Advertisement

ಬೋರ್‌ನಾಗ್‌ ಮನೆ ದೇವ್ರು ಮಲ್ಲಯ್ಯನ ಧ್ಯಾನಾ ಮಾಡ್ದೆ!

11:34 AM Apr 24, 2017 | Harsha Rao |

ಬಾಗಲಕೋಟೆ: ಅವತ್ತ ಸಂಜಿ ಮೇವು ತರಾಕ್‌ ಹೋಗಿದ್ದೆ. ನಮ್ಮ ಹೊಲ್ದ ಬಾಜೂಕಿನ ಹೊಲ್ದಾಗ್‌ ಒಂದ್‌ ಬೋರ್‌
(ಕೊಳವೆ ಬಾವಿ) ಇತ್ತು. ಅದು ಹುಲ್ಲ ಒಳಗ್‌ ಕಾಣಲಿಲ್ಲ. ಕಾಲಿಟ್ಟೆ, ಪಟ್ಟನೆ ಒಳಗೇ ಹೋಯ್ತು. ಎಷ್ಟು ಒಳಾಕ್‌ ಹೋಗಿದ್ದೆ ಗೊತ್ತಿಲ್ಲ. ಬಿದ್ದ ಕೂಡ್ಲೆ ಚೀರಾಡಿದೆ. ಯಾರಿಗೂ ಕೇಳಿಸಲಿಲ್ಲ. ರಾತ್ರಿ ಎಲ್ಲಾ ಹುಡುಕ್ಯಾಡುವಾಗ ಧ್ವನಿ ಕೇಳಿಸ್ತು. ನಾ ಮತ್ತ ಚೀರಾಡೆª. ಬಂದು ನೋಡಿದ್ರು, ಜೆಸಿಬಿಲೇ ಹಡ್ಡಿ (ಅಗೆದು) ತೆಗೆದರು. ನಮ್ಮ ದೇವರ ಮಲ್ಲಯ್ಯನ ಪುಣ್ಯಾರೀ ನಾನ್‌ ಬದುಕುಳಿದೆ.

Advertisement

ಹೀಗೆ ತನ್ನ ಅನುಭವ ಹೇಳಿಕೊಂಡಿದ್ದು ತಾಲೂಕಿನ ಶಿಗಿಕೇರಿ ಗ್ರಾಮದ ಕಲ್ಲವ್ವ (ಕಲಾವತಿ) ಶ್ರೀಶೈಲ ಗುದಿಗೆನ್ನವರ.
2006ರ ಆಗಸ್ಟ್‌ 26ರಂದು ಈ ಮಹಿಳೆ ನಿರುಪಯುಕ್ತ ಕೊಳವೆ ಬಾವಿಗೆ ಬಿದ್ದಿದ್ದಳು. ಬಡಕಲು ದೇಹದ ಕಲ್ಲವ್ವ ಬರೋಬ್ಬರಿ 18 ಗಂಟೆಗಳ ಕಾರ್ಯಾಚರಣೆ ಬಳಿಕ ಹೊರ ಬಂದಿದ್ದಳು. ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂಪೂರ್ಣ ಚೇತರಿಸಿಕೊಂಡಿದ್ದಳು. ಈಗ ಪತಿ ಹಾಗೂ ಮೂರು ಮಕ್ಕಳೊಂದಿಗೆ ಸಂತೋಷದಿಂದ ಬದುಕು ಸಾಗಿಸುತ್ತಿದ್ದಾಳೆ.

ನಾನ್‌ ಬದುಕಿ ಬರಿ¤ನಿ ಅಂತ್‌ ಅನ್ಕೊಂಡಿರಲಿಲ್ಲ. ಬೋರ್‌ನಾಗ್‌ ಬಿದ್ದಾಗ ಮೈಯೆಲ್ಲ ಇರುವಿ ಕಡಿದಿದುÌ. ಉಸಲ್‌
(ಉಸಿರು) ಹೋದಂಗ್‌ ಆಕ್ಕಿತ್ತು. ಮ್ಯಾಗಿಂದ್‌ ಗಾಳಿ ಬಿಡ್ತಿದ್ರು. ಹಗ್ಗಾ ಕೊಟ್ಟು ಮ್ಯಾಗ್‌ ಎತ್ತಾಕ್‌ ನೋಡಿದ್ರು, ನನ್ನ ಕೈ ಮುರಿದಂಗ ಆಗ್ತಿತ್ತು. ಗುರುವಾರ ಸಂಜಿ 6ಕ್ಕ ಬಿದ್ದಿದ್ದೆ. ಮರುದಿನ ಮಧ್ಯಾಹ್ನ 1ಕ್ಕೆ ಹೊರ ತಗದಿದ್ರು. ಒಳಗ್‌ ಎಚ್ಚರ್‌
ಆಗಾಗೊಮ್ಮೆ ಮನೆ ದೇವರ ಧ್ಯಾನ್‌ ಮಾಡ್ತಿದ್ದೆ. ಉಳಿಸ್ರಿ ಎಂದು ಚೀರತಿದ್ದೆ.

– ಕಲ್ಲವ್ವ ಶ್ರೀಶೈಲ ಗುದಿಗೆನ್ನವರ,
ಕೊಳವೆ ಬಾವಿಯಿಂದ ಬದುಕುಳಿದವಳು.

Advertisement

Udayavani is now on Telegram. Click here to join our channel and stay updated with the latest news.

Next