ಹೆಚ್ಚಿನವರಿಗೆ ಜಿಮ್‌ಗೆ ತೆರಳಿ ವ್ಯಾಯಾಮ ಅಥವಾ ವರ್ಕ್‌ಔಟ್ ಮಾಡದಿರಲು ಹಲವು ಕಾರಣಗಳಿವೆ. ಇದಕ್ಕೆ ಸುಲಭ ದಾರಿ ಎಂಬಂತೆ ಆನ್‌ಲೈನ್ ವರ್ಕ್‌ಔಟ್‌ಗೆ ಅನೇಕರು ಮೊರೆ ಹೋಗುತ್ತಾರೆ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ತರಬೇತುದಾರರ ಮಾರ್ಗದರ್ಶನದಂತೆ ವ್ಯಾಯಾಮವನ್ನು ಮಾಡಿ ದೇಹವನ್ನು ದಂಡಿಸುತ್ತಾರೆ.
ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ವರ್ಕ್‌ಔಟ್ ಹೆಚ್ಚು ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿದೆ. ಕೆಲವೊಂದು ಬಾರಿ ಅದು ಒಳಗೊಂಡಿರುವ ನೈಜ ತಂತ್ರಗಳನ್ನು ಅರಿತುಕೊಳ್ಳಲು ಸಾಧ್ಯವಾಗದೆ ಇರಬಹುದು. ಇವುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಮ್ಮ ಮನಸ್ಸಿಗೆ ಬರುವ ಪ್ರಶ್ನೆ ಆನ್‌ಲೈನ್ ವರ್ಕ್‌ಔಟ್ ಸುರಕ್ಷಿತವೆ?
ಅನೇಕ ಜನರು ಆನ್‌ಲೈನ್ ವರ್ಕ್ ಔಟ್‌ಗಳ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆನ್‌ಲೈನ್ ಮೂಲಕ ವರ್ಕ್ ಔಟ್ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು 2 ತಿಂಗಳಲ್ಲಿ 8 ಕಿಲೋ ತೂಕ ಇಳಿಸಿಕೊಂಡರು. ಆದರೆ ಅವಳ ಬೆನ್ನಿನಲ್ಲಿ ಕ್ರಮೇಣ ನೋವು ಕಾಣಿಸಿಕೊಳ್ಳಲಾರಂಭಿಸಿತು. ತೂಕ ಇಳಿಸಿಕೊಂಡ ಖುಷಿಯಲ್ಲಿದ್ದ ಆಕೆಗೆ ಈ ಅಭ್ಯಾಸ ಅವಳ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿತು.
ವೈದ್ಯರ ಪ್ರಕಾರ ಆನ್‌ಲೈನ್ ವರ್ಕ್ ಔಟ್ ಅನುಸರಿಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಬೇಕು. ದೈಹಿಕ ಮೌಲ್ಯಮಾಪನ, ಫಿಟ್‌ನೆಸ್ ಪರೀಕ್ಷೆ ಆಧರಿಸಿ ಕಸ್ಟಮೈಸ್ಡ್ ಯೋಜನೆಗಳನ್ನು ಅನುಸರಿಸುವ ಅಗತ್ಯವಿದೆ. ವೈಯಕ್ತೀಕರಿಸಿದ ವರ್ಕ್ ಔಟ್ ಯೋಜನೆಗಳು ದೇಹದ ಆರೋಗ್ಯಕ್ಕೆ ಪೂರಕ ಹಾಗೂ ಗಾಯಗಳನ್ನು ತಪ್ಪಿಸುವಂತೆ ಮಾಡುತ್ತದೆ. ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾರ್ಗದರ್ಶಕರೊಂದಿಗೆ ಮಾಡುವ ವ್ಯಾಯಾಮಗಳು ಹೆಚ್ಚು ಮಹತ್ವದ್ದಾಗಿದೆ.
ಸಮಸ್ಯೆಗಳು
· ನಿಮ್ಮ ದೇಹದ ಬಗ್ಗೆ ಆನ್‌ಲೈನ್ ತರಬೇತುದಾರರಿಗೆ ತಿಳಿದಿರುವುದಿಲ್ಲ.
· ತರಬೇತುದಾರರು ದೈಹಿಕವಾಗಿ ನಿಮ್ಮ ಪಕ್ಕದಲ್ಲಿರುವುದಿಲ್ಲ.
· ಆನ್‌ಲೈನ್ ತರಬೇತುದಾರರ ವ್ಯಾಯಾಮ ನಡೆಗಳು ಅಸ್ಪಷ್ಟ
· ನೋವು ಮಾಡಿಕೊಳ್ಳದೆ ವರ್ಕ್‌ಔಟ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ
· ಅನುಕರಣೆ ಹೆಚ್ಚು