Advertisement

ಮುಕ್ತಧ್ವನಿ 

12:30 AM Mar 17, 2019 | |

ಎನ್‌ಡಿ ಟಿವಿ ಇಂಡಿಯಾ ವಾಹಿನಿಯಲ್ಲಿ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಶ್‌ ಕುಮಾರ್‌ರ ದ ಫ್ರೀ ವಾಯ್ಸ : ಆನ್‌ ಡೆಮಾಕ್ರಸಿ ಎಂಬ ಕೃತಿ ಕನ್ನಡಕ್ಕೆ ಬಂದಿದೆ. ಇದನ್ನು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಮಾತಿಗೆ ಏನು ಕಡಿಮೆ? ಪ್ರಜಾಪ್ರಭುತ್ವ , ಸಂಸ್ಕೃತಿ ಮತ್ತು ರಾಷ್ಟ್ರದ ಕುರಿತ ಚಿಂತನೆ- ಎಂಬ ಶೀರ್ಷಿಕೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆೆ. ರಾಜಕೀಯ, ವಾಣಿಜ್ಯ, ಮಾರುಕಟ್ಟೆಗಳಂಥ ವ್ಯವಹಾರಗಳ ನಡುವೆ ಸಿಲುಕಿರುವ ಮಾಧ್ಯಮ ವ್ಯವಸ್ಥೆಯಲ್ಲಿ ರವೀಶ್‌ ಕುಮಾರ್‌ ಅವರದು ವಿರಳವಾದ ಮುಕ್ತ ಧ್ವನಿ. 

Advertisement

ಕನ್ನಡದ ಇಂದಿನ “ಮಾಧ್ಯಮಸಂದರ್ಭ’ಕ್ಕೆ ಇಂಥ ಕೃತಿ ತುಂಬ ಪ್ರಸ್ತುತ. ಒಟ್ಟು ಒಂಬತ್ತು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಚಿಂತನೆಗಳಲ್ಲಿ ಎಲ್ಲವೂ ರವೀಶ ಅವರ ಅನುಭವ ಕಥನಗಳೇ. ಅವು ಸಮಕಾಲೀನ ಸಮಾಜದ ಮತ್ತು ರಾಜಕೀಯ ಕುರಿತ ವಿಮರ್ಶೆಯೂ ಆಗಿ ನಿರೂಪಣೆಗೊಂಡಿವೆ.

ಕಾಲೇಜು-ವಿಶ್ವವಿದ್ಯಾನಿಲಯಗಳೊಳಗೆ ಸೀಮಿತವಾಗಿರುವ “ಚಿಂತನಲೋಲುಪತೆ’ಯಿಂದ ಹೊರತಾದ ವೈಚಾರಿಕ ಕ್ಷೇತ್ರಾನುಭವದ ಕೃತಿ ಇದು ಎಂಬುದು ಗಮನಾರ್ಹ.

– ಸ್ವರ

Advertisement

Udayavani is now on Telegram. Click here to join our channel and stay updated with the latest news.

Next