Advertisement

ಹೋರಾಟದಿಂದ ಮಾತ್ರ ಕಾರ್ಮಿಕರಿಗೆ ಸೌಲಭ್ಯ ಲಭ್ಯ

05:09 PM May 20, 2019 | Team Udayavani |

ಪಾವಗಡ: ಹಲವು ಹೋರಾಟಗಳ ಫ‌ಲವಾಗಿ ಕಟ್ಟಡ ಕಾರ್ಮಿಕರಿಗೆ ಇಂದು ಸೌಲಭ್ಯಗಳು ದೊರಕುತ್ತಿವೆ ಎಂದುತುಮಕೂರು ಜಿಲ್ಲಾ ಕಾರ್ಮಿಕ ಸಂಘಟನೆ ಎಐಟಿಸಿ ಮುಖಂಡ ಗಿರೀಶ್‌ ಹೇಳಿದರು.

Advertisement

ಭಾನುವಾರ ತಾಲೂಕಿನ ವೆಂಕಟಾಪುರ ಗ್ರಾಮದ ಕನಕ ಭವನದಲ್ಲಿ ಕಟ್ಟಡಕಾರ್ಮಿಕರ ಸಂಘದಿಂದ ನಡೆದ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತರಾಗ ಬೇಕು. ಸಂಘದಿಂದ ನಡೆಯುವ ಪ್ರತಿಯೊಂದು ಸಭೆಗೂ ಅಗಮಿಸಿ,

ಮಾಹಿತಿಯನ್ನು ಪಡೆದುಕೊಳ್ಳ ಬೇಕು ಎಂದು ಹೇಳಿದರು. ಮುಖಂಡ ಗೌಡ ರಂಗಪ್ಪ ಮಾತನಾಡಿ, ದುಡಿಯುವ ವರ್ಗಕ್ಕೆ ಎಐಟಿ ಯುಸಿ ನ್ಯಾಯ ಕಲ್ಪಿಸಿದೆ. ಸಂಘಟಿತರಾಗಿ ಹೋರಾಡಿದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದರು.

ಅಂಧ್ರದ ಅನಂತಪುರ ಜಿಲ್ಲೆಯ ಸಿಪಿಐ. ನಾಯಕ ಚಿಟ್ಲು ರುದ್ರಯ್ಯ ಮಾತನಾಡಿ, ಕಾರ್ಮಿಕರು ಎಂದರೆದೇಶದ ಸಂಪತ್ತು. ಆದರೆ, ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ. ವಿಶ್ವ ಕಾರ್ಮಿಕರಲ್ಲಿ ಮಹಿಳೆಯರ ಪಾತ್ರ ಅಪಾರವಿದೆ ಎಂದು ತಿಳಿಸಿದರು. ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಬಲ್ಲೇನಹಳ್ಳಿ ಶ್ರೀರಾಮಯ್ಯ,ಕಾರ್ಮಿಕ ಮುಖಂಡ ಗೌಡೇಟಿ ನಾಗರತ್ನಪ್ಪ, ಸಿಪಿಐ ಮುಖಂಡ ಅಶ್ವಥ್‌ ನಾರಾಯಣ, ಮುಖಂಡರಾದ ಕೃಷ್ಣ ಮೂರ್ತಿ, ತಿಪೇಸ್ವಾಮಿ, ರಾಮನಾಥ್‌,ಜಿ.ಎಚ್‌.ರಾಮಾಂಜಿ, ವೆಂಕಟರಮಣಪ್ಪ ಮತ್ತು ನೂರಾರು ಕಾರ್ಮಿಕರು ಭಾಗವಹಿಸಿದ್ದರು. ವೆಂಕಟಾ ಪುರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next