Advertisement
ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸುಗಳ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿರುವ ಶೇ. 45ರಷ್ಟು ಸೀಟುಗಳ ಪ್ರವೇಶಕ್ಕಾಗಿ ನಡೆಸಲಾಗುತ್ತಿದೆ. ಅದೇ ರೀತಿ ಖಾಸಗಿ ಕಾಲೇಜುಗಳಲ್ಲಿರುವ ಶೇ. 30 ಸೀಟು ಹಾಗೂ ಶೇ. 25 ಸೀಟುಗಳನ್ನು ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟುಗಳನ್ನು ಕಾಮೆಡ್-ಕೆ ಪರೀಕ್ಷೆ ನಡೆಸಿ ಹಂಚಿಕೆ ಮಾಡಲಾಗುತ್ತಿದೆ.
Related Articles
Advertisement
ಸಭೆಯಲ್ಲಿ ಚರ್ಚೆಯಾಗಿಲ್ಲಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ಇದೊಂದು ಮಹತ್ವದ ಅಂಶವಾಗಿದೆ. ಈ ಬಗ್ಗೆ ಚರ್ಚೆ ನಡೆಸಿಲ್ಲ. ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ನಿರ್ಧರಿಸಲಾಗುತ್ತದೆ. ಸದ್ಯ ಒಂದೇ ಪರೀಕ್ಷೆ ನಡೆಸಲು ಮಾತ್ರ ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಮತ್ತು ಸೀಟು ಹಂಚಿಕೆಯಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದರ ಬಗ್ಗೆ ಬುಧವಾರದ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಹೇಳುತ್ತಾರೆ. ಸ್ಪಷ್ಟ ನಿಲುವು ತಾಳಬೇಕು
ಸದ್ಯ ಸೀಟು ಹಂಚಿಕೆ ಮತ್ತು ಶುಲ್ಕ ನಿಯಮಗಳಲ್ಲಿ ಈಗಿರುವ ನಿಯಮವನ್ನೇ ಉಳಿಸಿಕೊಂಡು ಪರೀಕ್ಷೆ ನಡೆಸುವುದರಲ್ಲಿ ಮಾತ್ರ ಒಂದೇ ಪರೀಕ್ಷೆ ನಡೆಸಬಹುದಾ?, ಅನ್ಯ ರಾಜ್ಯಗಳಿಗೆ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ನಿಯಮ ರೂಪಿಸಬೇಕಾ? ಅಥವಾ ಸದ್ಯ ಕಾಮೆಡ್-ಕೆ ಅಡಿ ನೀಡುತ್ತಿರುವ ಸೀಟುಗಳಿಗೆ ಮಾತ್ರ ಒಂದು ನಿಯಮ ರೂಪಿಸಬೇಕಾ ಎಂಬುದರ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಸ್ಪಷ್ಟವಾದ ನಿಲುವು ತಾಳಬೇಕಿದೆ ಎಂದು ತಿಳಿಸುತ್ತಾರೆ. ಎರಡೂ ಪರೀಕ್ಷೆಯನ್ನು ವಿಲೀನಗೊಳಿಸಲು ಮಾತ್ರ ಈಗ ಖಾಸಗಿ ಕಾಲೇಜುಗಳು ಒಪ್ಪಿಗೆ ಸೂಚಿಸಿವೆ. ಅಧಿಕೃತವಾಗಿ ಪತ್ರ ವ್ಯವಹಾರ ನಡೆಸಬೇಕಿದೆ. ಆ ಸಮಯದಲ್ಲಿ ಸೀಟು ಹಂಚಿಕೆ ಮತ್ತು ನಿಯಮಗಳ ಕುರಿತು ಚರ್ಚಿಸಲಾಗುತ್ತದೆ.
– ಎಸ್. ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ