Advertisement
ಕಡ್ಡಾಯ ಆಡಿಟ್ ಇರುವ ಬಿಸಿನೆಸ್ ಹಾಗೂ ಪ್ರೊಫೆಶನಲ್ ವ್ಯಕ್ತಿಗಳಿಗೆ ರಿಟರ್ನ್ ಫೈಲಿಂಗ್ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 30, ಆದರೆ ಸಂಬಳ ಮತ್ತಿತರ ಸೀಮಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದು ಜುಲೈ 31.
Related Articles
Advertisement
ಕ್ವಿಕ್ ಫೈಲಿಂಗ್: ಲಾಗ್‌ಇನ್ ಆದ ಮೇಲೆ ಕ್ವಿಕ್ ಇ-ಫೈಲ್ ಐಟಿಆರ್’ ಎಂಬ ಎಡಭಾಗದ ಮೂರನೆಯ ಬಟನ್ ° ಒತ್ತಿ. ಆಗ ಬರುವ ಪರದೆಯಲ್ಲಿ ನಿಮ್ಮ ಪ್ಯಾನ್ ನಂಬರ್, ಬೇಕಾದ ಐಟಿಆರ್ ಫಾರ್ಮ್ ನಂಬರ್ 1/ಸಹಜ್, ಅಸೆಸೆ¾ಂಟ್ ವರ್ಷ (ಸದ್ರಿ 2017-18. ಅಂದರೆ, ವಿತ್ತ ವರ್ಷ 2016-17; ದಯವಿಟ್ಟು ಗಮನಿಸಿ) ಇತ್ಯಾದಿಗಳನ್ನು ತುಂಬಿ ಮುಂದಕ್ಕೆ ಹೋಗಿರಿ. ಮುಂದೆ ತೆರೆದುಕೊಳ್ಳುವ ಸ್ಕ್ರೀನಿನಲ್ಲಿ ಸೂಚನೆಗಳ ಪುಟ ಸಹಿತ ಇನ್ನು 5 ಪುಟಗಳು ಇರುತ್ತವೆ. ಅವುಗಳನ್ನು ಒಂದೊಂದಾಗಿ ತೆರೆದು ಮಾಹಿತಿಗಳನ್ನು ತುಂಬಿರಿ.
1ವೈಯಕ್ತಿಕ ಮಾಹಿತಿ: ಈ ಪುಟದಲ್ಲಿ ಹೆಸರು, ಪ್ಯಾನ್ ನಂಬರ್, ಲಿಂಗ, ವಿಳಾಸ, ಸ್ಟೇಟಸ್, ಇ-ಮೈಲ್, ಮೊಬೈಲ್, ಆಧಾರ್ ನಂಬರ್ ಇತ್ಯಾದಿ ವಿವರಗಳನ್ನು ತುಂಬಿರಿ. ಅಲ್ಲೇ ಕೆಳಗೆ ನಿಮ್ಮ ಎಂಪ್ಲಾಯೀ ಕೆಟಗರಿ, ರೆಸಿಡೆಂಟ್/ಎನ್ನಾರೈ, ಟ್ಯಾಕ್ಸ್ ರೀಫಂಡ್/ಪಾವತಿ ಬಾಕಿ ಇದೆ ಯಾ ಇಲ್ಲ, ಈ ಸಲ್ಲಿಕೆಯು ಕೊನೆ ದಿನಾಂಕದ ಮೊದಲೋ, ನಂತರವೋ ಅಥವಾ ಇನ್ಯಾವುದಾದರು ಕಾರಣಕ್ಕೆ ಪರಿಷ್ಕೃತವೋ, ಅಲ್ಲದೆ ನೀವು ಪೋರ್ಚುಗೀಸ್ ಕಾನೂನಿನಡಿ ಬರುತ್ತೀರಾ? ಇತ್ಯಾದಿ ವಿವರಗಳನ್ನು ಆಯ್ದು ನಮೂದಿಸಬೇಕು.
2 ಆದಾಯದ ವಿವರಗಳು: ಈ ಪುಟದಲ್ಲಿ ಸಂಬಳದ ಆದಾಯ, ಗೃಹ ಸಂಬಂಧಿ ಆದಾಯ ಹಾಗೂ ಇತರ ಆದಾಯಗಳ ಮೊತ್ತವನ್ನು ನಮೂದಿಸಿರಿ. ಕಂಪ್ಯೂಟರ್ ಗ್ರಾಸ್ ಟೋಟಲ್ ಆದಾಯವನ್ನು ಅದರಷ್ಟಕ್ಕೇ ಲೆಕ್ಕ ಹಾಕಿ ನಮೂದಿಸುತ್ತದೆ. ಅದರ ಕೆಳಗೆ ಆದಾಯ ತೆರಿಗೆ ರಿಯಾಯಿತಿಗಾಗಿ ಮಾಡಿದ ಎಲ್ಲಾ ಹೂಡಿಕೆ ಖರ್ಚುಗಳನ್ನೂ ನಮೂದಿಸಿ. ಇದರಲ್ಲಿ 80ಸಿ, ಸಿಸಿಸಿ, ಸಿಸಿಡಿ(1)/(1ಬಿ)/(2), ಸಿಸಿಜಿ, ಡಿ, ಡಿಡಿ, ಡಿಡಿಬಿ, ಇ, ಟಿಟಿಎ, ಯು, ಇತ್ಯಾದಿ ಎಲ್ಲಾ ಕರವಿನಾಯಿತಿಯ ಸೆಕ್ಷನ್ನುಗಳಡಿಯಲ್ಲಿ ಮಾಡಿದ ಹೂಡಿಕೆ/ಪಾವತಿ ನಮೂದಿಸಿ. ಅದರ ಕೆಳಭಾಗದಲ್ಲಿ ಕಂಪ್ಯೂಟರ್ ನಿಮ್ಮ ಕರ ಲೆಕ್ಕ ಹಾಕಿ ಅದರ ಮೊತ್ತವನ್ನು ನಮೂದಿಸುತ್ತದೆ. ಮೂಲ ಕರ, ಸೆಸ್, ಬಡ್ಡಿ ಇತ್ಯಾದಿ ವಿವರಗಳು ಸಿಗುತ್ತವೆ.
3 ಕರ ವಿವರಗಳು: ಈ ಪುಟದಲ್ಲಿ ಇದುವರೆಗೆ ಕಟ್ಟಿದ ಆದಾಯ ಕರ – ಟಿಡಿಎಸ್, ಎಡ್ವಾನ್ಸ್ ಟ್ಯಾಕ್ಸ್ ಹಾಗೂ ಸೆಲ್ಫ್ ಅಸೆಸೆ¾ಂಟ್ ಟ್ಯಾಕ್ಸ್ – ಮತ್ತು ಅವುಗಳ ಬಿಎಸ್‌ಆರ್ ಕೋಡ್, ಚಲನ್ ನಂಬರ್, ದಿನಾಂಕ, ಮೊತ್ತ ಇತ್ಯಾದಿಗಳನ್ನು ನಮೂದಿಸಿ. ಈ ವಿವರಗಳನ್ನು ನಮೂದಿಸುವ ಮೊದಲು, ಫಾರ್ಮ್ 16, 16ಏ ಹಾಗೂ 26ಎಎಸ್‌ಗಳನ್ನೂ ಪರಿಶೀಲಿಸಿಕೊಳ್ಳಿ. ಅವುಗಳಲ್ಲಿ ಆ ವಿವರಗಳು ಇರುತ್ತವೆ.
4 80ಜಿ: ಈ ಸೆಕ್ಷನ್‌ಗೆ ಪ್ರತ್ಯೇಕ ಪುಟ ಮೀಸಲಿಟ್ಟಿದ್ದಾರೆ. ನೀವು ಕರ ವಿನಾಯಿತಿ ಉಳ್ಳ ದೇಣಿಗೆ ಕೊಟ್ಟಿದ್ದಿದ್ದರೆ ಅದರ ವಿವರಗಳನ್ನು ಇಲ್ಲಿ ತುಂಬಬೇಕು. 100% ಹಾಗೂ 50% ವಿನಾಯಿತಿಗಳುಳ್ಳ (ಮಿತಿ ಇರುವ ಹಾಗೂ ಮಿತಿ ಇಲ್ಲದ) ಎಲ್ಲಾ ದೇಣಿಗೆಗಳ ವಿವರಗಳನ್ನು (ಹೆಸರು, ವಿಳಾಸ, ಪ್ಯಾನ್ ನಂಬರ್, ಮೊತ್ತ) ಇಲ್ಲಿ ತುಂಬಿ.
5ಕಟ್ಟಿದ ಕರ ಮತ್ತು ಪರಿಶೀಲನೆ: ಈ ಪುಟದಲ್ಲಿ ನೀವು ಕಟ್ಟಿದ ಒಟ್ಟು ಕರಮೊತ್ತ, ಕಟ್ಟಬೇಕಾದ ಮೊತ್ತ, ಬಾಕಿ /ರೀಫಂಡ್ ಮೊತ್ತ ಇತ್ಯಾದಿಗಳ ವಿವರಗಳು ಅದರಷ್ಟಕ್ಕೇ ಲೆಕ್ಕ ಹಾಕಿ ಬರುತ್ತವೆ. ಅದಾದ ಬಳಿಕ ಈ ಪುಟದಲ್ಲಿ ನಿಮ್ಮ ಇಡೀ ವರ್ಷದ ಕರಮುಕ್ತ ಆದಾಯದ ಬಗ್ಗೆ ವಿವರಗಳನ್ನು ತುಂಬಬೇಕಾಗುತ್ತದೆ. ರೂ 5,000 ಮೀರದ ಕೃಷಿ ಆದಾಯ ಹಾಗೂ ಸೆಕ್ಷನ್ 10(38) ಅಡಿಯಲ್ಲಿ ಬರುವ ದೀರ್ಘಕಾಲಿಕ ಕರಮುಕ್ತ ಶೇರು ಆದಾಯ ಹಾಗೂ ಸೆಕ್ಷನ್ 10(34) ಅಡಿಯಲ್ಲಿ ಬರುವ ಕರಮುಕ್ತವಾದ ಡಿವಿಡೆಂಡ್ ಆದಾಯ ಮತ್ತು ಇನ್ನಿತರ ಯಾವುದೇ ಕರಮುಕ್ತ ಆದಾಯದ ಬಗ್ಗೆ ನಮೂದಿಸಬೇಕು. ಇವಗಳನ್ನು ಕರಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಕೇವಲ ಮಾಹಿತಿಗಾಗಿ ಇವುಗಳನ್ನು ತುಂಬತಕ್ಕದ್ದು. ಭವಿಷ್ಯತ್ತಿನಲ್ಲಿ ನಿಮ್ಮಲ್ಲಿರುವ ಒಟ್ಟಾರೆ ಧನ ಸಂಪತ್ತನ್ನು ಸಮರ್ಥಿಸಲು ಈ ಮಾಹಿತಿಗಳು ಸಹಾಯವಾದೀತು. ಅಷ್ಟೇ ಅಲ್ಲ, ಇನ್ನೂ ಕೆಳಗೆ ಕಳೆದ ವಿತ್ತ ವರ್ಷದಲ್ಲಿ ಚಾಲನೆಯಲ್ಲಿ ಇದ್ದ ನಿಮ್ಮ ಎಲ್ಲಾ ಎಸ್‌ಬಿ ಖಾತೆಗಳ ನಂಬರ್, ಬ್ಯಾಂಕ್ ಹೆಸರು, ಕೋಡ್ ನಮೂದಿಸಿ. ಖಾತೆಯಲ್ಲಿನ ಮೊತ್ತವನ್ನು ತುಂಬುವ ಅವಶ್ಯಕತೆ ಇಲ್ಲ. ರೀಫಂಡ್ ಬರುವುದಿದ್ದರೆ ಯಾವ ಖಾತೆಗೆ ಬರಬೇಕು ಎನ್ನುವುದನ್ನೂ ಗುರುತಿಸಿರಿ. ಈ ವರ್ಷ ಹೊಸತೆಂಬಂತೆ ಡಿಮೊನೆಟೈಸೇಶನ್ ಅವಧಿಯಲ್ಲಿ (9.11.16- 31.12.16) ಒಟ್ಟು ನಗದು ರೂ 2 ಲಕ್ಷ ಮೀರಿ ಬ್ಯಾಂಕ್ ಖಾತೆಗಳಲ್ಲಿ ತುಂಬಿದ್ದರೆ ಮಾತ್ರ ಅಂತಹ ಮೊತ್ತಗಳನ್ನು ಆಯಾ ಖಾತೆಯಡಿಯಲ್ಲಿ ನಮೂದಿಸತಕ್ಕದ್ದು. ಎಲ್ಲದಕ್ಕೂ ಕೊನೆಗೆ ನಿಮ್ಮ ಹೆಸರು, ತಂದೆಯ ಹೆಸರು, ಸ್ಥಳ, ದಿನಾಂಕ ನಮೂದಿಸಿ ಮಾಹಿತಿಗಳನ್ನು ದೃಢೀಕರಿಸಿ. ಈ ಮಾಹಿತಿಗಳನ್ನು ತುಂಬುತ್ತಿರುವಾಗ ಕೆಳಗೆ ಕಾಣುವ “ಸೇವ್’ ಬಟನ್ ಅನ್ನು ಅಗಾಗ್ಗೆ ಒತ್ತಿ ಮಾಹಿತಿಗಳನ್ನು ಉಳಿಸಿಕೊಳ್ಳಿ. ಎಲ್ಲಾ ಮಾಹಿತಿ ತುಂಬಿ ಸಬ್ಮಿಟ್ ಬಟನ್ ಒತ್ತಿ.
ವೆರಿಫಿಕೇಶನ್/ದೃಢೀಕರಣ: ಸಬ್ಮಿಟ್ ಬಟನ್ ಒತ್ತಿದಾಗ ನಿಮ್ಮ ಹೇಳಿಕೆ ಆದಾಯ ತೆರಿಗೆ ಇಲಾಖೆಯ ಕಂಪ್ಯೂಟರಿನಲ್ಲಿ ಸಲ್ಲಿಕೆಯಾಗಿ ನಿಮಗೊಂದು ಟ್ರಾನ್ಸಾಕ್ಷನ್ ನಂಬರನ್ನು ನೀಡುತ್ತದೆ. ಅಲ್ಲದೆ, ನಿಮ್ಮ ಇ-ಮೈಲ್‌ಗೆ ರಶೀದಿ ಫಾರ್ಮ್ ಆದ ಫಾರ್ಮ್-ವಿಯನ್ನು ಹುಟ್ಟು ಹಾಕುತ್ತದೆ. ಈ ಫಾರ್ಮ್-ವಿ ಅನ್ನು ದೃಢೀಕರಿಸಬೇಕು. ಇದಕ್ಕಾಗಿ ಕೆಲವು ಆನ್-ಲೈನ್ ಹಾದಿಗಳಿವೆ. 1)ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ನಂಬರಿಗೆ ಒಟಿಪಿ ಹೋಗುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ವೆರಿಫಿಕೇಶನ್ ಸಂಪೂರ್ಣವಾಗುತ್ತದೆ. 2) ಕರ ಇಲಾಖೆ ಕಳಿಹಿಸುವ ಇವಿಸಿ ಕೋಡ್ ಅನ್ನು ನಿಮ್ಮ ನೆಟ್ ಬ್ಯಾಂಕಿಂಗ್, ಬ್ಯಾಂಕ್ ಖಾತೆ, ಎಟಿಎಂ, ಡಿಮ್ಯಾಟ್ ಖಾತೆ ಇತ್ಯಾದಿಗಳ ಮೂಲಕ ಪಡೆದುಕೊಳ್ಳಲು ಬರುತ್ತದೆ. ಈ ರೀತಿಯ ಆನ್‌ಲೈನ್ ಪದ್ಧತಿ ಸಾಧ್ಯವಾಗದವರು ವಿ ಫಾರ್ಮಿನ ಅಚ್ಚು ತೆಗೆದು ಸಹಿ ಹಾಕಿ ಅದರಲ್ಲಿ ನೀಡಿದ ಬೆಂಗಳೂರಿನ ವಿಳಾಸಕ್ಕೆ ಅದನ್ನು 120 ದಿನಗಳೊಳಗೆ ಕಳುಹಿಸಿರಿ. ದೃಢೀಕರಣದ ಬಳಿಕವೇ ನಿಮ್ಮ ಸಲ್ಲಿಕೆ ಸಂಪೂರ್ಣವಾಗುತ್ತದೆ.
ಇಷ್ಟು ವಿವರಣೆ ನೀಡಿದ ಬಹೂರಾನಿ ಮಾವಯ್ಯನಿಗೆ ಚಹ ತಯಾರಿ ನಡೆಸಲು ಕಿಚನ್ ಒಳಕ್ಕೆ ಓಡಿದಳು.
ಜಯದೇವ ಪ್ರಸಾದ ಮೊಳೆಯಾರ