Advertisement

Online video game ದಾಸ: ಕಲಬುರಗಿಯಲ್ಲಿ ನರ್ಸಿಂಗ್ ವಿದ್ಯಾರ್ಥಿ ನೇಣಿಗೆ ಬ*ಲಿ

11:44 PM Dec 05, 2024 | Team Udayavani |

ಕಲಬುರಗಿ: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿ ಆನ್ಲೈನ್ ವಿಡಿಯೋ ಗೇಮ್ ನ ದಾಸನಾಗಿ ಕೊನೆಗೆ ಅದರಿಂದ ಹೊರ ಬಾರಲಾರದೇ ಆತ್ಮಹ*ತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುರುವಾರ(ಡಿ5) ನಗರದಲ್ಲಿ ನಡೆದಿದೆ.

Advertisement

ಇಲ್ಲಿನ ಜೀಮ್ಸ್ ಆಸ್ಪತ್ರೆಯ ನರ್ಸಿಂಗ್ ಕೋಸ್೯ನ ಅಂತೀಮ ವರ್ಷದಲ್ಲಿ ಓದುತ್ತಿದ್ದ ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರದ ಸೋಮನಾಥ ಚಿದ್ರೆ( 22) ಎಂಬ ವಿದ್ಯಾರ್ಥಿಯೇ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

ನಗರದ ಎಸ್ಪಿ ಕಚೇರಿಗೆ ಹತ್ತಿಕೊಂಡಂತಿರುವ ವೀರಶೈವ ವಸತಿ ನಿಲಯದ ಆವರಣದ ಮರಕ್ಕೆ ನೇಣು ಹಾಕಿಕೊಂಡು ಸೋಮನಾಥ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿಗೆ ಆನ್ಲೈನ್ ವಿಡಿಯೋ ಗೇಮ್ ಕಾರಣ ಎಂಬುದಾಗಿ ಸೋಮನಾಥನ ತಂದೆ ಸತೀಶಕುಮಾರ ದೂರು ಸಲ್ಲಿಸಿದ್ದಾರೆ.‌ ಹೊಲದ ಮೇಲೆ ಸಾಲ ಮಾಡಿ ಹಾಗೂ ಮನೆಯಲ್ಲಿರುವ ಬಂಗಾರ ಅಡವು ಇಟ್ಟು ಮಗನಿಗೆ ಹಣ ತಂದು ಕೊಡಲಾಗಿದೆ. ಒಟ್ಟು 37 ಲಕ್ಷ ರೂ ಸಾಲ ಮಾಡಿ ಮಗನಿಗೆ ತಂದು ಕೊಡಲಾಗಿದೆ. ಕೊನೆಗೂ ಆನ್ಲೈನ್ ವಿಡಿಯೋ ಚಟದಿಂದ ಹೊರ ಬಾರದೇ ಮಗ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ: ಸಾಲ ಸೋಲ‌ ಮಾಡಿ ಮಗನಿಗೆ ಕೇಳಿದಷ್ಟು ಹಣ ನೀಡಿದ್ದರೂ ಆತ ನಮಗೆ ಬಿಟ್ಟು ಹೋದನಲ್ಲ ಎಂದು ಸೋಮನಾಥನ ಕುಟುಂಬಸ್ಥರು ರೋಧಿಸುತ್ತಿರುವ ದೃಶ್ಯ ಹೃದಯ ಕಲಕುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next