Advertisement
ಅದನ್ನು ತೆಗೆದು ನೋಡಿದರೆ, ಹಾವು ಮಾತ್ರ ಇರುವುದಿಲ್ಲ. ಆದರೆ, ಅಲ್ಲೊಂದು ಹಾವಿದ್ದ ಕುರುಹು ಸ್ಪಷ್ಟವಾಗುತ್ತದೆ. ಮತ್ತೂಮ್ಮೆ ಆಫೀಸಿನಲ್ಲಿ ಕೆಲಸ ಮಾಡುವಾಗ, ಆಫೀಸ್ ಬಾಯ್ ಬಂದು ಇವತ್ತು ಕಾಫಿ ಇಲ್ಲ, ಅದರ ಬದಲು ಟೀ ಇದೆ ಎಂದು ಹೇಳುತ್ತಾನೆ ಎಂದು ಹೇಳಿದಂತಾಗುತ್ತದೆ. ತಕ್ಷಣ ಅದನ್ನೇ ಹೇಳಿಬಿಡುತ್ತಾನೆ. ಎಲ್ಲರೂ ಹುಚ್ಚು ಅನ್ನಿತಿರುವಾಗಲೇ ಆಫೀಸ್ ಬಾಯ್ ಬಂದು ಕಾಫಿ ಇಲ್ಲ ಎಂದು ಕೈಯಾಡಿಸುತ್ತಾನೆ.
Related Articles
Advertisement
ಚಿತ್ರ ಮುಗಿದ ಮೇಲೂ ಈ ಪ್ರಶ್ನೆಗಳು ಪ್ರೇಕ್ಷಕನ ತಲೆಯಲ್ಲಿ ಗುಂಯ್‌ಗಾಟ್ಟುತ್ತಿರುತ್ತದೆ. ಆ ನಿಟ್ಟಿನಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ, ಮನರಂಜನೆ ನಿರೀಕ್ಷಿಸುವವರಿಗೆ ಸಿನಿಮಾ ಅಷ್ಟು ಬೇಗ ಅರ್ಥವಾಗುವುದು ಕಷ್ಟ. ಹಾಗಾಗಿ ಇದೊಂದು ಅಪ್ಪಟ ಬುದ್ಧಿವಂತರ ಚಿತ್ರ ಎಂದು ಕರೆಯಬಹುದು. ಬುದ್ಧಿವಂತಿಕೆಯೊಂದಷ್ಟೇ ಅಲ್ಲ, ಸ್ವಲ್ಪ ತಾಳ್ಮೆಯೂ ಬೇಕು. ಏಕೆಂದರೆ, ಚಿತ್ರಕ್ಕೆ ಸ್ಪಷ್ಟ ರೂಪ ಬರುವುದೇ ಕೊನೆಯಲ್ಲಿ.
ಅಲ್ಲಿಯವರೆಗೂ ನಾಯಕ ಅದೆಷ್ಟು ಗೊಂದಲಕ್ಕೊಳಗಾಗಿರುತ್ತಾನೋ, ಪ್ರೇಕ್ಷಕನದ್ದೂ ಅದೇ ಪಾಡು. ಬುದ್ಧಿವಂತಿಕೆ ಮತ್ತು ತಾಳ್ಮೆ ಎರಡೂ ಇದ್ದರೆ ಚಿತ್ರ ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭವ ಕೊಡುವುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಒಂದೊಂದು ಘಟನೆ ನಡೆದಾಗಲೂ ಚಿತ್ರಕ್ಕೊಂದು ಹೊಸ ಟ್ವಿಸ್ಟ್ ಸಿಗುತ್ತಾ ಹೋಗುತ್ತದೆ. ಹೊಸ ಟ್ವಿಸ್ಟ್ ಸಿಗುತ್ತಿದ್ದಂತೆ ಚಿತ್ರ ಹೀಗಿರಬಹುದಾ ಎಂದನಿಸುತ್ತದೆ.
ಹಾಗಾಗಿ ಸಂಪೂರ್ಣವಾಗಿ ಅರ್ಥವಾಗುವುದಕ್ಕೆ, ಚಿತ್ರ ಮುಗಿಯುವವರೆಗೂ ಕಾಯಬೇಕು. ಹಾಗೆ ಅರ್ಥವಾಗಿಬಿಟ್ಟರೆ, ಬುದ್ಧಿವಂತ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. “ಮೋಜೋ’ ಚಿತ್ರದಲ್ಲಿ ಕೆಲವೇ ಪಾತ್ರಗಳಿವೆ. ಆ ಪೈಕಿ ಶ್ರೀನಾಥ್ ವಸಿಷ್ಠ ಬಿಟ್ಟರೆ, ಎಲ್ಲರೂ ಹೊಸಬರು. ಆ ಪೈಕಿ ಗಮನಸೆಳೆಯುವುದು ಮನು ಮತ್ತು ಅನೂಷಾ ಇಬ್ಬರೇ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ, ಚಿತ್ರಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಖುಷಿ ಕೊಡುತ್ತದೆ.
ಚಿತ್ರ: ಮೋಜೋನಿರ್ದೇಶನ: ಶ್ರೀಶ ಬೆಳಕವಾಡಿ
ನಿರ್ಮಾಣ: ಗಜಾನನ ಭಟ್
ತಾರಾಗಣ: ಮನು, ಅನೂಷಾ, ಸಂದೀಪ್ ಶ್ರೀಧರ್, ನಂದನ್ ಜಾಂಟಿ, ಸ್ಮಿತಾ ಕುಲಕರ್ಣಿ ಮುಂತಾದವರು * ಚೇತನ್ ನಾಡಿಗೇರ್