Advertisement
ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ನಡೆದ 9ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ‘ಹೊಸ ಚಿಗುರು-ಹಳೇ ಬೇರು’ ಗೋಷ್ಠಿಯಲ್ಲಿ ‘ಗಡಿನಾಡಿನಲ್ಲಿ ಕನ್ನಡ ಮಕ್ಕಳ ಸಮಸ್ಯೆಗಳು’ ಕುರಿತು ಮಾತನಾಡಿದಳು. ಗಡಿನಾಡಿನ ಮಕ್ಕಳಾದ ನಾವು ಅನಿವಾರ್ಯವಾಗಿ ಮರಾಠಿ ಭಾಷೆಯಲ್ಲಿ ಅಂಗನವಾಡಿ ಕಲಿತು ನಂತರ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುವಂತಾಯಿತು. ಇದರಿಂದ ಕನ್ನಡ ಶಬ್ದಗಳ ಬಳಕೆಯಲ್ಲಿ ಸ್ವಲ್ಪ ಅಡಚಣೆಯಾಗಿ ಭಾಷಾ ದ್ವಂದ್ವತೆಗೆ ಒಳಗಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಡಿನಾಡಿನಲ್ಲಿಯೂ ಅಂಗನವಾಡಿಗಳನ್ನು ಆರಂಭಿಸಲಿ ಜೊತೆಗೆ ಗಡಿನಾಡಿನ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಮರಾಠಿ ಭಾಷಿಕರು ನಮ್ಮ ನೆರೆ, ಕನ್ನಡಿಗರಿಗೆ ನಾವು ಬರೆ ಕಷ್ಟದ ಹೊರೆ. ಆದ್ದರಿಂದ ಕರ್ನಾಟಕ ಸರಕಾರ ಎಳೆಯಲಿ ನಮ್ಮ ಸಮಸ್ಯೆಗಳಿಗೆ ಶಾಶ್ವತ ಬರೆ ಎಂದು ಅನಿಸಿಕೆ ವ್ಯಕ್ತಪಡಿಸಿದಳು.
Advertisement
ಗಡಿನಾಡಿನಲ್ಲೂ ಅಂಗನವಾಡಿ ಕೇಂದ್ರ ತೆರೆಯಿರಿ
11:40 AM Jan 18, 2019 | |
Advertisement
Udayavani is now on Telegram. Click here to join our channel and stay updated with the latest news.