅದೃಷ್ಟವಿಲ್ಲ. ಅದಕ್ಕೇ ಅವು ಮೈಮೇಲೆ ಮಣ್ಣನ್ನು ಎರಚಿಕೊಳ್ಳುತ್ತವೆ. ಮಣ್ಣಿನಲ್ಲಿ ತಂಪು ಗುಣವಿದೆ ಎಂಬುದು ಮಡಕೆಯನ್ನು ಬಳಸುವ ನಮಗೆ ಗೊತ್ತಿರಲೇಬೇಕು. ಅದಕ್ಕೇ ಕೆಲ ಪ್ರಾಣಿಗಳು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಣ್ಣನ್ನೇ ಸನ್‌ಸ್ಕ್ರೀನ್ ಕ್ರೀಮಿನಂತೆ ಪೂಸಿಕೊಳ್ಳುತ್ತವೆ.
ಮನುಷ್ಯ ಭಾವುಕ ಜೀವಿಯಾಗಿರಬಹುದು, ಸೆಂಟಿಮೆಂಟು ಸಿನಿಮಾಗಳನ್ನು ಮಾಡಿರಬಹುದು. ಆದರೆ, ಸೆಂಟಿಮೆಂಟ್ ಎನ್ನುವುದು ಮನುಷ್ಯರಿಗೆ ಮಾತ್ರವೆ ಸೀಮಿತವಾಗಿಲ್ಲ ಕೆಲ ಪ್ರಾಣಿಗಳೂ ಭಾವುಕ ಜೀವಿಗಳಾಗಿವೆ ಎನ್ನುವುದ
ಈಗಾಗಲೇ ನಮಗೆ ಗೊತ್ತಿರುವ ಸಂಗತಿ. ನಾವು ಆನೆ ಮತ್ತು ಕೆಲ ಪ್ರಾಣಿಗಳು ಭಾವುಕತೆಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿರ
ವಿಷಯ. ಆದರೆ, ಪೆಂಗ್ವಿನ್ ಕೂಡಾ ಭಾವುಕ ಜೀವಿ ಎನ್ನುವುದು ಬಹುತೇಕರಿ ಗೆ ಗೊತ್ತಿರಲಿಕ್ಕಿಲ್ಲ, ತಾಯಿಯಾದವಳ ಹೃದಯದಲ್ಲಿ ತವರಿಗೆ ಯಾವತ್ತಿಗೂ ವಿಶೇಷವಾದ ಸ್ಥಾನ. ಯಾರೇ ಆದರೂ ತನ್ನ ತವರಿನ ಕುರಿತು ಒಂದು ಮಾತು ಹೆಚ್ಚಿಗೆ ಆಡಿದರೆ ಅವರ ವಿರುದ್ದ ಜಗಳಕ್ಕೇ ನಿಂತುಬಿಡುವಳು. ಅಂಥದೇ ವರ್ತನೆಯನ್ನು ತಾಯಿ ಪೆಂಗ್ವಿನ್‌ನಲ್ಲಿ ಕಾಣಬಹುದು. ತಾನು ಯಾವ ಜಾಗದಲ್ಲಿ ಹುಟ್ಟಿದ್ದೆನೋ ಅದೇ ಜಾಗವನ್ನು ಮೊಟ್ಟೆ ಇಡಲು ಆರಿಸಿಕೊಳ್ಳುವ ಪೆಂಗ್ವಿನ್‌ನ ಪ್ರವೃತ್ತಿಯನ್ನು ಸಂಶೋಧಕರು ಪತ್ತೆ ಹಚ್ಚಿರುವುದು ಅದಕ್ಕೆ ಸಾಕ್ಷಿ. ಹರ್ಷವರ್ಧನ್ ಸುಳ್ಯ