Advertisement
ನಾಲ್ಕನೇ ಹಂತದಲ್ಲಿ ಆಂಧ್ರ ಪ್ರದೇಶದ ಎಲ್ಲ 25, ತೆಲಂಗಾಣದ ಎಲ್ಲ 17 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರ ಜತೆಗೆ ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಿಗೂ ವೋಟಿಂಗ್ ನಡೆಯಲಿದೆ. ಆಡಳಿತಾರೂಢ ವೈ.ಎಸ್.ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಎನ್‌ಡಿಎ ಭಾಗವಾಗಿ ಸೀಟು ಹಂಚಿಕೆಯೊಂದಿಗೆ ಸ್ಪರ್ಧಿಸಿವೆ.
Related Articles
Advertisement
ಪ್ರಮುಖ ಅಭ್ಯರ್ಥಿಗಳು: ಅಖೀಲೇಶ್ ಯಾದವ್, ಮಹುವಾ ಮೊಯಿತ್ರಾ, ಅಮೃತಾ ರಾಯ್, ಯೂಸುಫ್ ಪಠಾಣ್, ಅಧೀರ್ ರಂಜನ್ ಚೌಧರಿ, ನಿರ್ಮಲ್ ಕುಮಾರ್, ಗಿರಿರಾಜ್ ಸಿಂಗ್, ವೈ.ಎಸ್.ಶರ್ಮಿಳಾ, ಅರ್ಜುನ್ ಮುಂಡಾ, ಶತ್ರುಘ್ನ ಸಿನ್ಹಾ, ಮಾಧವಿ ಲತಾ, ಅಸಾದುದ್ದೀನ್ ಓವೈಸಿ ಮತ್ತಿತರರು.
3ನೇ ಹಂತದಲ್ಲಿ ಶೇ.65.68 ಮತದಾನ: ಚುನಾವಣ ಆಯೋಗ
ಮೇ 7ರಂದು ಮುಕ್ತಾಯವಾದ 3ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಶೇ.65.58ರಷ್ಟು ಮತದಾನ ನಡೆದಿದೆ ಎಂದು ಶನಿವಾರ ಚುನಾವಣ ಆಯೋಗ ತಿಳಿಸಿದೆ. ಒಟ್ಟು ಮತದಾರರ ಪೈಕಿ ಶೇ.66.89 ಪುರುಷರು, ಶೇ.64.4 ಮಹಿಳೆಯರು ಮತ್ತು ಶೇ.25.2ರಷ್ಟು ತೃತೀಯ ಲಿಂಗಿಗಳು ಮತದಾನ ಮಾಡಿದ್ದಾರೆ. 3ನೇ ಹಂತಕ್ಕೆ ಮತದಾನ ಮಾಡಲು ಒಟ್ಟು 17.24 ಕೋಟಿ ಜನರು ಅರ್ಹರಾಗಿದ್ದರು. 2019ರ ಚುನಾವಣೆ ಮೂರನೇ ಹಂತದಲ್ಲಿ ಶೇ.68.4ರಷ್ಟು ಮತದಾನವಾಗಿತ್ತು.