Advertisement

Dakshina Kannada: ಜಿಲ್ಲೆಯಲ್ಲಿ ಹಿಂಪಡೆದದ್ದು ಕೇವಲ 340 ಬಿಪಿಎಲ್‌ ಕಾರ್ಡ್‌: ಐವನ್‌

12:04 AM Dec 09, 2024 | Team Udayavani |

ಮಂಗಳೂರು: ರಾಜ್ಯ ಸರಕಾರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿದೆ ಎಂದು ಬಿಜೆಪಿ ಶಾಸಕರು ರಾಜಕೀಯ ಪ್ರೇರಿತ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅರ್ಹತೆ ಇದ್ದವರ ಕಾರ್ಡ್‌ ಎಂದೂ ರದ್ದಾಗುವುದಿಲ್ಲ. ದ.ಕ.ಜಿಲ್ಲೆಯಲ್ಲಿ 340 ಬಿಪಿಎಲ್‌ ಪಡಿತರ ಚೀಟಿ ಮಾತ್ರ ಹಿಂಪಡೆಯಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ಹೇಳಿದರು.

Advertisement

ಕಾಂಗ್ರೆಸ್‌ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4.59 ಲಕ್ಷ ಕುಟುಂಬಗಳು ಪಡಿತರ ಚೀಟಿ ಹೊಂದಿವೆ. ಇದರಲ್ಲಿ 2,77,744 ಬಿಪಿಎಲ್‌ ಕಾರ್ಡ್‌ ಗಳಿದ್ದು, ಈ ಪೈಕಿ 5,456 ಬಿಪಿಎಲ್‌ ಕಾರ್ಡ್‌ಗಳನ್ನು ಸಂಶಯಾಸ್ಪದವಾಗಿ ಗುರುತಿಸಲಾಗಿತ್ತು. ಅದರಲ್ಲೂ 5,116 ಮಂದಿಯ ಕಾರ್ಡ್‌ಗಳನ್ನು ಬಿಪಿಎಲ್‌ ಆಗಿಯೇ ಉಳಿಸಲಾಗಿದೆ ಎಂದರು.

500 ಕೋ.ರೂ.ಗೆ ಮನವಿ
ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಇನ್ನಷ್ಟು ಉನ್ನತೀಕರಣಗೊಳಿಸಿ ಮಂಡಳಿ ಜಾರಿಗೊಳಿಸಿ ಕರಾವಳಿ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಡಲು ಸರಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಕೇಳಿದ್ದೇನೆ ಎಂದು ಅವರು ತಿಳಿಸಿದರು.

ನವೀನ್‌ ಡಿ’ ಸೋಜಾ, ಸುರೇಂದ್ರ ಕಂಬಳಿ, ಸುರೇಖಾ, ಶಾಂತಲಾ ಗಟ್ಟಿ, ಅಮೃತ್‌ ಕದ್ರಿ, ವಿಕಾಸ್‌ ಶೆಟ್ಟಿ, ಸತೀಶ್‌ ಪೆಂಗಲ್‌, ನೀತಾ, ಅಲಿಸ್ಟನ್‌, ರಿತೇಶ್‌, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಸ್ಟೇಟ್‌ಬ್ಯಾಂಕ್‌-ಕಾರ್ಕಳ ಕೆಎಸ್ಸಾರ್ಟಿಸಿ ಬಸ್‌
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಹೆಚ್ಚಿರುವ ಕಾರಣ ಶಕ್ತಿ ಯೋಜನೆಗೆ ತುಸು ಹಿನ್ನಡೆಯಾಗಿದೆ. ಜಿಲ್ಲೆಯಿಂದ ಹೆಚ್ಚುವರಿ ಸರಕಾರಿ ಬಸ್‌ ಕಾರ್ಯಾಚರಣೆ ಸಂಬಂಧ ಜಿಲ್ಲಾಧಿಕಾರಿ, ಆರ್‌ಟಿಒ, ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ.

Advertisement

ಸ್ಟೇಟ್‌ಬ್ಯಾಂಕ್‌ನಿಂದ ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಕೆಎಸ್ಸಾರ್ಟಿಸಿ ಬಸ್‌ ಬೇಡಿಕೆ ಇದ್ದು, ತಾತ್ಕಾಲಿಕ ಪರವಾನಿಗೆ ಮೂಲಕ 15 ದಿನಗಳ ಒಳಗಾಗಿ 6 ಬಸ್‌ಗಳನ್ನು ಆರಂಭಿಸಲು ಸೂಚಿಸಿದ್ದೇನೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪರವಾನಿಗೆ ಅವಧಿ ಪೂರ್ಣಗೊಂಡ 13 ರೂಟ್‌ಗಳಲ್ಲಿ ಮತ್ತೆ ಪರವಾನಿಗೆ ಪಡೆದು ಬಸ್‌ ಓಡಿಸುವಂತೆ ತಿಳಿಸಲಾಗಿದೆ. ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಹೆಚ್ಚುವರಿ 47 ರೂಟ್‌ಗಳನ್ನು ಗುರುತಿಸಲಾಗಿದೆ ಎಂದು ಐವನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next