Advertisement
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್ 1 ಕಲಬುರಗಿ 05, ಯಾದಗಿರಿ 02 ರಾಯಚೂರು 02, ಕೊಪ್ಪಳ 03 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 02 ಬಿಜೆಪಿ ಶಾಸಕರಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಎರಡು ಸಲ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರು ಈ ಬಾರಿ ಸಚಿವರಾಗುತ್ತಾರೆಂದು ಹೇಳಲಾಗಿತ್ತು. ಪಟ್ಟಿಯಲ್ಲಿದ್ದ ಅವರ ಹೆಸರು ಕೊನೆಯ ಕ್ಷಣದಲ್ಲಿ ಕೈ ಬಿಡಲಾಗಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ಈ ಹಿಂದೆ ಜೆಡಿಎಸ್- ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲೂ ದತ್ತಾತ್ರೇಯ ಪಾಟೀಲ್ ಅವರ ತಂದೆ ದಿ. ಚಂದ್ರಶೇಖರ ಪಾಟೀಲ ರೇವೂರ ಅವರಿಗೂ ಸಚಿವ ಸ್ಥಾನ ಕೈ ತಪ್ಪಿತ್ತು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಚಂದ್ರಶೇಖರ ಮಧ್ಯಸ್ಥಿಕೆಯಾಗಿ ಮಾತುಕತೆ ನಡೆಸಿದ್ದರು. ಈಗ ಅವರ ಮಗನಿಗೂ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಗೆ ಹೈ.ಕ ಭಾಗದ ಸಚಿವರೇ ಅಧ್ಯಕ್ಷರಾಗಬೇಕೆಂಬ ನಿಯಮವಿರುವುದರಿಂದ ಮಂಡಳಿ ಅಧ್ಯಕ್ಷರಾಗಿ ಸಚಿವ ಪ್ರಭು ಚವ್ಹಾಣ ಅವರೇ ನೇಮಕವಾಗಲಿದ್ದಾರೆ.
Related Articles
Advertisement