ಕೃಷ್ಣರಾಜಪುರ: ದೇಸಿ ಕ್ರೀಡೆಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಯಶಸ್ಸುಗಳಿಸಬಲ್ಲ ಕ್ರೀಡಾ ಪಟುಗಳನ್ನು ತಯಾರು ಮಾಡಬೇಕಿದೆ ಎಂದು ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಹೇಳಿದರು.
ಕಲ್ಕೆರೆಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಪಾಲಿಕೆ ಮತ್ತು ದೇಸಿ ಫೌಂಡೇಷನ್‌ನಿಂದ ಆಯೋಜಿಸಿದ್ದ ದೇಸಿ ಕ್ರೀಡೆಗಳ ಅಂಗಳ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ ಮಕ್ಕಳು ಕೇವಲ ಪಠ್ಯಾಭ್ಯಾದಲ್ಲೇ ನಿರತರಾದರೆ ಲೋಕ ಜಾnನ ಬೆಳೆಯದು. ಹಳ್ಳಿಯ ಆಟಗಳು, ಸ್ಪರ್ಧಾತ್ಮಕ ಕ್ರೀಡೆಗಳನ್ನು ಆಡುವ ಮೂಲಕ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳು ಇಂದಿನ ಆಧುನಿಕ ತಂತ್ರಜಾnನ ಸೃಷ್ಟಿಸಿರುವ ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್‌ಗಳಲ್ಲಿ ಸಂಪೂರ್ಣ ಮುಳುಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕ್ರೀಡಾ ಅಂಗಳದಲ್ಲಿ ಆಡುವ ಆಟಗಳು ಮಕ್ಕಳಲ್ಲಿ ಮುಂಬರುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ನಿರ್ಭೀತಿಯಿಂದ ಎದುರಿಸುವ ಶಕ್ತಿ ತುಂಬಲಿದೆ ಎಂದು ತಿಳಿಸಿದರು.
ಕ್ರೀಡೆ ದೈಹಿಕ ಬೆಳವಣಿಗೆಗೂ ಸಹ ಹೆಚ್ಚು ಸಹಾಯಕಾರಿ, ದಶಕಗಳ ಹಿಂದಿನಿಂದ ಹಳ್ಳಿಯ ಮಕ್ಕಳು ಆಡುತ್ತಿದ್ದ ಆಟಗಳು ಇಂದು ಕಾಲಕ್ರಮೇಣ ಮರೆಯಾಗತೊಡಗಿದೆ. ಮೂಲೆ ಗುಂಪಾಗುತ್ತಿರುವ ಬ್ಯಾಲದ ಅಟಗಳ ಗತವೈಭಯ ಮತ್ತೆ ಮರುಕಳಿಸಲು ಸಲುವಾಗಿ ದೇಶಿಕ್ರೀಡೆಗಳು ಹೆಚ್ಚು ಉತ್ತೇಜನ ಅಗ್ಯತವಿದೆ ಎಂದರು.
ಪಾಲಿಕೆ ಶಾಲಾ ಮಕ್ಕಳಲ್ಲಿ ದೇಸಿ ಕ್ರೀಡೆಗಳತ್ತ ಒಲವು ಹೆಚ್ಚಿಸಲು ಕೈಗೊಳ್ಳುತ್ತಿರುವ ಕಾರ್ಯ ಅತ್ಯಂತ ಶ್ಲಾಘನಾರ್ಹವಾದದ್ದು, ಮಕ್ಕಳು ಇಂತಹ ಕ್ರೀಡೆಗಳಲ್ಲಿ ಹೆಚ್ಚು ತೊಡಗುವ ಅವಶ್ಯವಿದೆ ಎಂದು ತಿಳಿಸಿದರು. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಲ್ಲಿದಾಂಡು, ಗೋಲಿಯಾಟ, ಕುಂಟೆ ಬಿಲ್ಲೆ, ಸೈಕಲ್ ಟೈರ್ ಓಡಿಸುವುದು, ಮೊಸರು ಕುಡಿಕೆ ಹೊಡೆಯುವುದು, ಉಯ್ನಾಲೆ, ಕಬಡ್ಡಿ, ಜಲ್ಲಿಕೋಲು, ಹಗ್ಗಜಗ್ಗಾಟ್, ಲಗೋರಿ, ಕೋಕೋ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿ ಆಟವಾಡಿದರು.
ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲ್ಕೆರೆ ಶ್ರೀನಿವಾಸ್, ಗೋಪಾಲ್, ಸೋಮ್‌ಶೇಖರ್, ಶ್ರೀಧರ್, ಗೋಪಾಲ ಕೃಷ್ಣ ಇತರರು ಇದ್ದರು.