Advertisement
ಯಶೋಧರನು ಶುದೊಧನನ ಮಗ ನಾದರೂ ಅರಮನೆ ಯಲ್ಲಿ ಜನಿಸಿದ್ದಲ್ಲ. ಅವನ ತಾಯಿ ಪ್ರವಾಸ ಕೈಗೊಳ್ಳುತ್ತಿದ್ದಾಗ ಹೆರಿಗೆ ಬೇನೆ ಕಾಣಿಸಿ ಕೊಂಡಿ ತಂತೆ. ಮುಂದಕ್ಕೆ ಹೋಗುವುದು ಸಾಧ್ಯವಿಲ್ಲ ಎನಿಸಿದಾಗ ಆಕೆ ಒಂದು ಮರದ ಬುಡದಲ್ಲಿ ನಿಂತು ಕೊಂಡಳು. ಅಲ್ಲೇ, ನಿಂತ ಭಂಗಿಯಲ್ಲೇ ಆಕೆಗೆ ಪ್ರಸವವಾಯಿತು. ಬುದ್ಧ ಜನಿಸಿದ್ದು ಹೀಗೆ.
ಬುದ್ಧ ತಾನು ಕುಳಿತಲ್ಲಿಂದಲೇ ಕೆಲವು ಒಣ ಎಲೆಗಳನ್ನು ಕೈಗಳಲ್ಲಿ ಎತ್ತಿಕೊಂಡರು. ಅದನ್ನು ಪಂಡಿತರಿಗೆ ತೋರಿಸಿ, “ನನ್ನ ಕೈಯಲ್ಲಿ ಎಷ್ಟು ಎಲೆಗಳಿವೆ ಸ್ವಾಮಿ? ಈ ಅರಣ್ಯದಲ್ಲಿ ಹೆಚ್ಚು ಎಲೆಗಳಿರಬಹುದೇ ಅಥವಾ ನನ್ನ ಕೈಯಲ್ಲೇ?’ ಎಂದು ಪ್ರಶ್ನಿಸಿದರು.
Related Articles
ಪಂಡಿತರು ಬುದ್ಧ ನನ್ನೊಮ್ಮೆ ನಿರುಕಿಸಿ ಹೇಳಿದರು, “ಸ್ವಾಮೀ ಇದೆಂಥ ಪ್ರಶ್ನೆ! ನಿಮ್ಮ ಮುಷ್ಠಿಯಲ್ಲಿ ಹೆಚ್ಚೆಂದರೆ ಹತ್ತಿಪ್ಪತ್ತು ತರಗೆಲೆಗಳು ಇರಬಹುದು. ಈ ಅರಣ್ಯದಲ್ಲಿ ಕೋಟ್ಯಂತರ ಒಣ ಎಲೆಗಳು ಬಿದ್ದಿವೆಯಲ್ಲ…’
Advertisement
“ನೀವು ಕೇಳಿದ ಪ್ರಶ್ನೆಗೂ ಇದೇ ಉತ್ತರ. ನಾನು ಉಪದೇಶಿಸಿರುವುದು ನನ್ನ ಕೈಯಲ್ಲಿರುವ ಒಣ ಎಲೆಗಳಷ್ಟು ಮಾತ್ರ. ಉಪದೇಶಿಸದೆ ಇರುವುದೇ ಹೆಚ್ಚು…’
ಪಂಡಿತರು ಇನ್ನೂ ಒಂದು ಪ್ರಶ್ನೆ ಕೇಳಿದರು, “ಹೇಳದೆ ಇರುವುದಕ್ಕೆ ಕಾರಣವೇನು?’“ಅದು ಮೋಕ್ಷ ಸಾಧನೆಗೆ ಅಗತ್ಯ ವಾದುದಲ್ಲ. ಅದು ಧ್ಯಾನ ಮಾಡುವು ದಕ್ಕೆ, ಸಮಾಧಿ ಹೊಂದುವುದಕ್ಕೆ ಅಗತ್ಯ ವಾದುದಲ್ಲ. ಹಾಗಾಗಿ ನಾನು ಉಪದೇಶಿ ಸಿಲ್ಲ. ಅಲ್ಲದೆ, ಅದನ್ನು ಉಪದೇಶಿಸುವು ದಕ್ಕೆ ಸಾಧ್ಯವೂ ಇಲ್ಲ. ನಾನು ಹೇಳ ಬೇಕೆಂದು ಬಯಸಿದರೂ ಅದು ಶಬ್ದ ಗಳಲ್ಲಿ ಹೇಳುವಂಥದ್ದಲ್ಲ. ಅದು ಅನು ಭವಿಸಿ ತಿಳಿಯಬೇಕಾದದ್ದು. ಅದು ಅನುಭವಾತ್ಮಕವಾದದ್ದು…’
ಆಧ್ಯಾತ್ಮಿಕ, ಅನುಭಾವಗಳ ಲೋಕ ದಲ್ಲಿ ಅನುಭವಕ್ಕೆ ಮಾತ್ರ ನಿಲುಕುವಂಥ ವಿಷಯಗಳು ಹಲವಾರಿವೆ. ಅವುಗಳನ್ನು ಭಾಷೆಯಲ್ಲಿ ಕಟ್ಟಿಕೊಡಲಾಗದು. ಅಧ್ಯಾತ್ಮ, ಅನುಭಾವಗಳಷ್ಟು ದೂರ ಹೋಗುವುದು ಬೇಡ. ಪ್ರೀತಿ, ಒಲುಮೆ, ಖುಷಿಯಂತಹ ಭಾವನೆಗಳ ವಿಚಾರ ದಲ್ಲಿಯೂ ಈ ಮಾತು ನಿಜ. ಅನುಭವ ವೇದ್ಯವಾದುದೇ ನಿಜ, ಅದಷ್ಟೇ ಸಂಪೂರ್ಣ. ಅದನ್ನು ಭಾಷೆಯಲ್ಲಿ ವರ್ಣಿಸಲು ಹೊರಟರೆ ಅದು ಕುಂದು ತ್ತದೆ, ಬಣ್ಣಗೆಡುತ್ತದೆ, ಸುಳ್ಳಾಗುತ್ತದೆ. ( ಸಾರ ಸಂಗ್ರಹ)