ದುಬೈ : ನಾಳೆ (ಬುಧವಾರ, ಸೆಪ್ಟೆಂಬರ್) ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಹಾಗೂ ಆ ಒಕ್ಕೂಟದ ಮಿತ್ರ ರಾಷ್ಟ್ರಗಳ (ಒಪೆಕ್+) ಪ್ರತಿನಿಧಿಗಳು ಸಭೆ ಸೇರಲಿದ್ದು, ತೈಲ ಉತ್ಪಾದನೆ ನೀತಿಯಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿಂದೆ ನಿರ್ಧರಿಸಿದಂತೆ ಉತ್ಪಾದನೆಯ ಮಟ್ಟವನ್ನು ಕೊಂಚ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದ್ದು, ಮುಂಬರುವ ಹಲವು ತಿಂಗಳುಗಳವರೆಗೆ 4 ಲಕ್ಷ ಬ್ಯಾರಲ್ ಗಳಷ್ಟು ಪ್ರತಿ ದಿನ ಉತ್ಪಾದನೆಯ ಮಟ್ಟವನ್ನು ಹೆಚ್ಚಳ ಮಾಡುವಂತೆ ಈಗಾಗಲೇ ಒಕ್ಕೂಟ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ ಎಂದು ವರದಿ ತಿಳಿಸಿದ್ದು, ಈ ಕುರಿತಾಗಿ ಹೆಚ್ಚಿನ ಚರ್ಚೆಗಳು ನಾಳೆ ನಡೆಯಲಿರುವ ಸಭೆಯಲ್ಲಿ ಮಾಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : ಬೈಕ್ ಗಳ ನಡುವೆ ಅಪಘಾತ : ರಾಷ್ಟ್ರೀಯ ಖೋ-ಖೋ ಆಟಗಾರ ಸಾವು, ಇನ್ನೋರ್ವ ಗಂಭೀರ
ಈಗಾಗಲೇ ವಿಶ್ವದ ದೊಡ್ಡಣ್ಣ ಅಮೆರಿಕ, ಒಪೆಕ್ ಒಕ್ಕೂಟ ರಾಷ್ಟ್ರಗಳನ್ನು ಮನವಿ ಮಾಡಿಕೊಂಡಿದ್ದು, ತೈಲ ಬೆಲೆ ನಿತ್ಯ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಜಾಗತಿಕ ಆರ್ಥಿಕ ಚೇತರಿಕೆಗೆ ಪರಿಣಾಮ ಉಂಟು ಮಾಡಲಿದೆ. ಹಾಗಾಗಿ ತೈಲ ಉತ್ಪಾದನೆಯ ಮಟ್ಟವನ್ನು ಹೆಚ್ಚಳ ಮಾಡುವಂತೆ ಕೇಳಿಕೊಂಡಿದೆ.
ಇನ್ನು, ಸದ್ಯದ ಬೆಲೆ ಏರಿಕೆಯು ತಾತ್ಕಾಲಿಕವಾಗಿದ್ದು, ಮೆಕ್ಸಿಕೊದಲ್ಲಿನ ಪೂರೈಕೆ ಸಮಸ್ಯೆ ಹಾಗೂ ಅಮೆರಿಕದ ಗಲ್ಫ್ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಸಿದ ಭಾರಿ ಚಂಡಮಾರುತದಿಂದಾಗಿ ಬೆಲೆ ಏರಿಕೆಯಾಗಿದೆ. ಸದ್ಯ, ತೈಲ ಬೆಲೆಯು ಬ್ಯಾರಲ್ ಗೆ 70 ಡಾಲರ್ ಆಸುಪಾಸಿನಲ್ಲಿ ಇದೆ. ಎಂದು ಒಪೆಕ್+ ಮೂಲಗಳು ಮಾಹಿತಿ ನೀಡಿವೆ.
ದಿನಕ್ಕೆ 4 ಲಕ್ಷ ಬ್ಯಾರಲ್ ಗಳಷ್ಟು ಉತ್ಪಾದನೆ ಮಟ್ಟವನ್ನು ಏರಿಕೆ ಮಾಡುವ ಯೋಜನೆಯಂತೆಯೇ ಒಪಕ್+ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸುಸ್ಸಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ಸೌದಿ ಅರೇಬಿಯಾ ವಿ.ನಿಲ್ದಾಣದಲ್ಲಿ ಡ್ರೋನ್ ದಾಳಿ: ಎಂಟು ಮಂದಿಗೆ ಗಾಯ, ವಿಮಾನಗಳಿಗೆ ಹಾನಿ